ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ಕೊರಿಯಾ ಪ್ರವಾಕ್ಕೆ ಭಾರತ ಮಹಿಳಾ ಪಡೆಗೆ ರಾಣಿ ಸಾರಥ್ಯ

Rani Rampal to lead 18-member Indian womens hockey team in Korea tour

ಹೊಸದಿಲ್ಲಿ, ಮೇ 10: ಹಾಕಿ ಇಂಡಿಯಾ ಮುಂಬರುವ ಕೊರಿಯಾ ಪ್ರವಾಸಕ್ಕೆ 18 ಮಂದಿ ಸದಸ್ಯರ ಭಾರತ ಮಹಿಳಾ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಿದ್ದು, ಅನುಭವಿ ಆಟಗಾರ್ತಿ ರಾಣಿ ರಾಂಪಾಲ್‌ ನಾಯಕಿ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಹಾಕಿ: ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತಕ್ಕೆ ಜಯ

ಮೇ 20ರಂದು ಆರಂಭವಾಗಲಿರುವ 3 ಟೆಸ್ಟ್‌ ಪಂದ್ಯಗಳ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ಗೋಲ್‌ಕೀಪರ್‌ ಸವಿತಾ ಉಪನಾಯಕಿಯ ಜವಾಬ್ದಾರಿ ಪಡೆದಿದ್ದಾರೆ. ಗಾಯದ ಸಮಸ್ಯೆ ಕಾರಣ ಅವರು ಇತ್ತೀಚಿನ ಮಲೇಷ್ಯಾ ಪ್ರವಾಸದಿಂದ ಹೊರಗುಳಿದಿದ್ದರು. ಇದೀಗ ಕೋಚ್‌ ಸೋರ್ಡ್‌ ಮರಿಜಿನ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಕೊರಿಯಾ ಪ್ರವಾಸ ಕೈಗೊಳ್ಳಲಿದೆ.

 ಟೆನಿಸ್‌: ರೋಜರ್‌ ಫೆಡರರ್‌ ಕಿರೀಟಕ್ಕೆ ಮತ್ತೊಂದು ಗರಿ ಟೆನಿಸ್‌: ರೋಜರ್‌ ಫೆಡರರ್‌ ಕಿರೀಟಕ್ಕೆ ಮತ್ತೊಂದು ಗರಿ

ಜೂ 15ರಿಂದ 23ರವರೆಗೆ ಜಪಾನ್‌ನ ಹಿರೋಶಿಮಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಮಹಿಳಾ ಸೀರೀಸ್‌ ಫೈನಲ್ಸ್‌ ಟೂರ್ನಿಗೆ ನೆರವಾಗುವ ಉದ್ದೇಶದಿಂದ ಈ ಪ್ರವಾಸ ಕೈಗೊಳ್ಳುತ್ತಿರುವ ಭಾರತ ಮಹಿಳಾ ತಂಡ ಶ್ರೇಷ್ಠ ಲಯ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಂದಹಾಗೆ ಈ ವರ್ಷ ಸ್ಪೇನ್‌, ಐರ್ಲೆಂಡ್‌ ಪ್ರವಾಸಗಳನ್ನು ಕೈಗೊಂಡಿರುವ ಭಾರತ ತಂಡ 2 ಪಂದ್ಯಗಳನ್ನು ಗೆದ್ದರೆ, ಮೂರರಲ್ಲಿ ಡ್ರಾ ಮಾಡಿಕೊಂಡು ಮತ್ತೊಂದು ಪಂದ್ಯದಲ್ಲಿ ಸೋಲನುಭವಿಸಿದೆ. ಇನ್ನು ಇತ್ತೀಚೆಗೆ ಅಂತ್ಯಗೊಂಡ ಮಲೇಷ್ಯಾ ವಿರುದ್ಧದ ಸರಣಿಯಲ್ಲಿ 4-0 ಅಂತರದ ಜಯ ದಾಖಲಿಸಿತ್ತು.

 ಮಹಾನಗರಿ ಬೆಂಗಳೂರಿನ ಟಿಸಿಎಸ್‌ ವಿಶ್ವ 10K ರೇಸ್‌ಗೆ ಕ್ಷಣಗಣನೆ ಮಹಾನಗರಿ ಬೆಂಗಳೂರಿನ ಟಿಸಿಎಸ್‌ ವಿಶ್ವ 10K ರೇಸ್‌ಗೆ ಕ್ಷಣಗಣನೆ

"ರಾಣಿ ಮತ್ತು ಗುರುಜಿತ್‌ ಕೌರ್‌ ಅವರಂತಹ ಅನುಭವಿ ಆಟಗಾರ್ತಿಯರು ತಂಡಕ್ಕೆ ಮರಳಿರುವುದು ಸಂತಸ ನೀಡಿದೆ. ಎಫ್‌ಐಎಚ್‌ ಮಹಿಳಾ ಸೀರೀಸ್‌ ಫೈನಲ್‌ಗೂ ಮುನ್ನ ಅಗತ್ಯದ ಅಭ್ಯಾಸ ಪಡೆಯಲು ಈ ಪ್ರವಾಸ ನೆರವಾಗಲಿದೆ,'' ಎಂದು ಕೋಚ್‌ ಮರಿಜಿನ್‌ ಹೇಳಿದ್ದಾರೆ.

ಕೊರಿಯಾ ಪ್ರವಾಸಕ್ಕೆ ಪ್ರಕಟಿಸಲಾದ ಭಾರತ ಮಹಿಳಾ ತಂಡ ಇಂತಿದೆ

ಗೋಲ್‌ಕೀಪರ್ಸ್‌: ಸವಿತಾ ಮತ್ತು ರಜಿನಿ ಎತಿಮರ್ಪು

ಡಿಫೆಂಡರ್ಸ್‌: ಸಲಿಮಾ ಟೆಟೆ, ಸುನಿತಾ ಲಾಕ್ರಾ, ದೇಪ್‌ ಗ್ರೇಸ್‌ ಎಕ್ಕಾ, ಕರಿಷ್ಮಾ ಯಾದವ್‌, ಗುರುಜಿತ್‌ ಕೌರ್‌, ಸುಶೀಲಾ ಚಾನು.

ಮಿಡ್‌ಫೀಲ್ಡರ್ಸ್‌: ಮೋನಿಕಾ, ನವಜೋತ್‌ ಕೌರ್‌, ನಿಕ್ಕಿ ಪ್ರಧಾನ್‌, ನೇಹಾ ಗೋಯಲ್‌, ಲಿಲಿಮಾ ಮಿಂಜ್‌.

ಫಾರ್ವರ್ಡ್ಸ್‌: ರಾಣಿ ರಾಂಪಾಲ್‌ (ನಾಯಕಿ), ವಂದನಾ ಕಠಾರಿಯಾ, ಲಾಲ್ರೆಮ್ಸಿಯಾಮಿ, ಜ್ಯೋತಿ, ನವನೀತ್‌ ಕೌರ್‌.

Story first published: Friday, May 10, 2019, 18:49 [IST]
Other articles published on May 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X