ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ರಾಣಿ ಮುಡಿಗೆ 'ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್' ಕಿರೀಟ

Rani Rampal wins ‘World Games Athlete of the Year’ award

ನವದೆಹಲಿ, ಜನವರಿ 31: ಭಾರತದ ಮಹಿಳಾ ಹಾಕಿ ತಂಡ ನಾಯಕಿ ರಾಣಿ ರಾಂಪಾಲ್‌ಗೆ ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್ (World Games Athlete of the Year) ಪ್ರಶಸ್ತಿ ದೊರೆತಿದೆ. ವಿಶ್ವದ ಹಾಕಿ ಆಟಗಾರರಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ರಾಣಿ ಪಾತ್ರರಾಗಿದ್ದಾರೆ.

ರೋನಿತ್ ಮೋರೆ, ಅಭಿಮನ್ಯು ಮಿಂಚು: ರೈಲ್ವೇಸ್ ಸದೆಬಡಿದ ಕರ್ನಾಟಕರೋನಿತ್ ಮೋರೆ, ಅಭಿಮನ್ಯು ಮಿಂಚು: ರೈಲ್ವೇಸ್ ಸದೆಬಡಿದ ಕರ್ನಾಟಕ

ವಿಶ್ವದಾದ್ಯಂತ ಸುಮಾರು 20 ದಿನಗಳ ಮತದಾನ ನಡೆಸಿದ ಬಳಿಕ ಗುರುವಾರ (ಜನವರಿ 30) ವರ್ಲ್ಡ್ ಗೇಮ್ಸ್ ಈ ಪ್ರಶಸ್ತಿಗಾಗಿ ರಾಣಿ ಹೆಸರನ್ನು ಘೋಷಿಸಿದೆ. 'ಭಾರತದ ಹಾಕಿ ಸೂಪರ್‌ಸ್ಟಾರ್ ರಾಣಿ, ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ವರ್ಲ್ಡ್ ಗೇಮ್ಸ್ ತನ್ನ ಸ್ಟೇಟ್‌ಮೆಂಟ್‌ನಲ್ಲಿ ಹೇಳಿಕೊಂಡಿದೆ.

'ಪ್ರಶಸ್ತಿಗಾಗಿ ನಡೆದ ಮತದಾನದಲ್ಲಿ ಆಕರ್ಷಕ 199,477 ಮತಗಳಿಂದ ರಾಣಿ, 'ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್' ರೇಸ್‌ ಗೆದ್ದಿದ್ದಾರೆ. ಜನವರಿಯಲ್ಲಿ ನಡೆದ ಮತದಾನದಲ್ಲಿ ವಿಶ್ವದ ಕ್ರೀಡಾಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ್ತಿಯನ್ನು ಆರಿಸಿದ್ದಾರೆ. ಮತದಾನದಲ್ಲಿ ಒಟ್ಟಾರೆ 705,610 ಓಟ್‌ಗಳು ಲಭಿಸಿದ್ದವು,' ಎಂದು ವರ್ಲ್ಡ್ ಗೇಮ್ಸ್ ಮಾಹಿತಿ ನೀಡಿದೆ.

Story first published: Friday, January 31, 2020, 11:49 [IST]
Other articles published on Jan 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X