ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಚಿನ್ನ ಗೆಲ್ಲಲು ಕಾತರರಾಗಿದ್ದೇವೆ'

Rupinder says Indian mens hockey team looking to grab gold medal in Jakarta

ನವದೆಹಲಿ, ಜುಲೈ 24: ಕಳೆದ ವಾರ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತದ ಖ್ಯಾತ ಡ್ರ್ಯಾಗ್ ಫ್ಲಿಕ್ಕರ್ ರೂಪೀಂದರ್ ಪಾಲ್ ಸಿಂಗ್, ಭಾರತ ಪುರುಷರ ಹಾಕಿ ತಂಡ ಮುಂಬರಲಿರುವ ಏಷ್ಯಾನ್ ಗೇಮ್ಸ್ ನಲ್ಲಿ ಫೈನಲ್ ಪ್ರವೇಶಿಸಿ ಬಂಗಾರ ಗೆಲ್ಲಲು ಕಾತರಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಷ್ಯನ್ ಗೇಮ್ಸ್ 2018: ಪ್ರಮುಖ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿಏಷ್ಯನ್ ಗೇಮ್ಸ್ 2018: ಪ್ರಮುಖ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ

'ವೈಯಕ್ತಿಕವಾಗಿ ನನಗನ್ನಿಸಿದಂತೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ನ್ಯೂಜಿಲ್ಯಾಂಡ್ ನಂತ ತಂಡದೆದುರು ಈ ಟೂರ್ನಿಯಲ್ಲಿ ಸ್ಪರ್ಧೆಗಿಳಿಯುತ್ತಿದ್ದೇವೆ ಎಂಬುದೇ ಪ್ರಮುಖ ವಿಚಾರ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶ ಕೈತಪ್ಪಿತ್ತು. ಆದರೆ ಜಕರ್ತಾದಲ್ಲಿ ನಡೆಯುವ ಏಷ್ಯಾನ್ ಗೇಮ್ಸ್ ನಲ್ಲಿ ನನ್ನ ಆಟದ ಲಯವನ್ನು ಮತ್ತೆ ಕಂಡುಕೊಳ್ಳಲಿದ್ದೇನೆ ಎಂಬ ಭರವಸೆಯಿದೆ' ಎಂದು ರೂಪೀಂದರ್ ತಿಳಿಸಿದರು.

ರೂಪೀಂದರ್, ಕಳೆದ ಏಪ್ರಿಲ್ ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಡೆಯಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅನಂತರ ಕಾಲುನೋವಿಗೆ ತುತ್ತಾಗಿದ್ದರಿಂದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ನೆದರ್ಲ್ಯಾಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ರೂಪೀಂದರ್ ಪಾಲ್ಗೊಂಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಎದುರು ರನ್ನರ್ ಪ್ರಶಸ್ತಿ ಗೆದ್ದಿತ್ತು.

'ಒಬ್ಬ ಆಟಗಾರನಾಗಿ ತನ್ನ ತಂಡ ಆಡುತ್ತಿರುವುದನ್ನು ಟಿವಿಯೆದುರು ಕುಳಿತು (ಚಾಂಪಿಯನ್ಸ್ ಟ್ರೋಫಿ ಕುರಿತು) ನೋಡಲು ಬಹಳ ಬೇಸರವಾಗಿತ್ತು. ಆದರೆ ಗಾಯಕ್ಕೀಡಾಗಿದ್ದರಿಂದ ತಂಡದಿಂದ ಹೊರಗುಳಿಯುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ ಮರಳಿ ಕಣಕ್ಕಿಳಿದಿದ್ದೇನೆ. ಮುಂದಿನ ಏಷ್ಯನ್ ಗೇಮ್ಸ್ ನಲ್ಲೂ ಭಾರತ ಪರ ಆಡಲಿದ್ದೇನೆ' ಎಂದು ರೂಪೀಂದರ್, ನ್ಯೂಜಿಲ್ಯಾಂಡ್ ವಿರುದ್ಧ ಭಾರತ 3-0 ಅಂತರದಿಂದ ಸರಣಿ ಗೆದ್ದಾಗ ಪ್ರತಿಕ್ರಿಯಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Story first published: Tuesday, July 24, 2018, 19:53 [IST]
Other articles published on Jul 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X