ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 4ರ ಭಾರತೀಯ ಆಟಗಾರರ ವೇಳಾಪಟ್ಟಿ

ಟೋಕಿಯೋ, ಆಗಸ್ಟ್ 3: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಗಾಗಲೇ 13 ದಿನಗಳ ಕ್ರೀಡಾಕೂಟ ಅಂತ್ಯವಾಗಿದೆ. ಸಾಕಷ್ಟು ವಿಭಾಗಗಳ ಎಲ್ಲಾ ಹಂತಗಳು ಕೂಡ ಮುಕ್ತಾಯವಾಗಿದೆ. ಈವರೆಗಿನ ಪ್ರದರ್ಶನದಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲುವಲ್ಲಿ ಹಿಂದುಳಿದಿರುವುದು ಸ್ಪಷ್ಟವಾಗುತ್ತದೆ. ಆರಂಭದ 13 ದಿನಗಳಲ್ಲಿ ಭಾರತ ಈವರೆಗೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಮಾತ್ರವೇ ಗಳಿಸಲು ಸಾಧ್ಯವಾಗಿದೆ. ಮೀರಾಬಾಯಿ ಚಾನು ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕವನ್ನು ಮುಡಿಗೇರಿಸಿದರೆ ನಂತರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಕೆಲ ಕ್ರೀಡಾಪಟುಗಳು ಪ್ರಶಸ್ತಿ ಸುತ್ತಿಗೆ ತಲುಪಿದ್ದರಾದರೂ ಪದಕ ಗೆಲ್ಲುವಲ್ಲಿ ವಿಫಲರಾದರು.

ಮಂಗಳವಾರವೂ ಇದೇ ರೀತಿಯ ನಿರಾಸೆಯನ್ನು ಭಾರತ ಅನುಭವಿಸಿತು. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯಂತ ಹೆಚ್ಚಿನ ಭರವಸೆ ಮೂಡಿಸಿದ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಸೋಲು ಕಂಡಿತು. ಅದ್ಭುತ ಆಟವನ್ನು ಪ್ರದರ್ಶಿಸಿದ ಭಾರತ ಮೊದಲಾರ್ಧದಲ್ಲಿ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಬಳಿಕ ಆಘಾತಕಾರಿ ರೀತಿಯಲ್ಲಿ ಬೆಲ್ಜಿಯಂ ಆಟಗಾರರು ಮೇಲುಗೈ ಸಾಧಿಸಿದರು. ಅಂತಿಮವಾಗಿ 5-2 ಅಂತರದಿಂದ ನಂಬರ್ 2 ಶ್ರೇಯಾಂಕಿತ ಬೆಲ್ಜಿಯಂ ತಂಡ ಭಾರತವನ್ನು ಮಣಿಸಿದೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಚಿನ್ನದ ಪದ ಗಳಿಸುವ ಅವಕಾಶವನ್ನು ಭಾರತ ತಪ್ಪಿಸಿಕೊಂಡಿದೆ. ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತಕ್ಕೆ ಇನ್ನೂ ಇದೆ.

ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!

ಇನ್ನು ಬುಧವಾರ ಭಾರತದ ಕ್ರೀಡಾಪಟುಗಳು ಕೆಲ ಸ್ಪರ್ಧೆಗಳಲ್ಲಿ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಇದರಲ್ಲಿ ಪ್ರಮುಖವಾಗಿರುವುದು ಮಹಿಳೆಯರ ಹಾಕಿ. ಭಾರತದ ಮಹಿಳಾ ಹಾಕಿ ತಂಡ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತು. ಅರ್ಜೆಂಟಿನಾ ತಂಡ ಸೆಮಿಫೈನಲ್‌ನಲ್ಲಿ ಭಾರತದ ಮಹಿಳೆಯರ ತಂಡಕ್ಕೆ ಕಠಿಣ ಸವಾಲೊಡ್ಡಲಿದೆ.

ಇನ್ನು ವೈಯಕ್ತಿಕ ವಿಭಾಗದಲ್ಲಿ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಪ್ರವೇಶಿಸಿ ಸಾಧನೆ ಮಾಡಿದ್ದಾರೆ. ಇವರ ಸೆಮಿಫೈನಲ್ ಹಂತದ ಸ್ಪರ್ಧೆ ಬುಧವಾರ ನಡೆಯಲಿದೆ. ಟರ್ಕಿಯ ಬುಸೇನಾ ಸುರ್ಮೆನೆಲಿ ಲೋವ್ಲಿನಾಗೆ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಆಗಸ್ಟ್ 4ರಂದು ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
ಗಾಲ್ಫ್
ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 1
ಅದಿತಿ ಅಶೋಕ್, ದೀಕ್ಷಾ ಡಾಗರ್ -
ಸಮಯ: ಬೆಳಿಗ್ಗೆ 4:00 ಗಂಟೆಗೆ

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು -ಗ್ರೂಪ್ ಎ
ನೀರಜ್ ಚೋಪ್ರಾ
ಸಮಯ: ಬೆಳಿಗ್ಗೆ 5:30

ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು, ಗ್ರೂಫ್ ಬಿ
ಶಿವಪಾಲ್ ಸಿಂಗ್
ಸಮಯ: ಬೆಳಿಗ್ಗೆ 7:05

ಬಾಕ್ಸಿಂಗ್

ಮಹಿಳಾ ವೆಲ್ಟರ್ (64-69 ಕೆಜಿ) ಸೆಮಿಫೈನಲ್ 1
ಲೊವ್ಲಿನಾ ಬೊರ್ಗೊಹೈನ್ vs ಬುಸೇನಾ ಸುರ್ಮೆನೆಲಿ (ಟರ್ಕಿ)
ಸಮಯ: ಬೆಳಿಗ್ಗೆ 11:00

ಹಾಕಿ
ಮಹಿಳಾ ಸೆಮಿಫೈನಲ್

ಅರ್ಜೆಂಟೀನಾ vs ಭಾರತ

ಮಧ್ಯಾಹ್ನ 3:30

ರೆಸ್ಲಿಂಗ್

ಪುರುಷರ ಫ್ರೀಸ್ಟೈಲ್ 57 ಕೆಜಿ 1/8 ಫೈನಲ್
ರವಿ ಕುಮಾರ್ ವರ್ಸಸ್ ಅರ್ಬಾನೊ ಟಿಗ್ರೆರೋಸ್ (ಕೊಲಂಬಿಯಾ)
ಮಹಿಳೆಯರ ಫ್ರೀಸ್ಟೈಲ್ 57 ಕೆಜಿ 1/8 ಫೈನಲ್
ಅಂಶು ಮಲಿಕ್ ವಿರುದ್ಧ ಇರಿನಾ ಕುರಾಚ್ಕಿನಾ (ಬೆಲಾರಸ್)

ಪುರುಷರ ಫ್ರೀಸ್ಟೈಲ್ 86 ಕೆಜಿ 1/8 ಫೈನಲ್
ದೀಪಕ್ ಪುನಿಯಾ ವರ್ಸಸ್ ಎಕೆರೆಕೆಮೆ ಅಗಿಯೊಮೊರ್ (ನೈಜೀರಿಯಾ)
ಸಮಯ: ಬೆಳಿಗ್ಗೆ 8:00 ರಿಂದ ಆರಂಭ

For Quick Alerts
ALLOW NOTIFICATIONS
For Daily Alerts
Story first published: Tuesday, August 3, 2021, 18:54 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X