ಒಲಿಂಪಿಕ್ಸ್: ಮಹಿಳೆಯ ಸೆಮಿಫೈನಲ್ ಸೆಣೆಸಾಟಕ್ಕೆ ಕ್ಷಣಗಣನೆ: ಐತಿಹಾಸಿಕ ಸಾಧನೆಗೆ ಸಜ್ಜು

ಟೋಕಿಯೋ, ಆಗಸ್ಟ್ 4: ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು ಇಂದು ಸೆಮಿಫೈನಲ್‌ನಲ್ಲಿ ಸೆಣೆಸಾಡಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ತಂಡ ಒಲಿಂಪಿಕ್ಸ್‌ ಹಾಕಿಯಲ್ಲಿ ಫೈನಲ್ ಪ್ರವೇಶಕ್ಕೆ ಹೋರಾಟ ನಡೆಸಲಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ತಂಡಕ್ಕೆ ಎರಡು ಬಾರಿಯ ಚಿನ್ನದ ಪದಕ ವಿಜೇತ ತಂಡವಾಗಿರುವ ಬಲಿಷ್ಠ ಆಸ್ಟ್ರೇಲಿಯಾ ಸವಾಲೊಡ್ಡಿತ್ತು. ಈ ಸವಾಲನ್ನು ಭಾರತದ ಮಹಿಳೆಯರು ದಿಟ್ಟವಾಗಿ ಎದುರಿಸಿದ್ದು ಆಸಿಸ್ ತಂಡಕ್ಕೆ ಸೋಲುಣಿಸಿದ್ದಾರೆ. ಈ ಮೂಲಕ ಭಾರತದ ಹಾಕಿಯ ಪುರುಷ ಹಾಗೂ ಮಹಿಳೆಯರ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡೊದ್ದವು. ಸೆಮಿಫೈನಲ್‌ನಲ್ಲಿ ಪುರುಷರ ತಂಡ ಸೋಲು ಕಂಡಿದ್ದರೆ ಮಹಿಳೆಯರ ತಂಡ ಇಂದು ಅಗ್ನಿ ಪರೀಕ್ಷೆ ಎದುರಿಸಲಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ಭಾರತೀಯ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ. ಮೊದಲ ಕ್ವಾರ್ಟರ್‌ನಲ್ಲಿಯೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಭಾರತದ ಗುರ್ಜೀತ್‌ಕೌರ್ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ನಂತರ ಆಸ್ಟ್ರೇಲಿಯಾ ತಂಡದ ದಾಳಿಯನ್ನು ತಮ್ಮ ಬಲಿಷ್ಠವಾದ ರಕ್ಷಣೆಯ ಮೂಲಕ ತಡೆಯುತ್ತಲೇ ಸಾಗಿತ್ತು. ಹೀಗೆ ಭಾರತ ಐತಿಹಾಸಿಕ ಸಾಧನೆ ಮಾಡಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇಂದು ಸೆಮಿಫಯನಲ್ ಸೆಣೆಸಾಟವನ್ನು ನಡೆಸಲಿದೆ.

ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ಮುಖಾಮುಖಿ: ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಅರ್ಜೆಂಟಿನಾ ತಂಡ ಮುಖಾಮುಖಿಯಾಗಿದೆ. ಇಂದು ನಡೆಯುವ ಸೆಮಿಫಯನಲ್ ಪಂದ್ಯದಲ್ಲಿ ಎರಡು ತಮಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಲಿದೆ. ಅರ್ಜೆಂಟಿನಾ ತಂಡ ಟೂರ್ನಿಯ ಮತ್ತೊಂದು ಫೆವರೀಟ್ ತಂಡವಾಗಿರುವ ಜರ್ಮನಿಯನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡದುಕೊಂಡಿದೆ.

ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಪುರುಷರ ತಂಡ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸುದೀರ್ಘ ಕಾಲದ ಬಳಿಕ ಅದ್ಭುತ ಪ್ರದರ್ಶನ ನೀಡುತ್ತಾ ಬಂದ ಹಾಕಿ ಪುರುಷರ ತಂಡ ಚಿನ್ನದ ಪದಕದ ನಿರೀಕ್ಷೆ ಮೂಡಿಸಿತ್ತು. ಆದರೆ ಇದಕ್ಕಾಗಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಎದುರಾಲಿ ಬೆಲ್ಜಿಯಂ ತಂಡವನ್ನು ಮಣಿಸಬೇಕಾಗಿತ್ತು. ಮೊದಲಾರ್ಧದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ಭಾರತೀಯ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೂರನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತಂಡದ ವಿರುದ್ಧ ಬೆಲ್ಜಿಯಂ ತಂಡ ಸಂಪೂರ್ಣ ಮೇಲುಗೈ ಸಾಧಿಸಿತು. ಅಂತಿಮವಾಗಿ ಬೆಲ್ಜಿಯಂ 5-2 ಅಂತರದಿಂದ ಭಾರತ ತಂಡವನ್ನು ಮಣಿಸಿತು. ಭಾರತ ಪುರುಷರ ತಂಡ ಇನ್ನು ಕಂಚಿನ ಪದಕಕ್ಕಾಗಿ ಸೆಣೆಸಾಡಲಿದೆ.

ಅರ್ಜೆಂಟಿನಾ ವಿರುದ್ಧ ಎದುರಾಗಲಿದೆ ಕಠಿಣ ಸವಾಲು: ಸೆಮಿಫೈನಲ್‌ನಲ್ಲಿ ಭಾರತ ಮಹಿಳೆಯರ ತಂಡ ಅರ್ಜೆಂಟಿನಾ ತಂಡದ ವಿರುದ್ಧ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟಿನಾ ಜರ್ಮನಿಯ ವಿರುದ್ಧ ನೀಡಿದ ಶಿಸ್ತಿಬದ್ಧ ಪ್ರದರ್ಶನ ತಂಡಕ್ಕೆ ಸವಾಲಾಗಲಿದೆ. ಹೀಗಾಗಿ ಫೈನಲ್ ಪ್ರವೇಶಕ್ಕೆ ಈ ಪಂದ್ಯವನ್ನು ಭಾರತ ಮಹಿಳೆಯರ ತಂಡ ಗೆಲ್ಲಲೇ ಬೇಕಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರ ಮಾಹಿತಿ: ಭಾರತ ಹಾಗೂ ಅರ್ಜೆಂಟಿನಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ ಇಲ್ಲಿದೆ
ಪಂದ್ಯದ ದಿನಾಂಕ: ಭಾರತ ಹಾಗೂ ಅರ್ಜೆಂಟಿನಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಆಗಸ್ಟ್ 4ರಂದು ಬುಧವಾರ ನಡೆಯಲಿದೆ.
ಪಂದ್ಯದ ಸಮಯ: ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಟಿವಿ ಚಾನೆಲ್, ಲೈವ್ ಸ್ಟ್ರೀಮಿಂಗ್: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ. ಅಲ್ಲದೆ ಸೋನಿ ಲಿವ್ ಚಂದಾದಾರರು ನೇರಪ್ರಸಾರ ವೀಕ್ಷಿಸುವ ಅವಕಾಶವಿದೆ. ಜಿಯೋ ಟಿವಿಯಲ್ಲಿಯೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.

For Quick Alerts
ALLOW NOTIFICATIONS
For Daily Alerts
Story first published: Wednesday, August 4, 2021, 14:52 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X