ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಗ್ರೇಟ್ ಬ್ರಿಟನ್ ಎದುರಾಳಿ

Tokyo Olympics: Indias womens hockey team needs create and take opportunities against Britain

ಟೋಕಿಯೋ, ಜುಲೈ, 27: ಭಾರತೀಯ ಮಹಿಳಾ ಹಾಕಿ ತಂಡ ಈ ಬಾರಿಯ ಒಲಿಂಪಿಕ್ಸ್ ಟೂರ್ನಿಯನ್ನು ನೀರಸವಾಗಿ ಆರಂಭಿಸಿದೆ. ಆರಂಭಿಕ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡಿರುವ ಭಾರತೀಯ ವನಿತೆಯರ ತಂಡ ಈಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಗ್ರೇಟ್ ಬ್ರಿಟನ್ ಭಾರತಕ್ಕೆ ಎದುರಾಳಿಯಾಗಿದ್ದು ಈ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲು ಭಾರತೀಯ ವನಿತೆಯರು ಶ್ರಮಿಸಲಿದ್ದಾರೆ.

ಬುಧವಾರ ಭಾರತ ಹಾಗೂ ಗ್ರೇಟ್ ಬ್ರಿಟನ್ ಹಾಕಿ ತಂಡಗಳು ಮುಖಾಮುಖಿಯಾಗಲಿದೆ. ಗ್ರೇಟ್ ಬ್ರಿಟನ್ ತಂಡ ಈ ಬಾರಿಯ ಟೂರ್ನಿಯಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿ. ಆಡಿದ ಎರಡು ಪಂದ್ಯಗಳಲ್ಲಿ ಎರಡು ಒಂದು ಗೆಲುವು ಹಾಗೂ ಒಂದು ಸೋಲಿನ ರುಚಿ ಕಂಡಿದೆ. ಹೀಗಾಗಿ ಒಟ್ಟು ಮೂರು ಅಂಕಗಳೊಂದಿಗೆ ಗ್ರೇಟ್ ಬ್ರಿಟನ್ ಮೂರನೇ ಸ್ಥಾನದಲ್ಲಿದೆ. ಆದರೆ ಭಾರತ ಇನ್ನಷ್ಟೇ ಅಂಕಗಳ ಖಾತೆಯನ್ನು ತೆರೆಯಬೇಕಿದೆ.

ಐಪಿಎಲ್‌ನಂತೆ ಟೋಕಿಯೋ ಒಲಿಂಪಿಕ್ಸ್ ಸ್ಟೇಡಿಯಂನಲ್ಲೂ ನಕಲಿ ಸೌಂಡ್!ಐಪಿಎಲ್‌ನಂತೆ ಟೋಕಿಯೋ ಒಲಿಂಪಿಕ್ಸ್ ಸ್ಟೇಡಿಯಂನಲ್ಲೂ ನಕಲಿ ಸೌಂಡ್!

ಭಾರತದ ವನಿತೆಯರು ಮೊದಲ ಪಂದ್ಯದಲ್ಲಿ ನಂಬರ್ 1 ತಂಡವಾಗಿರುವ ನೆದರ್‌ಲ್ಯಾಂಡ್ ವಿರುದ್ಧ 1-5 ಅಂತರದಿಂದ ಸೋಲು ಕಂಡಿತ್ತು. ಅದಾದ ನಂತರ ಎರಡನೇ ಪಂದ್ಯವನ್ನು ಮೂರನೇ ಶ್ರೇಯಾಂಕದ ಜರ್ಮನಿ ವಿರುದ್ಧ ಆಡಿದ್ದು ಅದರಲ್ಲಿ 0-2 ಅಂಕಗಳ ಅಂತರದಿಂದ ಸೋಲನ್ನು ಕಂಡಿತ್ತು. ಸತತ ಎರಡು ಪಂದ್ಯಗಳಲ್ಲಿ ಭಾರತೀಯ ವನಿತೆಯರು ಅನುಭವಿಸಿದ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಗ್ರೇಟ್ ಬ್ರಿಟನ್ ವಿರುದ್ಧ ಸಾಂಘಿಕ ಪ್ರದರ್ಶನ ನೀಡಿ ತಂಡ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಜರ್ಮನಿಯ ವಿರುದ್ಧದ ಪಂದ್ಯದಲ್ಲೊ ಭಾರತೀಯ ತಂಡ ಗೋಲು ಗಳಿಸುವ ಸಾಕಷ್ಟು ಅವಕಾಶವನ್ನು ಸೃಷ್ಟಿಸಿಕೊಂಡಿತ್ತು. ಆದರೆ ಈ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸಲು ತಂಡ ವಿಫಲವಾಗಿತ್ತು. ಸಣ್ಣ ಸಣ್ಣ ಎಡವಟ್ಟುಗಳು ಭಾರತೀಯ ವನಿತೆಯರಿಗೆ ಸಾಕಷ್ಟು ಹಾನಿ ಮಾಡಿತ್ತು. ಆದರೆ ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡ ಜರ್ಮನಿ ವಿರುದ್ಧ ತೀವ್ರ ಪೈಪೋಟಿಯನ್ನು ನಡೆಸಿತ್ತು.

ಟೋಕಿಯೋ ಒಲಿಂಪಿಕ್ಸ್: ಜಪಾನ್‌ ಬಲಿಷ್ಠೆ ನವೋಮಿ ಒಸಾಕಾಗೆ ಸೋಲುಟೋಕಿಯೋ ಒಲಿಂಪಿಕ್ಸ್: ಜಪಾನ್‌ ಬಲಿಷ್ಠೆ ನವೋಮಿ ಒಸಾಕಾಗೆ ಸೋಲು

ಸತತ ಎರಡು ಸೋಲುಗಳ ನಂತರ ಆರು ತಂಡಗಳಿರುವ ಪೂಲ್ ಎ ವಿಭಾಗದಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ. ಎ ವಿಭಾಗದಲ್ಲಿ ನೆದರ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ ಜರ್ಮನಿ ಎರಡನೇ ಸ್ಥಾನ, ಗ್ರೇಟ್ ಬ್ರಿಟನ್ ಮೂರನೇ ಸ್ಥಾನ, ಐರ್ಲೆಂಡ್ ನಾಲ್ಕು ಹಾಗೂ ದಕ್ಷಿನ ಆಫ್ರಿಕಾ ತಂಡ ಐದನೇ ಸ್ಥಾನದಲ್ಲಿದೆ. ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯ ಭಾರತ ತಂಡಕ್ಕೆ ಮೇಲಿನ ಸ್ಥಾನಕ್ಕೇರಲು ಅತ್ಯುತ್ತಮ ಅವಕಾಶವಾಗಿದೆ.

Story first published: Tuesday, July 27, 2021, 17:15 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X