ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಹಾಕಿಯಲ್ಲಿ ಐತಿಹಾಸಿಕ ಸಾಧನೆಯ ಮೇಲೆ ಭಾರತ ಚಿತ್ತ

Tokyo Olympics: Indian mens hockey team is aiming for historical Olympic semifinal appearance

ಟೋಕಿಯೋ, ಆಗಸ್ಟ್ 1:ವಿಶ್ವ ಹಾಕಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಅನಭಿಷಿಕ್ತ ದೊರೆಯಂತೆ ಮೆರೆದಾಡಿತ್ತು ಭಾರತ. ಈ ಅವಧಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 7 ಚಿನ್ನದ ಪದಕ ಗೆದ್ದ ಸಾಧನೆಯನ್ನು ಭಾರತೀಯ ಹಾಕಿ ತಂಡ ಮಾಡಿತ್ತು. ನಂತರ 1980ರಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆದರೆ ನಂತರ ಮತ್ತೆಂದೂ ಆ ಸಾಧನೆ ಪುನಾರಾವರ್ತಿಸಲು ಸಾಧ್ಯವಾಲೇ ಇಲ್ಲ. ಬಳಿಕ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ ಪದಕ ಗಗನ ಕುಸುಮವಾಗಿದೆ. ಬೇಸರದ ಸಂಗತಿಯೆಂದರೆ ನಂತರದ ಯಾವ ಒಲಿಂಪಿಕ್ಸ್‌ನಲ್ಲಿಯೂ ಭಾರತ ತಂಡ ಕನಿಷ್ಟ ಸೆಮಿಫೈನಲ್ ಹಂತಕ್ಕೆ ತಲುಪುವಲ್ಲಿಯೂ ವಿಫಲವಾಗಿದೆ.

ಆದರೆ ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ನೀಡುತ್ತಿರುವ ಪ್ರದರ್ಶನ ನಿಜಕ್ಕೂ ಅದ್ಭುತವಾಗಿದೆ. ಭಾರತೀಯ ಕ್ರೀಡಾ ಪ್ರೇಮಿಗಳು ಹಾಕಿ ತಂಡದ ಮೇಲೆ ವಿಶೇಷ ಭರವಸೆಯನ್ನಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಭಾರತ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದು ಮಾತ್ರವಲ್ಲ ಗೆದ್ದು ಬೀಗಿದೆ. ಹೀಗಾಗಿ ಪೂಲ್ ಎ ವಿಭಾಗದಲ್ಲಿ ಭಾರತ ಎರಡನೇ ಸ್ಥಾನಿಯಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಈ ಪ್ರದರ್ಶನದ ಮೂಲಕ ಭಾರತ ಮತ್ತೊಮ್ಮೆ ಹಾಕಿಯಲ್ಲಿ ಒಲಿಂಪಿಕ್ಸ್ ಪದಕ ಗಳಿಸುವ ಭರವಸೆ ಮೂಡಿಸಿದೆ. ಈ ಸಾಧನೆ ಸಾಧ್ಯವಾದರೆ ಭಾರತ ಹಾಕಿ ತಂಡದ ಐತಿಹಾಸಿಕ ಸಾಧನೆಯಾಗಿರಲಿದೆ.

1928-64 ಅವಧಿಯಲ್ಲಿ ಏಳು ಚಿನ್ನದ ಪದಕ

1928-64 ಅವಧಿಯಲ್ಲಿ ಏಳು ಚಿನ್ನದ ಪದಕ

ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ತಂಡದಲ್ಲಿ ಭಾರತ ಎಷ್ಟು ಪ್ರಭುತ್ವ ಸಾಧಿಸಿತ್ತೆಂದರೆ 1928-64ರ ಅವಧಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 7 ಬಾರಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು, ಈ ಅವಧಿಯಲ್ಲಿ 1960ರ ಫೈನಲ್ ಪಂದ್ಯದಲ್ಲಿ ಸೋಲು ಕಂಡು ಬೆಳ್ಳಿ ಪದಕವನ್ನು ಗಳಿಸಿಕೊಂಡಿತ್ತು. ಅದಾದ ನಂತರ 1980ರಲ್ಲಿ ಮಾಸ್ಕೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಮತ್ತೆ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆದರೆ ಅದಾದ ಬಳಿಕ ಹಾಕಿ ತಂಡ ಒಲಿಂಪಿಕ್ಸ್ ಪದಕವನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೀನಾಯ ಪ್ರದರ್ಶನ

ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೀನಾಯ ಪ್ರದರ್ಶನ

ಭಾರತ ಹಾಕಿ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೀನಾಯ ಪ್ರದರ್ಶನ ನೀಡಿಕೊಂಡು ಬರುತ್ತಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ ಗೇಮ್ಸ್‌ಗೆ ಭಾರತ ತಂಡ ಅರ್ಹತೆಯನ್ನು ಪಡೆಯುವಲ್ಲಿಯೂ ವಿಫಲವಾಗಿತ್ತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಟೂರ್ನಿಯಲ್ಲಿ ಕೊನೆಯ ಸ್ಥಾನವನ್ನು ಪಡೆದು ಹೊರಬಿದ್ದಿತ್ತು. ಹೀಗೆ ಹಾಕಿ ತಮಡದ ಪರಿಸ್ಥಿತಿ ಮತ್ತಷ್ಟು ಹೀನಾಯವಾಗುತ್ತಲೇ ಸಾಗಿತ್ತು.

ಎರಡು ವರ್ಷಗಳಲ್ಲಿ ತಂಡದಲ್ಲಿ ಸಕಾರಾತ್ಮಕ ಬದಲಾವಣೆ

ಎರಡು ವರ್ಷಗಳಲ್ಲಿ ತಂಡದಲ್ಲಿ ಸಕಾರಾತ್ಮಕ ಬದಲಾವಣೆ

ಭಾರತೀಯ ಹಾಕಿ ತಂಡ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಯನ್ನು ಕಾಣುತ್ತಿದೆ. ಆಸ್ಟ್ರೇಲಿಯಾದ ಗ್ರಹಾಂ ರೈಡ್ ಭಾರತೀಯ ತಂಡದ ಕೋಚ್ ಆಗಿ ನೇಮಕವಾದ ನಂತರ ಭಾರತ ತಂಡದಲ್ಲಿ ಹೊಸ ಹುರುಪು ಕಾಣಿಸುತ್ತಿದೆ. ಭಾರತೀಯ ಆಟಗಾರರಲ್ಲಿ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಹೆಚ್ಚಿಸುವಂತೆ ಮಾಡಿದ್ದು ಆಟಗಾರರೊಂದಿಗಿನ ಬಾಂಧವ್ಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಭಾರತ ಅತ್ಯುತ್ತಮ ತಂಡಗಳ ವಿರುದ್ಧವೂ ಅಷ್ಟೇ ಪರಿಣಾಮಕಾರಿಯಾದ ಪ್ರದರ್ಶನ ನೀಡುವಲ್ಲಿ ಸಫಲವಾಗುತ್ತಿದೆ.

ಈ ಬಾರಿಯ ಪೂಲ್ ಹಂತದಲ್ಲಿ ಭರ್ಜರಿ ಆಟ

ಈ ಬಾರಿಯ ಪೂಲ್ ಹಂತದಲ್ಲಿ ಭರ್ಜರಿ ಆಟ

ಭಾರತ ಈ ಬಾರಿಯ ಒಲಿಂಪಿಕ್ಸ್‌ನ ಪೂಲ್ ಹಂತದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮಾತ್ರ ಭಾರತದ ಭಾರತದ ಲೆಕ್ಕಾಚಾರ ತಪ್ಪಿತ್ತು. 1-7 ಅಂತರದಿಂದ ಆಸ್ಟ್ರೇಲಿಯಾಗೆ ಭಾರತ ಶರಣಾಗಿತ್ತು. ಇದನ್ನು ಹೊರತುಪಡಿಸಿದರೆ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಈಗ ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾನುವಾರ ಗ್ರೇಟ್ ಬ್ರಿಟನ್ ತಂಡ ಭಾರತಕ್ಕೆ ಸವಾಲು ಹಾಕಿದೆ. ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತ ಕಳೆದ ನಾಲ್ಕು ದಶಕಗಳಿಂದ ಸಾಧ್ಯವಾಗದ ಐತಿಹಾಸಿಕ ಸಾಧನೆ ಮರುಕಳಿಸುವ ಭರವಸೆ ಮೂಡಿಸಿದೆ.

Story first published: Sunday, August 1, 2021, 16:26 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X