ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ ಸ್ಟಾರ್ ಆಟಗಾರ್ತಿ ವಂದನಾ ಕಟಾರಿಯಾ ಕುಟುಂಬಕ್ಕೆ ಜಾತಿ ನಿಂದಿಸಿ ವಿಕೃತಿ!

Tokyo Olympics: Men throw casteist slurs at Olympic star Vandana Katariyas family after teams semis loss

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ 2021ರ ಮಹಿಳಾ ಹಾಕಿ ಸೆಮಿಫೈನಲ್‌-1 ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಅರ್ಜೆಂಟೀನಾ ವಿರುದ್ಧ 2-1ರ ಸೋಲನುಭವಿಸಿತ್ತು. ಆಗಸ್ಟ್ 4ರ ಬುಧವಾರ ಈ ಪಂದ್ಯ ನಡೆದಿತ್ತು. ಈ ಪಂದ್ಯ ಮುಗಿದು ಕೆಲವೇ ಕ್ಷಣಗಳಲ್ಲಿ ಭಾರತದಲ್ಲಿ ಆಘಾತಕಾರಿ ಘಟನೆ ನಡೆದಿರುವುದು ವರದಿಯಾಗಿದೆ. ಭಾರತದ ಸ್ಟಾರ್ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಕುಟುಂಬವನ್ನುದ್ದೇಶಿಸಿ ಇಬ್ಬರು ವಿಕೃತಿ ಮನಸ್ಸಿನವರು ಜಾತಿ ನಿಂದಿಸಿರುವುದಾಗಿ ತಿಳಿದು ಬಂದಿದೆ.

ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದು ಇತಿಹಾಸ ಬರೆದ ಭಾರತೀಯ ಹಾಕಿ ತಂಡ!ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದು ಇತಿಹಾಸ ಬರೆದ ಭಾರತೀಯ ಹಾಕಿ ತಂಡ!

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಉತ್ತರಖಂಡ್‌ನ ಹರಿದ್ವಾರದಲ್ಲಿರುವ ವಂದನಾ ಕಟಾರಿಯ ಮನೆಯ ಬಳಿಕ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಬಂದು ಪಟಾಕಿ ಸಿಡಿಸಿ ವಿಕೃತಿ ಮೆರೆದಿದ್ದಾರೆ. ವಂದನಾ ಕುಟುಂಬದವರನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಸೆಮಿಫೈನಲ್‌ನಲ್ಲಿ ಭಾರತದ ಸೋಲಿಗೆ ಆಟಗಾರ್ತಿಯ ಜಾತಿಯೇ ಕಾರಣ ಎಂದು ಜರೆದು ನೋಯಿಸಿದ್ದಾರೆ.

ಪಟಾಕಿ ಹಚ್ಚಿ ಜಾತಿ ನಿಂದನೆ

ಪಟಾಕಿ ಹಚ್ಚಿ ಜಾತಿ ನಿಂದನೆ

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ವಂದನಾ ಕಟಾರಿಯಾರ ಸಹೋದರ, "ಸೆಮಿಫೈನಲ್‌ನಲ್ಲಿ ಭಾರತೀಯ ತಂಡ ಸೋತಿದ್ದಕ್ಕೆ ನಮಗೂ ಬೇಸರವಾಯ್ತು. ಆದರೆ ಪಂದ್ಯದಲ್ಲಿ ನಮ್ಮ ಭಾರತೀಯ ತಂಡ ಉತ್ತಮ ಪೈಪೋಟಿ ನೀಡಿತ್ತು. ಇದು ನಮಗೆ ಹೆಮ್ಮೆ ತರಿಸಿತ್ತು. ಪಂದ್ಯ ಮುಗಿಯುತ್ತಲೇ ತಕ್ಷಣ ನಮ್ಮ ಮನೆಯ ಹೊರಗೆ ಸದ್ದು ಕೇಳಿತು. ನಮ್ಮ ಮನೆಯ ಮುಂದೆ ಯಾರೋ ಪಟಾಕಿ ಹಚ್ಚುತ್ತಿದ್ದರು. ನಾವು ಹೊರಗೆ ಹೋಗಿ ನೋಡಿದಾಗ ಇಬ್ಬರು ನಮ್ಮೂರಿನವರೇ ನಮಗೆ ಗೊತ್ತಿರುವ ಮೇಲ್ಜಾತಿಯವರು ಇದ್ದರು. ಅವರು ನಮ್ಮ ಮನೆಯ ಮುಂದೆ ಕುಣಿಯುತ್ತಿದ್ದರು," ಎಂದು ಹೇಳಿದ್ದಾರೆ.

ಕಟಾರಿಯಾ ಅದ್ಭುತ ಆಟ, ವಿಶೇಷ ದಾಖಲೆ

ಕಟಾರಿಯಾ ಅದ್ಭುತ ಆಟ, ವಿಶೇಷ ದಾಖಲೆ

ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತೀಯ ಮಹಿಳಾ ತಂಡ ಈ ಬಾರಿ ಐತಿಹಾಸಿಕ ಸಾಧನೆ ತೋರಿತ್ತು. ಒಲಿಂಪಿಕ್ಸ್‌ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿ ಈ ಸಾಧನೆ ಮಾಡಿದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಸೆಮಿಫೈನಲ್‌ನಲ್ಲಿ ಸೋತಿರುವ ಭಾರತದ ಮಹಿಳೆಯರಿಗೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯುವುದರಲ್ಲಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಮಹಿಳಾ ತಂಡ ಸೆಮಿಫೈನಲ್‌ ಪ್ರವೇಶಿಸಿದ್ದೇ ವಿಶೇಷ ದಾಖಲೆಯಾಗಿತ್ತು. ಅಷ್ಟೇ ಅಲ್ಲ, ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಹ್ಯಾಟ್ರಿಕ್ ಸಾಧನೆ ತೋರಿದ ಮೊದಲ ಭಾರತೀಯೆ ಎಂಬ ವಿಶೇಷ ದಾಖಲೆ ಕಟಾರಿಯಾ ನಿರ್ಮಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ 'ಎ' ಹಂತದ ಸ್ಪರ್ಧೆಯಲ್ಲಿ ಭಾರತ 4-3ರ ಜಯ ಗಳಿಸಿತ್ತು. ಇದರಲ್ಲಿ ಕಟಾರಿಯಾ 3 ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗುವ ಮೂಲಕ ಗಮನ ಸೆಳೆದಿದ್ದರು.

'ಕ್ರೀಡೆಯಿಂದ ದಲಿತರನ್ನು ಹೊರಗಿಡಿ ಎಂದರು'

'ಕ್ರೀಡೆಯಿಂದ ದಲಿತರನ್ನು ಹೊರಗಿಡಿ ಎಂದರು'

ಮೇಲ್ಜಾತಿಯ ವಿಕೃತಿಯ ನಡೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾಕ್ಕೆ ವಿವರಿಸಿರುವ ಕಟಾರಿಯಾ ಸಹೋದರ, 'ಆ ಮೇಲ್ಜಾತಿಯ ಇಬ್ಬರು ನಮ್ಮ ವಿರುದ್ಧ ಜಾತಿ ನಿಂದನೆ ಮಾಡಿದರು. ಬಹಳಷ್ಟು ದಲಿತರು ತಂಡದಲ್ಲಿ ಇರುವುದರಿಂದಲೇ ಭಾರತೀಯ ತಂಡ ಪಂದ್ಯ ಸೋತಿತು. ಬರೀ ಹಾಕಿ ಮಾತ್ರವಲ್ಲ, ಎಲ್ಲಾ ಕ್ರೀಡೆಗಳಿಂದಲೂ ದಲಿತರನ್ನು ಹೊರಗಿಡಬೇಕು ಎಂದು ಅವರು ಹೇಳುತ್ತಿದ್ದರು. ಆ ಬಳಿಕ ಅವರು ತಮ್ಮ ಬಟ್ಟೆಬಿಚ್ಚಿ ಮತ್ತೆ ಕುಣಿಯಲಾರಂಭಿಸಿದ್ದರು," ಎಂದಿದ್ದಾರೆ.

ಜಾತಿ ನಿಂದಿಸಿದ ಇಬ್ಬರಲ್ಲಿ ಒಬ್ಬನ ಬಂಧನ

ಜಾತಿ ನಿಂದಿಸಿದ ಇಬ್ಬರಲ್ಲಿ ಒಬ್ಬನ ಬಂಧನ

ಮಹಿಳಾ ಹಾಕಿ ತಂಡದಿಂದಾಗಿ ಎಂದೂ ಆಗಿರದ ಅಪರೂಪದ ಸಾಧನೆಗಳಾಗುತ್ತಿದ್ದರೂ, ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರೂ ಜಾತಿಯನ್ನು ಮುಂದಿಟ್ಟು ಅನಾವಶ್ಯಕವಾಗಿ ತಂಡದ ಆಟಗಾರ್ತಿಗೆ ನಿಂದಿಸಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸಿದ್ಕಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿರುವ ಎಲ್‌ಎಸ್ ಬೂತೋಲ ಅವರು ಮಾಹಿತಿ ನೀಡಿದ್ದಾರೆ. "ಜಾತಿ ನಿಂದಿಸಿದ ಇಬ್ಬರಲ್ಲಿ ಒಬ್ಬನನ್ನು ಬಂಧಿಸಲಾಗಿದೆ," ಎಂದು ಬೂತೋಲ ಹೇಳಿದ್ದಾರೆ. ಎಫ್‌ಐಆರ್ ಮುಖೇನ ದೂರು ಇನ್ನಷ್ಟೇ ದಾಖಲಾಗಬೇಕಿದೆ ಎಂದು ತಿಳಿದು ಬಂದಿದೆ. ಅಂದ್ಹಾಗೆ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕಕ್ಕಾಗಿ ಇನ್ನೂ ಒಂದು ಪಂದ್ಯ ನಡೆಯಲಿದ್ದು, ಆಗಸ್ಟ್ 6ರಂದು ಭಾರತ ಮತ್ತು ಗ್ರೇಟ್ ಬ್ರಿಟನ್ ಮುಖಾಮುಖಿಯಾಗಲಿದೆ.

Story first published: Thursday, August 5, 2021, 15:04 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X