ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೂಪೀಂದರ್ ಬಳಿಕ ಒಲಿಂಪಿಕ್ ಹಾಕಿ ಸ್ಟಾರ್ ಬಿರೇಂದ್ರ ಲಾಕ್ರ ಕೂಡ ನಿವೃತ್ತಿ

Tokyo Olympics star Hockey player Birendra Lakra retires from international hockey

ನವದೆಹಲಿ: ಸೆಪ್ಟೆಂಬರ್ 30ರ ಗುರುವಾರ ಅಂತಾರಾಷ್ಟ್ರೀಯ ಹಾಕಿಗೆ ಒಲಿಂಪಿಕ್ ಪದಕ ವಿಜೇತ ರೂಪೀಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭಾರತದ ಮತ್ತೊಬ್ಬ ಸ್ಟಾರ್ ಹಾಕಿ ಆಟಗಾರ ಬಿರೇಂದ್ರ ಲಾಕ್ರ ಕೂಡ ಅಂತಾರಾಷ್ಟ್ರೀಯ ಹಾಕಿ ವೃತ್ತಿ ಬದುಕಿನಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕೊಹ್ಲಿ ವಿರುದ್ಧ ದೂರು ಪ್ರಕರಣ: ವರದಿಯನ್ನು ತಿರಸ್ಕರಿಸಿದ ಬಿಸಿಸಿಐ ಖಜಾಂಚಿಕೊಹ್ಲಿ ವಿರುದ್ಧ ದೂರು ಪ್ರಕರಣ: ವರದಿಯನ್ನು ತಿರಸ್ಕರಿಸಿದ ಬಿಸಿಸಿಐ ಖಜಾಂಚಿ

ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ 2020ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಈ ತಂಡದಲ್ಲಿ ಬಿರೇಂದ್ರ ಲಾಕ್ರ ಕೂಡ ಇದ್ದರು. ಅಲ್ಲದೆ, ರೂಪೀಂದರ್ ಪಾಲ್ ಸಿಂಗ್ ಕೂಡ ಇದ್ದರು. ರೂಪೀಂದರ್ ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಲಾಕ್ರ ಕೂಡ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ಲಾಕ್ರ ಅವರು ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸುತ್ತಿರುವ ಸಂಗತಿಯನ್ನು ಹಾಕಿ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಘೋಷಿಸಿದೆ. ಲಾಕ್ರ ಅವರು 201 ಪಂದ್ಯಗಳಲ್ಲಿ ಭಾರತೀಯ ಹಾಕಿ ತಂಡ ಪ್ರತಿನಿಧಿಸಿದ್ದರು. ಡಿಫೆಂಡರ್ ಆಗಿರುವ ಲಾಕ್ರಗೆ ಈಗ 31ರ ಹರೆಯ.

ಟಿ20 ವಿಶ್ವಕಪ್: ಕೊಹ್ಲಿಗಿಂತ ಈ ಆಟಗಾರನೇ ಅಪಾಯಕಾರಿ; ಪಾಕಿಸ್ತಾನ ತಂಡಕ್ಕೆ ಎಚ್ಚರಿಸಿದ ಮಾಜಿ ಆಟಗಾರಟಿ20 ವಿಶ್ವಕಪ್: ಕೊಹ್ಲಿಗಿಂತ ಈ ಆಟಗಾರನೇ ಅಪಾಯಕಾರಿ; ಪಾಕಿಸ್ತಾನ ತಂಡಕ್ಕೆ ಎಚ್ಚರಿಸಿದ ಮಾಜಿ ಆಟಗಾರ

"ಅತ್ಯುತ್ತಮ ಡಿಫೆಂಡರ್, ಪುರುಷರ ಹಾಕಿ ತಂಡದಲ್ಲಿ ಪ್ರಭಾವಿ ಆಟಗಾರ, ಒಡಿಶಾ ತಂಡದ ಸ್ಟಾರ್ ಬಿರೇಂದ್ರ ಲಾಕ್ರ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ. ಹ್ಯಾಪೀ ರಿಟೈರ್ಮೆಂಟ್ ಲಾಕ್ರಾ," ಎಂದು ಹಾಕಿ ಇಂಡಿಯಾ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಲಾಕ್ರ ಅವರು 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿ ಮತ್ತು ಜಕಾರ್ತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ತಂಡದಲ್ಲೂ ಇದ್ದರು.

Story first published: Thursday, September 30, 2021, 17:28 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X