ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಭಾರತ vs ಅರ್ಜೆಂಟಿನಾ, ಹಾಕಿ: ದಿನಾಂಕ, ಸಮಯ, ನೇರಪ್ರಸಾರ ಮಾಹಿತಿ

Tokyo olympocs: Hockey, India vs Argentina: Date, Time in IST, TV Channel, Live streaming info

ಟೋಕಿಯೋ, ಜುಲೈ 28: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗುರುವಾರ ತನ್ನ ನಾಲ್ಕನೇ ಪಂದ್ಯವನ್ನಾಡಲಿದೆ. ಭಾರತಕ್ಕೆ ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಎದುರಾಳಿಯಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಹಾದಿಯನ್ನು ಸುಗಮಗೊಳಿಸಬೇಕಿದೆ.

ಆಡಿದ ಮೂರು ಪಂದ್ಯಗಳಲ್ಲಿ ಭಾರತ ಎರಡು ಪಂದ್ಯವನ್ನು ಗೆದ್ದಿದ್ದು ಆಸ್ಟ್ರೇಲಿಯಾ ವಿರುದ್ಧದ ಒಂದು ಪಂದ್ಯವನ್ನು ಸೋತಿದೆ. ವಿಶ್ವದ ನಾಲ್ಕನೇ ಶ್ರೇಯಾಂಕಿತ ತಂಡವಾಗಿರುವ ಭಾರತ ಪೂಲ್ ಎ ವಿಭಾಗದಲ್ಲಿ ಈಗ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದ್ದು ಆಡಿದ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ.

ಈ ಬಾರಿಯ ಹಾಕಿ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು ಭಾರತ 3-2 ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ 1-7 ಅಂತರದ ಭಾರೀ ಸೋಲಿ ಅನುಭವಿಸಿತು. ಆದರೆ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನಿಡುವ ಮೂಲಕ ಗೆಲುವಿನ ಹಾದಿಗೆ ಮರಳಿದೆ. ಸ್ಪೇನ್ ವಿರುದ್ಧ 3-0 ಅಂತರದಿಂದ ಭಾರತ ಗೆದ್ದು ಬೀಗಿದೆ.

ಅರ್ಜೆಂಟಿನಾ ತಂಡ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಈಗ 7ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಒಂದು ಗೆಲುವು, ಒಂದು ಸೋಲು ಹಾಗೂ ಒಂದು ಡ್ರಾದೊಂದಿದೆ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಅರ್ಜೆಂಟಿನಾ ತಮಡದ ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಪಂದ್ಯದ ದಿನಾಂಕ: ಜುಲೈ 29, ಗುರುವಾರ
ಪಂದ್ಯದ ಸಮಯ: ಬೆಳಿಗ್ಗೆ 6 ಗಂಟೆಗೆ
ಟಿವಿ ಚಾನೆಲ್: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್‌ಸ್ಟ್ರೀಮಿಂಗ್: ಸೋನಿ ಲಿವ್

Story first published: Wednesday, July 28, 2021, 21:14 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X