ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಸೆಮಿಫೈನಲ್ಸ್‌ ಸನಿಹ ಬೆಂಗಳೂರು

Bangalore Rhinos defeats Mumbai Che Raje by 36-31

ಮೈಸೂರು, ಮೇ 28: ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಸಫಲವಾಗಿರುವ ಬೆಂಗಳೂರು ರೈನೋಸ್‌ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಇಂಟರ್‌ ಝೋನ್‌ ಪಂದ್ಯದಲ್ಲಿ ಮುಂಬೈ ಚೇ ರಾಜೆ ತಂಡವನ್ನು ಮಣಿಸುವ ಮೂಲಕ ನಾಕ್‌ಔಟ್‌ ಹಂತಕ್ಕೆ ಕಾಲಿಡಲು ಮತ್ತೊಂದು ಹೆಜ್ಜೆ ಹತ್ತಿರವಾಗಿದೆ.

<strong>ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಟೂರ್ನಿ ಶೀಘ್ರದಲ್ಲೇ ಆರಂಭ</strong>ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಟೂರ್ನಿ ಶೀಘ್ರದಲ್ಲೇ ಆರಂಭ

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಟಾರ್‌ ರೇಡರ್‌ ವಿಶಾಲ್‌ ಅವರ ಮಿಂಚಿನ ರೇಡ್‌ಗಳೊಂದಿಗೆ ಅಬ್ಬರಿಸಿದ 'ಎ' ಗುಂಪಿನ ದ್ವಿತೀಯ ಸ್ಥಾನಿ ಬೆಂಗಳೂರು ರೈನೋಸ್‌ 36-31 ಅಂಕಗಳಿಂದ 'ಬಿ' ಗುಂಪಿನ ದ್ವಿತೀಯ ಸ್ಥಾನಿ ಮುಂಬೈ ಚೇರಾಜೆ ತಂಡವನ್ನು ಬಗ್ಗುಬಡಿಯಿತು.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಕಳೆದ ಪಂದ್ಯದಲ್ಲಿ 'ಬಿ' ಗುಂಪಿನ ಅಗ್ರಸ್ಥಾನಿ ದಿಲರ್‌ ಡೆಲ್ಲಿಗೆ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತ ನೀಡಿದ್ದ ಬೆಂಗಳೂರು ತಂಡಕ್ಕೆ ಹೊಸ ಆತ್ಮವಿಶ್ವಾಸ ಸಿಕ್ಕಂತಾಗಿದ್ದು, ಮುಂಬೈ ವಿರುದ್ಧದ ಪಂದ್ಯದಲ್ಲಿ ಇದರ ಝಲಕ್‌ ನೀಡಿದೆ.

ನಾಕ್‌ಔಟ್‌ ಸನಿಹ ರೈನೋಸ್‌

ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 5ನೇ ಜಯ ದಕ್ಕಿಸಿಕೊಂಡ ಬೆಂಗಳೂರು ತಂಡ 'ಎ' ಗುಂಪಿನಲ್ಲಿ ಆಡಿದ 9 ಪಂದ್ಯಗಳಿಂದ 5 ಜಯ ಮತ್ತೊಂದು ಟೈ ಹಾಗೂ ಮೂರು ಸೋಲಿನೊಂದಿಗೆ 11 ಅಂಕಗಳನ್ನು ಸಂಪಾದಿಸಿದ್ದು, ತನ್ನ 2ನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಅಲ್ಲದೆ ನಾಕ್‌ಔಟ್‌ ಹಂತಕ್ಕೇರುವ ಅವಕಾಶವನ್ನು ಮತ್ತಷ್ಟು ಬಲ ಪಡಿಸಿಕೊಂಡಿದೆ. ಮತ್ತೊಂದೆಡೆ ಮುಂಬೈ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಿತ್ತಾದರೂ, ತನ್ನ ಪಾಲಿನ ಇನ್ನುಳಿದ ಒಂದು ಪಂದ್ಯದಲ್ಲಿ ಗೆದ್ದು ಉಳಿದ ತಂಡಗಳ ಫಲಿತಾಶದ ಮೇರೆಗೆ ನಾಕ್‌ಔಟ್‌ ಅರ್ಹತೆ ಗಳಿಸುವ ಲೆಕ್ಕಾಚಾರದಲ್ಲಿದೆ. ಮುಂಬೈ 9 ಪಂದ್ಯಗಳಲ್ಲಿ 3 ಗೆಲುವು, 4 ಸೋಲು ಮತ್ತೆರಡು ಟೈ ಫಲಿತಾಶಂಗಳೊಂದಿಗೆ ಒಟ್ಟು 8 ಅಂಕಗಳನ್ನು ಗಳಿಸಿದೆ. 7 ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿರುವ ಚೆನ್ನೈ ಚಾಲೆಂಜರ್ಸ್‌ ತಂಡ ಮುಂಬೈ ತಂಡಕ್ಕೆ ನಾಕ್‌ಔಟ್‌ ಹಂತಕ್ಕೇರಲು ಪ್ರಬಲ ಪೈಪೋಟಿ ನೀಡುತ್ತಿದೆ.

ವಿಶಾಲ್‌ ಮಿಂಚಿನ ರೇಡ್‌

ಇನ್ನು ಪಂದ್ಯದಲ್ಲಿ ಬೆಂಗಳೂರು ತಂಡದ ಪರ ಅದ್ಭುತ ಆಟವಾಡಿದ ವಿಶಾಲ್‌ ಒಟ್ಟಾರೆ 13 ಅಂಕಗಳನ್ನು ಗಳಿಸಿ ಮ್ಯಾಚ್‌ ವಿನ್ನರ್‌ ಎನಿಸಿದರು. ಅವರ ಈ ಸಾಹಸಕ್ಕೆ ಪಂದ್ಯ ಶ್ರೇಷ್ಠ ಗೌರವದ ಜೊತೆಗೆ ಪಂದ್ಯದ ಅತ್ಯುತ್ತಮ ರೇಡರ್‌ ಮತ್ತು ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಪ್ರಶಸ್ತಿಗಳೂ ಲಭ್ಯವಾದವು. ತಮ್ಮ ಸೂಪರ್‌ ರೇಡ್‌ಗಳ ಮೂಲಕ ವಿಶಾಲ್‌ ಮತ್ತೊಮ್ಮೆ ಬೆಂಗಳೂರು ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಡಿಫೆನ್ಸ್‌ ವಿಭಾಗದಲ್ಲಿ ಮಿಂಚಿದ ರೈನೋಸ್‌ ಪಡೆಯ ಆಟಗಾರ ಮನೋಜ್‌ 4 ಅಂಕಗಳನ್ನು ಗಳಿಸಿ ಬೆಸ್ಟ್‌ ಡಿಫೆಂಡರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮುಂಬೈ ಚೇ ರಾಜೆ ಪರ ಮಹೇಶ್‌ ಮಗ್ದುಮ್‌ ಮತ್ತು ಮಣಿವೀರ ಕಾಂತ ಕ್ರಮವಾಗಿ 9 ಮತ್ತು 8 ಅಂಕಗಳನ್ನು ಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಸೆಮಿಫೈನಲ್ಸ್‌ ಲೆಕ್ಕಾಚಾರ

ಬೆಂಗಳೂರು ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ಚೆನ್ನೈ ಚಾಲೆಂಜರ್ಸ್‌ ವಿರುದ್ಧ ಪೈಪೋಟಿ ನಡೆಸಲಿದ್ದು, ಮುಂಬೈ ತಂಡ ಹರಿಯಾಣ ಹೀರೋಸ್‌ ವಿರುದ್ಧ ಕಾದಾಡಲಿದೆ. ರೈನೋಸ್‌ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಜಯ ದಾಖಲಿಸಿದರೆ ಸುಲಭವಾಗಿ ಸೆಮಿಫೈನಲ್ಸ್‌ ಹಂತಕ್ಕೆ ಮುನ್ನಡೆಯಲಿದೆ.

ಕ್ವಾರ್ಟರ್‌ಗಳ ವಿವರ

1ನೇ ಕ್ವಾರ್ಟರ್‌: ಬೆಂಗಳೂರು 09-06 ಮುಂಬೈ

2ನೇ ಕ್ವಾರ್ಟರ್‌: ಬೆಂಗಳೂರು 10-05 ಮುಂಬೈ

3ನೇ ಕ್ವಾರ್ಟರ್‌: ಬೆಂಗಳೂರು 10-08 ಮುಂಬೈ

4ನೇ ಕ್ವಾರ್ಟರ್‌: ಬೆಂಗಳೂರು 07-12 ಮುಂಬೈ

Story first published: Tuesday, May 28, 2019, 22:32 [IST]
Other articles published on May 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X