ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಬೆಂಗಳೂರು ರೈನೊಸ್‌ ಫೈನಲ್‌ಗೆ

Bangalore Rhinos set up final clash against Pune Pride defeating Delhi 63-33

ಬೆಂಗಳೂರು, ಜೂನ್‌ 03: ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಅಬ್ಬರದ ಆಟವಾಡಿದ ಬೆಂಗಳೂರು ರೈನೋಸ್‌ ತಂಡ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಸೆಮಿಫೈನಲ್ಸ್‌ ಪಂದ್ಯದಲ್ಲಿ ಬಲಿಷ್ಠ ದಿಲರ್‌ ಡೆಲ್ಲಿ ತಂಡವನ್ನು ಬಗ್ಗುಬಡಿದು ಫೈನಲ್‌ಗೆ ಮುನ್ನಡೆದಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಇದೀಗ ಮಂಗಳವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವಾದ ಪುಣೆ ಪ್ರೈಡ್‌ ವಿರುದ್ಧ ಚಾಂಪಿಯನ್ಸ್‌ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎರಡನೇ ಹೈ ವೋಲ್ಟೇಜ್‌ ಸೆಮಿಫೈನಲ್‌ ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಆಟವಾಡಿದ ಬೆಂಗಳೂರು ರೈನೋಸ್‌ ತಂಡ 63-33 ಅಂಕಗಳಿಂದ ಒಟ್ಟಾರೆ 30 ಅಂಕಗಳ ಮೇಲುಗೈನೊಂದಿಗೆ 'ಬಿ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕ್‌ಔಟ್ಸ್‌ಗೆ ಕಾಲಿಟ್ಟಿದ್ದ ದಿಲರ್ ಡೆಲ್ಲಿ ತಂಡವನ್ನು ಹೊಸಕ ಹಾಕಿತು.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

ಪಂದ್ಯದಲ್ಲಿ ಬೆಂಗಳೂರು ರೈನೋಸ್‌ ಪರ ಮಿಂಚಿನ ರೇಡ್‌ಗಳೊಂದಿಗೆ ಆರ್ಭಟಿಸಿದ ಸ್ಟಾರ್‌ ರೇಡರ್‌ ವಿಶಾಲ್‌ ಒಟ್ಟಾರೆ 24 ಅಂಕಗಳನ್ನು ಗಳಿಸುವ ಮೂಲಕ ಜಯದ ರೂವಾರಿಯಾದರು. ಅವರ ಈ ಭರ್ಜರಿ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ, ಪಂದ್ಯದ ಅತ್ಯುತ್ತಮ ರೇಡರ್‌ ಹಾಗೂ ಪಂದ್ಯದದ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಗೌರವ ಒಲಿಯಿತು. ಮತ್ತೊಬ್ಬ ರೇಡರ್‌ ಆರುಮುಗಮ್‌ ಕೂಡ 13 ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಾಥ್‌ ನೀಡಿದರು. ಡಿಫೆನ್ಸ್‌ನಲ್ಲಿ ಮನೋಜ್‌ 6 ಅಂಕಗಳನ್ನು ಗಳಿಸುವುದರೊಂದಿಗೆ ಎದುರಾಳಿ ರೇಡರ್‌ಗಳಿಗೆ ಕಂಟಕವಾದರು.

ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!

ಮತ್ತೊಂದೆಡೆ ಲೀಗ್‌ನಲ್ಲಿ ಅಬ್ಬರಿಸಿ ನಾಕ್‌ಔಟ್‌ ಹಂತದಲ್ಲಿ ಡಲ್‌ ಆದ ಡೆಲ್ಲಿ ತಂಡದ ಪರ ಅನುಭವಿ ರೇಡರ್‌ ಸುನಿಲ್‌ ಜೈಪಾಲ್‌ 14 ಅಂಕಗಳನ್ನು ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಡಿಫೆನ್ಸ್‌ನಲ್ಲಿ ವಿಪುಲ್‌ ಮೋಕಲ್‌ (4) ಕೊಂಚ ಪ್ರತಿರೋಧವೊಡ್ಡಿ ಪಂದ್ಯದ ಅತ್ಯುತ್ತಮ ಡಿಫೆಂಡರ್‌ ಎನಿಸಿಕೊಂಡರು. ಆದರೆ, ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!

ಆರಂಭದಿಂದಲೇ ರೈನೊಸ್‌ ಅಬ್ಬರ
ಲೀಗ್ ಹಂತದಲ್ಲಿ ಕೇವಲ ಎರಡು ಪಂದ್ಯಗಳನ್ನಷ್ಟೇ ಸೋತು 'ಬಿ' ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ಸ್‌ ತಲುಪಿದ್ದ ದಿಲರ್‌ ಡೆಲ್ಲಿ ತಂಡವನ್ನು ಮಣಿಸಬೇಕಾದರೆ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದ ಬೆಂಗಳೂರು ರೈನೋಸ್‌, ಮೊದಲ ಎರಡು ಕ್ವಾರ್ಟರ್‌ಗಳಲ್ಲಿ 35-15 ಅಂತರದಲ್ಲಿ ಭಾರಿ ಮುನ್ನಡೆ ಪಡೆದು ಪಂದ್ಯದ ಸಂಪೂರ್ಣ ಹಿಡಿತವನ್ನು ತನ್ನದಾಗಿಸಿಕೊಂಡಿತು.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!

ಮೊದಲ ಕ್ವಾರ್ಟರ್‌ನಲ್ಲಿ 11-9 ಅಂಕಗಳೊಂದಿಗೆ ಕೇವಲ 2 ಅಂಕದ ಮುನ್ನಡೆಯಲ್ಲಿದ್ದ ಬೆಂಗಳೂರು ತಂಡ ಬಳಿಕ ದ್ವಿತೀಯ ಕ್ವಾರ್ಟರ್‌ನಲ್ಲಿ 24-6 ಅಂತಗಳಲ್ಲಿ ಡೆಲ್ಲಿ ಪಡೆಯನ್ನು ಬಡಿದಟ್ಟಿ ಆತಿಥೇಯ ಪ್ರೇಕ್ಷಕರಿಗೆ ರೋಮಾಂಚನ ನೀಡಿತು. ಬಳಿಕ ಮೂರನೇ ಕ್ವಾರ್ಟರ್‌ನಲ್ಲಿ ಮುನ್ನಡೆ ಕಾಯ್ದುಕೊಂಡ ಬೆಂಗಳೂರು 9-5ರಲ್ಲಿ ಡೆಲ್ಲಿಯನ್ನು ಮತ್ತೆ ಹಿಮ್ಮೆಟ್ಟಿಸಿ, ಅಂತಿಮವಾಗಿ ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್‌ನಲ್ಲಿ 19-13 ಅಂಕಗಳೊಂದಿಗೆ ಗೆಲುವಿನ ಅಂತರವನ್ನು 63-33ಕ್ಕೆ ವಿಸ್ತರಿಸಿ ಅಮೋಘ ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ಮುನ್ನಡೆಯಿತು.

ಕ್ವಾರ್ಟರ್‌ಗಳ ವಿವರ

1ನೇ ಕ್ವಾರ್ಟರ್‌: ಬೆಂಗಳೂರು 11-09 ಡೆಲ್ಲಿ

2ನೇ ಕ್ವಾರ್ಟರ್‌: ಬೆಂಗಳೂರು 24-06 ಡೆಲ್ಲಿ

3ನೇ ಕ್ವಾರ್ಟರ್‌: ಬೆಂಗಳೂರು 09-06 ಡೆಲ್ಲಿ

4ನೇ ಕ್ವಾರ್ಟರ್‌: ಬೆಂಗಳೂರು 19-13 ಡೆಲ್ಲಿ

Story first published: Monday, June 3, 2019, 23:26 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X