ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಪ್ರಶಸ್ತಿ ಗೆಲುವಿಗಾಗಿ ಹರಿಯಾಣ ಸ್ಟೀಲರ್ಸ್‌ ರಣತಂತ್ರ

Dharmaraj Cheralathan named Haryana Steelers skipper for PKL 7

ಪಂಚಕುಲ (ಹರಿಯಾಣ), ಜುಲೈ 18: ಕಳೆದ ನಾಲ್ಕು ತಿಂಗಳಿಂದ ಐಪಿಎಲ್‌ ಮತ್ತು ವಿಶ್ವಕಪ್‌ನಂತಹ ಬೃಹತ್‌ ಟೂರ್ನಿಗಲ್ಲಿನ ಕ್ರಿಕೆಟ್‌ ಕಲರವದಲ್ಲಿ ಮಿಂದೆದ್ದಿರುವ ಕ್ರೀಡಾಭಿಮಾನಿಗಳಿಗೆ ಇದೀಗ ಕಬಡ್ಡಿ ಆಟದ ಸವಿ ಅನುಭವಿಸುವ ಕಾಲ ಸಮೀಪಿಸಿದೆ.

ದೇಶದಲ್ಲಿ ಕ್ರಿಕೆಟ್‌ ಬಳಿಕ ಅತಿ ಹೆಚ್ಚು ವೀಕ್ಷಿಸಲ್ಪಟುವ ಕ್ರೀಡೆಯಾಗಿರುವ ಕಬಡ್ಡಿಯ ಜನಪ್ರಿಯ ಪ್ರೋ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ ಟೂರ್ನಿಯು ಇದೇ ಶನಿವಾರ (ಜುಲೈ 20) ಆರಂಭವಾಗಲಿದ್ದು, ಚೊಚ್ಚಲ ಪ್ರಶಸ್ತಿ ಗೆಲುವಿಗೆ ರಣತಂತ್ರ ಹೆಣೆಯಲು ಆರಂಭಿಸಿರುಬ ಹರಿಯಾಣ ಸ್ಟೀಲರ್ಸ್‌ ತಂಡ ಟೂರ್ನಿಯ ಅತ್ಯಂತ ಅನುಭವಿ ಆಟಗಾರ ಧರ್ಮರಾಜ್‌ ಚೇರಲಾಥನ್‌ ಅವರಿಗೆ ನಾಯಕನ ಸ್ಥಾನ ನೀಡಿದೆ.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

2017ರ ಸಾಲಿನಲ್ಲಿ ಪ್ರೊ ಕಬಡ್ಡಿ ಲೀಗ್‌ಗೆ ಪದಾರ್ಪಣೆ ಮಾಡಿದ ಹರಿಯಾಣ ಸ್ಟೀಲರ್ಸ್‌ ತಂಡ ಮೊದಲ ಪ್ರಯತ್ನದಲ್ಲೇ ಪ್ಲೇ ಆಫ್ಸ್‌ ತಲುಪಿದ ಸಾಧನೆ ಮಾಡಿತ್ತು. ಇನ್ನು ಕಬಡ್ಡಿ ಕ್ರೀಡೆಯನ್ನು ಹರಿಯಾಣದಲ್ಲಿ ಜನಪ್ರಿಯಗೊಳಿಸುವ ಕಡೆಗೆ ಶ್ರಮಿಸುತ್ತಿರುವ ಸ್ಟೀಲರ್ಸ್‌ ತಂಡ, ತನ್ನ ಮನೆಯಂಗಣವನ್ನು ಸೋನಿಪತ್‌ನಿಂದ ಪಂಚಕುಲಕ್ಕೆ ವರ್ಗಾಯಿಸಿದೆ.

"ನಮ್ಮ ತಂಡ ಸಮತೋಲನದಿಂದ ಕೂಡಿದೆ. ಧರ್ಮರಾಜ್‌ ಅತ್ಯಂತ ಅನುಭವಿ ಆಟಗಾರರಾಗಿದ್ದು ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಒಂದು ತಿಂಗಳಿಂದ ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಬಾರಿ ಪ್ರೋ ಕಬಡ್ಡಿ ಲೀಗ್‌ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ತಂಡ ಕಣಕ್ಕಿಳಿಯಲಿದೆ," ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಸ್ಟೋಲರ್ಸ್‌ ತಂಡದ ಮುಖ್ಯ ಕೋಚ್‌ ರಾಕೇಶ್‌ ಕುಮಾರ್‌ ಹೇಳಿದ್ದಾರೆ.

ತಮ್ಮ ಅನೈತಿಕ ಸಂಬಂಧಗಳ ಕುರಿತಾಗಿ ಬಾಯ್ಬಿಟ್ಟ ಪಾಕ್‌ನ ಮಾಜಿ ಆಲ್‌ರೌಂಡರ್‌!ತಮ್ಮ ಅನೈತಿಕ ಸಂಬಂಧಗಳ ಕುರಿತಾಗಿ ಬಾಯ್ಬಿಟ್ಟ ಪಾಕ್‌ನ ಮಾಜಿ ಆಲ್‌ರೌಂಡರ್‌!

ಹರಿಯಾಣ ಸ್ಟೀಲರ್ಸ್‌ ತಂಡ ಜುಲೈ 22ರಂದು ಪುಣೇರಿ ಪಲ್ಟನ್‌ ತಂಡದ ಎದುರು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತನ್ನ ಅಭಿಯಾನ ಅಭಿಯಾನ ಆರಂಭಿಸಲಿದೆ.

44 ವರ್ಷದ ಅನುಭವಿ ಡಿಫೆಂಡರ್‌ ಧರ್ಮರಾಜ್‌, ಪ್ರೊ ಕಬಡ್ಡಿ ಇತಿಹಾಸದಲ್ಲಿ ಯು ಮುಂಬಾ, ಬೆಂಗಳೂರು ಬುಲ್ಸ್‌, ಪುಣೇರಿ ಪಲ್ಟನ್‌, ತೆಲುಗು ಟೈಟನ್ಸ್‌ ಮತ್ತು ಪಟನಾ ಪೈರೇಟ್ಸ್‌ ತಂಡಗಳ ಪರ ಆಡಿದ ಅನುಭವ ಹೊಂದಿದ್ದಾರೆ.

Story first published: Friday, July 19, 2019, 11:05 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X