ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್‌ಗೆ ರಂಗೇರಿಸಲಿದೆ ಇಂಡಿಯಾ 7 vs ವರ್ಲ್ಡ್ 7 ಜಿದ್ದಾಜಿದ್ದಿ ಪಂದ್ಯ

For first-time ever NBA-like All-Star game for Pro Kabaddi fans in Hyderabad

ಹೈದರಾಬಾದ್, ಜುಲೈ 13: ಪ್ರೊ ಕಬಡ್ಡಿ ಲೀಗ್ 7ನೇ ಆವೃತ್ತಿಗಾಗಿ ಕಬಡ್ಡಿ ಪ್ರೇಮಿಗಳು ಜುಲೈ 20ರ ವರೆಗೆ ಕಾಯಬೇಕಿದೆ. ಟೂರ್ನಿ ಆರಂಭದಲ್ಲಿ ತೆಲುಗು ಟೈಟಾನ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಲಿವೆ. ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

Pro Kabaddi League: ಕೋಟಿ ರೂ. ಬೆಲೆಗೆ ಹರಾಜಾದ ಸಿದ್ಧಾರ್ಥ್, ನಿತಿನ್!Pro Kabaddi League: ಕೋಟಿ ರೂ. ಬೆಲೆಗೆ ಹರಾಜಾದ ಸಿದ್ಧಾರ್ಥ್, ನಿತಿನ್!

ಟೂರ್ನಿಯ ನಿಜವಾದ ಪಂದ್ಯಗಳು ಆರಂಭಗೊಳ್ಳೋದಕ್ಕೂ ಮುನ್ನ ಚೊಚ್ಚಲ ಬಾರಿಗೆ ವಿಶ್ವಶ್ರೇಷ್ಠ ಆಟಗಾರರ ನಡುವಿನ ಕದನ ಪಂದ್ಯಾಟಕ್ಕೆ ರಂಗೇರಿಸಲಿದೆ. ಹೈದರಾಬಾದ್‌ನ ಅದೇ ಗಚಿಬೌಲಿ ಸ್ಟೇಡಿಯಂ ಈ ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೂರ್ನಿಯ ಆರಂಭಿಕ ದಿನವಾದ ಜುಲೈ 20ರಂದು ಇಂಡಿಯಾ vs ವರ್ಲ್ಡ್ 7 ತಂಡಗಳು ಸವಾಲು ಸ್ವೀಕರಿಸಲಿವೆ.

ಬಂಗಾಳ ಹುಲಿ ಗಂಗೂಲಿ ಬಟ್ಟೆ ಬಿಚ್ಚಿ ಸಂಭ್ರಮಿಸಿದ್ದು ಜುಲೈ 13ರ ಇದೇ ದಿನ!ಬಂಗಾಳ ಹುಲಿ ಗಂಗೂಲಿ ಬಟ್ಟೆ ಬಿಚ್ಚಿ ಸಂಭ್ರಮಿಸಿದ್ದು ಜುಲೈ 13ರ ಇದೇ ದಿನ!

ಪ್ರದೀಪ್ ನರ್ವಾಲ್, ಪವನ್ ಶೆಹ್ರಾವತ್ ಮೊದಲಾದ ಆಟಗಾರರಿರುವ ಇಂಡಿಯಾ 7 ತಂಡಕ್ಕೆ ಅಜಯ್ ಠಾಕೂರ್ ನಾಯಕರಾದರೆ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಅಬೋಝರ್ ಮೊಹಜೆರ್ಮಿಘಾನಿ, ಜಂಗ್ ಕುನ್ ಲೀ ಮೊದಲಾದ ಆಟಗಾರರಿರುವ ವರ್ಲ್ಡ್ 7ಗೆ ಫಝಲ್ ಅತ್ರಾಚಲಿ ನಾಯಕ.

ಎಬಿ ಡಿವಿಲಿಯರ್ಸ್ ಬೆನ್ನ ಹಿಂದೆ ನಿಂತ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್!ಎಬಿ ಡಿವಿಲಿಯರ್ಸ್ ಬೆನ್ನ ಹಿಂದೆ ನಿಂತ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್!

ಇಂಡಿಯಾ 7 ಮತ್ತು ವರ್ಲ್ಡ್ 7 ಎರಡೂ ತಂಡವೂ ಅತ್ಯುತ್ತಮ ಕೋಚ್ ಕೆಳಗೆ ಪಳಗಲಿರುವುದು ವಿಶೇಷ. ಇಂಡಿಯಾ 7, ಬಲ್ವಾನ್ ಸಿಂಗ್ ಗರಡಿಯಲ್ಲಿ ಅಭ್ಯಾಸ ನಡೆಸಿದರೆ, ವರ್ಲ್ಡ್ 7 ಇ.ಪಿ. ರಾವ್ ತರಬೇತಿಯಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯ 7.30ರ ನಂತರ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ನೇರಪ್ರಸಾರಗೊಳಿಸುತ್ತಿವೆ.

Story first published: Friday, July 19, 2019, 11:06 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X