ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಹರಿಯಾಣ ವಿರುದ್ಧ ಬೆಂಗಳೂರಿಗೆ ಗೆಲುವು

IIPKL 2019: Bengaluru Rhinos beat Haryana Heros by margin of 6 points

ರೈನೋಸ್‌ ತಂಡಕ್ಕೆ ಹೀರೋಸ್‌ ವಿರುದ್ಧ 47-41 ಅಂತರದ ಜಯ

ಪುಣೆ, ಮೇ 17: ಸೋಲು ಗೆಲುವಿನ ರುಚಿ ನೋಡಿರುವ ಬೆಂಗಳೂರು ರೈನೋಸ್‌ ತಂಡ ಇಲ್ಲಿ ನಡೆಯುತ್ತಿರುವ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಹರಿಯಾಣ ಹೀರೋಸ್‌ ವಿರುದ್ಧ ಗೆದ್ದು ಟೂರ್ನಿಯಲ್ಲಿ ತನ್ನ ಎರಡನೇ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು.

<strong>ಐಸಿಸಿ ಏಕದಿನ ವಿಶ್ವಕಪ್‌ ಕಾಮೆಂಟರಿಗೆ ಭಾರತದಿಂದ ಮೂವರು ಮಾತ್ರ!</strong>ಐಸಿಸಿ ಏಕದಿನ ವಿಶ್ವಕಪ್‌ ಕಾಮೆಂಟರಿಗೆ ಭಾರತದಿಂದ ಮೂವರು ಮಾತ್ರ!

ಇಲ್ಲಿನ ಬಾಳೆವಾಡಿಯ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಸ್ಟಾರ್‌ ರೇಡರ್‌ ಆರುಮುಗಂ ಅವರ ಮಿಂಚಿನ ಆಟದಿಂದ ಗಮನಾರ್ಹ ಪ್ರದರ್ಶ ನೀಡಿದ ರೈನೋಸ್‌ ತಂಡ 47-41 ಅಂಕಗಳಿಂದ ಹೀರೋಸ್‌ ಪಡೆಯ ಹೆಡೆಮುರಿ ಕಟ್ಟಿತು.

ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

ಈ ಗೆಲುವಿನೊಂದಿಗೆ ಬೆಂಗಳೂರು ತಂಡ 'ಎ' ಝೋನ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡರೆ, ಆಡಿದ ಮೂರೂ ಪಂದ್ಯಗಳನ್ನು ಸೋತಿರುವ ಹೀರೋಸ್‌ ತಂಡ 4ನೇ ಹಾಗೂ ಕೊನೆಯ ಸ್ಥಾನದಲ್ಲಿದೆ.

ಆರುಮುಗಂ ಬೆಸ್ಟ್‌ ರೇಡರ್‌

ಪಂದ್ಯದಲ್ಲಿ ರೈನೋಸ್‌ ತಂಡದ ಪರ ಆಲ್‌ರೌಂಡ್‌ ಆಟವಾಡಿದ ವಿಪಿನ್‌ ಕುಮಾರ್‌ (8) ಪಂದ್ಯ ಶ್ರೇಷ್ಠ ಗೌರವ ಪಡೆದರೆ, ಭರ್ಜರಿ ರೇಡ್‌ಗಳೊಂದಿಗೆ ಹೀರೋಸ್‌ ತಂಡದ ಭದ್ರ ಕೋಟೆಗೆ ಕನ್ನಹಾಕಿದ ಆರುಮುಗಂ ಒಟ್ಟಾರೆ 14 ಅಂಕಗಳನ್ನು ಗಳಿಸಿ ಪಂದ್ಯದ ಅತ್ಯುತ್ತಮ ರೇಡರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರೈನೋಸ್‌ಗೆ ಡಿಫೆನ್ಸ್‌ನಲ್ಲಿ ಆಸರೆಯಾದ ಜಿ. ಅಂಬೇಶ್ವರನ್‌ (6) ಶ್ರೇಷ್ಠ ಡಿಫೆಂಡರ್‌ ಟ್ರೋಫಿಗೆ ಭಾಜನರಾದರು. ಅವರಿಗೆ ಮನೋಜ್‌ (5) ಉತ್ತಮ ಸಾಥ್‌ ನೀಡಿದರು. ಹೀರೋಸ್‌ ಪರ ವಿಕಾಸ್‌ ಖಾತ್ರಿ (6) ಮತ್ತು ಜಗದೀಪ್‌ ನರ್ವಾಲ್‌ (4) ಗಮನ ಸೆಳೆದರು.

ಮೊದಲಿಗೆ ಸಮಬಲದ ಹೋರಾಟ

ಪಂದ್ಯದ ಆರಂಭದಿಂದಲೂ ಇತ್ತಂಡಗಳ ನಡುವೆ ಸಮಬಲದ ಹೋರಾಟ ಮೂಡಿಬಂದಿತು. ಮೊದಲ ಕ್ವಾರ್ಟರ್‌ನ ಹತ್ತು ನಿಮಿಷಗಳ ಆಟದಲ್ಲಿ ಇತ್ತಂಡಗಳು ಅಂಕಗಳನ್ನು ಗಳಿಸಿ ಮತ್ತು ಅಂಕಗಳನ್ನು ಬಿಟ್ಟುಕೊಡುವ ಮೂಲಕ ತಲಾ 11 ಅಂಕಗಳನ್ನು ಹಂಚಿಕೊಂಡವು. ಆದರೆ, ಪಂದ್ಯ ಗೆಲ್ಲಬೇಕಾದರೆ ಎಚ್ಚರಿಕೆಯ ಆಟವಾಡಿದರೆ ಸಾಲದು ಎಂಬುದನ್ನು ಕೂಡಲೇ ಅರಿತುಕೊಂಡ ರೈನೋಸ್‌ ತಂಡ, 2ನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟವಾಡಲಾರಂಭಿಸಿತು. ಸ್ಟಾರ್ ರೇಡರ್‌ ಆರುಮುಗಂ ಮತ್ತು ವಿಪಿನ್‌ ಮಲಿಕ್‌ ಅವರ ಮಿಂಚಿನ ದಾಳಿಗಳೊಂದಿಗೆ ಮೇಲುಗೈ ಪಡೆದ ರೈನೋಸ್‌ 13-7 ಅಂಕಗಳಿಂದ ಪ್ರಾಬಲ್ಯ ಮೆರೆದು ಅರ್ಧಪಂದ್ಯದ ಮುಕ್ತಾಯಕ್ಕೆ 24-18 ಅಂಕಗಳ ಮುನ್ನಡೆ ಗಳಿಸಿ ಪಂದ್ಯದ ಹಿಡಿತವನ್ನು ತನ್ನತ್ತ ಸೆಳೆದುಕೊಂಡಿತು.

ಮುನ್ನಡೆ ಕಾಯ್ದುಕೊಂಡ ರೈನೋಸ್‌

ಎರಡನೇ ಕ್ವಾರ್ಟರ್‌ನಲ್ಲಿ ಸಿಕ್ಕ ಉತ್ತಮ ಮುನ್ನಡೆಯ ಲಾಭ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಲಾರಂಭಿಸಿದ ಬೆಂಗಳೂರು ರೈನೋಸ್‌ ತಂಡ, ಮೂರನೇ ಕ್ವಾರ್ಟರ್‌ನಲ್ಲೂ 13-7 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿ 37-25ಕ್ಕೆ ಮುನ್ನಡೆಯನ್ನು ವಿಸ್ತರಿಸಿತು. ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ ರೈನೋಸ್‌ ತಂಡ ಎಚ್ಚರಿಕೆಯ ಆಟವಾಡಿ ಮುನ್ನಡೆ ಕಾಯ್ದುಕೊಳ್ಳಲು ಪ್ರಯತ್ನಿಸಿದರೆ, ಸೋಲಿನ ಅಂತರ ತಗ್ಗಿಸುವ ಪ್ರಯತ್ನ ನಡೆಸಿದ ಹೀರೋಸ್‌ ಕೊನೆಗೂ ಸತತ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೂ ಏಟಿಗೆ ಎದುರೇಟು ನೀಡುತ್ತಲೇ ಮುನ್ನಡೆ ಕಾಯ್ದುಕೊಂಡ ಬೆಂಗಳೂರು ತಂಡ ಅಂತಿಮವಾಗಿ 47-41 ಅಂಕಗಳಿಂದ ಗೆಲುವನ್ನು ತನ್ನದಾಗಿಸಿಕೊಂಡಿತು.

ಕ್ವಾರ್ಟರ್‌ ವಿವರ

ಕ್ವಾರ್ಟರ್‌ -1: ಹರಿಯಾಣ 11 - 11 ಬೆಂಗಳೂರು

ಕ್ವಾರ್ಟರ್‌ -2: ಹರಿಯಾಣ 07 - 13 ಬೆಂಗಳೂರು

ಕ್ವಾರ್ಟರ್‌ -3: ಹರಿಯಾಣ 07 - 13 ಬೆಂಗಳೂರು

ಕ್ವಾರ್ಟರ್‌ -4: ಹರಿಯಾಣ 16 - 16 ಬೆಂಗಳೂರು

Story first published: Friday, May 17, 2019, 21:36 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X