ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ತೆಲುಗು ತಂಡಕ್ಕೆ ಮೊದಲ ಜಯ

IIPKL: Abhinandan stellar performance helped Telugu Bulls to beat Mumbai Che Raje

ತೆಲುಗು ತಂಡಕ್ಕೆ ಮುಂಬೈ ವಿರುದ್ಧ 39-28 ಅಂಕಗಳ ಜಯ

ಪುಣೆ, ಮೇ 20: ಸತತ ನಾಲ್ಕು ಸೋಲಿನ ಕೊಂಡಿಯನ್ನು ಕೊನೆಗೂ ಕಳಚಿದ ತೆಲುಗು ಬುಲ್ಸ್‌ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಮುಂಬೈ ಚೇ ರಾಜೆ ತಂಡವನ್ನು ಮಣಿಸುವ ಮೂಲಕ ಮೊದಲ ಜಯದ ಸವಿಯುಂಡಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಇಲ್ಲಿನ ಬಾಳೇವಾಡಿಯಲ್ಲಿರುವ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ 'ಬಿ' ಝೋನ್‌ ವಿಭಾಗದ ಪಂದ್ಯದಲ್ಲಿ ರೇಡರ್‌ಗಳ ಅದ್ಭುತ ಪ್ರದರ್ಶನ ನೀಡಿದ ತೆಲುಗು ಬುಲ್ಸ್‌ ತಂಡ 39-28 ಅಂಕಗಳಿಂದ ಮುಂಬೈ ಚೇ ರಾಜೆ ಸವಾಲನ್ನು ಮೆಟ್ಟಿನಿಂತು ಅಂಕಪಟ್ಟಿಯಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಈ ಸೋಲಿನೊಂದಿಗೆ ಮುಂಬೈ ತಂಡ ನಾಲ್ಕು ಪಂದ್ಯಗಳಿಂದ 2 ಸೋಲು, 1 ಜಯ ಮತ್ತು 1 ಡ್ರಾ ಫಲಿತಾಂಶದೊಂದಿಗೆ ಮೂರು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. ಮತ್ತೊಂದೆಡೆ ತೆಲುಗು ತಂಡ 2 ಅಂಕ ಸಂಪಾದಿಸಿದರೂ ನಾಲ್ಕನೇ ಹಾಗೂ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಅಭಿನಂದನ್‌ ಕುಮಾರ್‌ ಪರಾಕ್ರಮ

ಪಂದ್ಯದಲ್ಲಿ ತೆಲುಗು ತಂಡದ ಪರ ಭರ್ಜರಿ ದಾಳಿ ಸಂಘಟಿಸಿದ ಅಭಿನಂದನ್‌ ಕುಮಾರ್‌ ಒಟ್ಟಾರೆ 15 ಅಂಕಗಳನ್ನು ಗಳಿಸಿ ಗೆಲುವಿನ ರೂವಾರಿಯಾದರು. ಅವರಿ ಈ ಭರ್ಜರಿ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ, ಪಂದ್ಯದ ಅತ್ಯುತ್ತಮ ರೇಡರ್‌ ಮತ್ತು ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಎಲ್ಲಾ ಗೌರವಗಳು ಲಭ್ಯವಾದವು. ಮುಂಬೈ ತಂಡದ ಪರ ಡಿಫೆನ್ಸ್‌ನಲ್ಲಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಸುಹಾಸ್‌ ವಾಗರೆ ಅತ್ಯುತ್ತಮ ಡಿಫೆಂಡರ್‌ ಪ್ರಶಸ್ತಿಗೆ ಭಜನರಾದರು. ಮುಂಬೈ ತಂಡದ ಪರ ರೇಡರ್‌ಗಳಾದ ಮಹೇಶ್‌ ತಿಮ್ಮಾಪುರ ಮತ್ತು ದಿಲ್‌ಜೀತ್‌ ಸಿಂಗ್‌ ಚೌಹಾಣ್‌ ಕ್ರಮವಾಗಿ 9 ಮತ್ತು 8 ಅಂಕಗಳನ್ನು ಗಳಿಸುವ ಮೂಲಕ ಹೋರಾಟ ಪ್ರದರ್ಶಿಸಿದರಾದರೂ ತಂಡಕ್ಕೆ ಎದುರಾದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಮೊದಲಿಗೆ ಮುಂಬೈ ಮುನ್ನಡೆ

ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಮುಂಬೈ ಚೇ ರಾಜೆ ತಂಡ ಮುನ್ನಡೆ ಗಳಿಸಿತ್ತು. ಇದರೊಂದಿಗೆ ತೆಲುಗು ತಂಡ ಸತತ 5ನೇ ಸೋಲನುಭವಿಸುತ್ತದೆ ಎಂದೇ ಅಂದಾಜಿಸಲಾಗಿತ್ತು. ರೇಡರ್‌ಗಳ ಉತ್ತಮ ಪ್ರದರ್ಶನದ ನೆರವಿನೊಂದಿಗೆ ಮುಂಬೈ ತಂಡ ಮೊದಲ ಕ್ವಾರ್ಟರ್‌ನಲ್ಲಿ 8-7 ಮತ್ತು 2ನೇ ಕ್ವಾರ್ಟರ್‌ನಲ್ಲಿ 9-7 ಅಂಕಗಳಿಂದ ಮೇಲುಗೈ ಪಡೆಯಿತು.

ಬದಲಾಯಿಸಿದ 3ನೇ ಕ್ವಾರ್ಟರ್‌

ಮೂರನೇ ಕ್ವಾರ್ಟರ್‌ನಲ್ಲಿ ತೆಲುಗು ತಂಡ ಪ್ರದರ್ಶಿಸಿದ ಅದ್ಭುತ ಆಟ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಟ್ಟಿತು. ಅದರಲ್ಲೂ ಅಭಿನಂದನ್‌ ಕುಮಾರ್‌ ಅವರ ಮಿಂಚಿನ ರೇಡ್‌ಗಳ ಬಲದಿಂದ 13-4 ಅಂತರದ ಭಾರಿ ಮುನ್ನಡೆ ಗಳಿಸಿ ಒಟ್ಟು ಮುನ್ನಡೆಯಲ್ಲೂ ಮೇಲುಗೈ ಸಾಧಿಸುವಲ್ಲಿ ತೆಲುಗು ಬುಲ್ಸ್‌ ಯಶಸ್ವಿಯಾಯಿತು. ಬಳಿಕ ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲೂ 12-7ರಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ 39-28 ಅಂಕಗಳಿಂದ ಪಂದ್ಯ ಗೆದ್ದುಕೊಂಡಿತು.

ಕ್ವಾರ್ಟರ್‌ಗಳ ವಿವರ

1ನೇ ಕ್ವಾರ್ಟರ್‌: ಮುಂಬೈ 08-07 ತೆಲುಗು

2ನೇ ಕ್ವಾರ್ಟರ್‌: ಮುಂಬೈ 09-07 ತೆಲುಗು

3ನೇ ಕ್ವಾರ್ಟರ್‌: ಮುಂಬೈ 04-13 ತೆಲುಗು

4ನೇ ಕ್ವಾರ್ಟರ್‌: ಮುಂಬೈ 07-12 ತೆಲುಗು

Story first published: Monday, May 20, 2019, 21:40 [IST]
Other articles published on May 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X