ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಮುಂಬೈಗೆ ರೋಚಕ ಗೆಲುವು

IIPKL: Mumbai Che Raje defeats Pondicherry Predators by 33-30

ಮೈಸೂರು, ಮೇ 26: ಸಮಬಲದ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಎರಡನೇ ಕ್ವಾರ್ಟರ್‌ನಲ್ಲಿ ಗಳಿಸಿದ ನಾಲ್ಕು ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡ ಮುಂಬೈ ಚೇ ರಾಜೆ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಇಂಟರ್‌ ಝೋನ್‌ ಪಂದ್ಯದಲ್ಲಿ ಪಾಂಡಿಚೆರಿ ಪ್ರೆಡೇಟರ್ಸ್‌ ವಿರುದ್ಧ ರೋಚಕ ಜಯ ದಾಖಲಿಸಿತು.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 'ಬಿ' ಗುಂಪಿನ ಎರಡನೇ ಸ್ಥಾನದಲ್ಲಿರುವ ಮುಂಬೈ ಚೇ ರಾಜೆ ತಂಡ 'ಎ' ಗುಂಪಿನ ದ್ವಿತೀಯ ಸ್ಥಾನಿ ಪಾಂಡಿಚೆರಿ ಪ್ರೆಡೇಟರ್ಸ್‌ ಎದುರು 33-29 ಅಂಕಗಳ ಜಯ ದಕ್ಕಿಸಿಕೊಂಡು, ಟೂರ್ನಿಯಲ್ಲಿ ತನ್ನ ಮೂರನೇ ಜಯದ ಸಂಭ್ರಮ ಆಚರಿಸಿತು.

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

ಈ ಗೆಲುವಿನೊಂದಿಗೆ ಮುಂಬೈ ತಂಡ ಟೂರ್ನಿಯಲ್ಲಿ ಆಡಿದ ಒಟ್ಟು 7 ಪಂದ್ಯಗಳಿಂದ 3 ಗೆಲುವು ಮತ್ತು ತಲಾ 2 ಸೋಲು ಮತ್ತು ಡ್ರಾ ಫಲಿತಾಂಶದೊಂದಿಗೆ 8 ಅಂಕಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಮತ್ತೊಂದೆಡೆ ಅಷ್ಟೇ ಪಂದ್ಯಗಳನ್ನಾಡಿ ಆರು ಅಂಕಗಳನ್ನಷ್ಟೇ ಗಳಿಸಿರುವ ಪಾಂಡಿಚೆರಿ ತಂಡ ಕೂಡ 'ಎ' ಗುಂಪಿನಲ್ಲಿ ತನ್ನ ದ್ವಿತೀಯ ಸ್ಥಾನವನ್ನು ಕಾಯ್ದುಕೊಂಡಿದೆ.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

ಇನ್ನು ಭಾನುವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಮುಂಬೈ ಚೇ ರಾಜೆ ತಂಡದ ಪರ ಮಿನರ್ವ ಕಾಂತ 8 ಅಂಕಗಳನ್ನು ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು. ಅವರ ಈ ಭರ್ಜರಿ ಪ್ರದರ್ಶನಕ್ಕೆ ಪಂದ್ಯದ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಗೌರವ ಒಲಿಯಿತು. ಡಿಫೆನ್ಸ್‌ನಲ್ಲಿ ಮುಂಬೈಗೆ ಬಲ ನೀಡಿದ ರವಿ ದೇಸ್ವಾಲ್‌ 4 ಅಂಕಗಳನ್ನು ಗಳಿಸುವ ಮೂಲಕ ಪಂದ್ಯದ ಅತ್ಯುತ್ತಮ ಡಿಫೆಂಡರ್‌ ಪ್ರಶಸ್ತಿಗೆ ಭಾಜನರಾದರು.

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!

ಪಾಂಡಿಚೆರಿ ಪ್ರೆಡೇಟರ್ಸ್‌ ತಂಡದ ಪರ ಅದ್ಭುತ ರೇಡ್‌ಗಳನ್ನು ನಡೆಸಿದಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರ ಆರ್‌ ಸುರೇಶ್‌ ಕುಮಾರ್‌ ಒಟ್ಟಾರೆ 10 ಅಂಕಗಳನ್ನು ಗಳಿಸುವ ಮೂಲಕ ಒಂದು ಹಂತದಲ್ಲಿ ತಂಡಕ್ಕೆ ಜಯ ತಂದುಕೊಡುವುದರಲ್ಲಿದ್ದರು, ಆದರೆ ಡಿಫೆನ್ಸ್‌ ವಿಭಾಗದ ವೈಫಲ್ಯದಿಂದ ಸುರೇಶ್‌ ಹೋರಾಟಕ್ಕೆ ಪ್ರತಿಫಲ ಸಿಗದಂತಾಯಿತು. ಆದರೂ ಪಂದ್ಯದಲ್ಲಿ ತಮ್ಮ ಮಿಂಚಿನ ರೇಡ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಸುರೇಶ್‌ ಅವರಿಗೆ ಅತ್ಯುತ್ತಮ ರೇಡರ್‌ ಮತ್ತು ಪಂದ್ಯ ಶ್ರೇಷ್ಠ ಆಟಗಾರನ ಗೌರವವೂ ಒಲಿಯಿತು.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಇನ್ನು ಪಂದ್ಯದ ಮೊದಲ, ಮೂರನೇ ಹಾಗೂ ನಾಲ್ಕನೇ ಕ್ವಾರ್ಟರ್‌ಗಳಲ್ಲಿ ಇತ್ತಂಡಗಳು ಕ್ರಮವಾಗಿ 6-6, 7-7 ಹಾಗೂ 10-10 ಅಂಕಗಳ ಸಮಬಲ ಸಾಧಿಸಿದ್ದವು. ಇದು ಇತ್ತಂಡಗಳ ನಡುವೆ ಮೂಡಿ ಬಂದ ಜಿದ್ದಾಜಿದ್ದಿನ ಹೋರಾಟಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಆದರೆ, ಪಂದ್ಯದ ಫಲಿತಾಂಶಕ್ಕೆ ಕಾರಣವಾಗಿದ್ದು, ಎರಡನೇ ಕ್ವಾರ್ಟರ್‌. ಈ ಅವಧಿಯಲ್ಲಿ ಮುಂಬೈ ತಂಡ 10-6 ಅಂತರದಲ್ಲಿ ಪಾಂಡಿಚೆರಿ ಎದುರು ಕೇವಲ 4 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಅಂತ್ಯದಲ್ಲಿ ಇದೇ ಅಂಕಗಳಿಂದ ಮುಂಬೈ ಗೆಲುವಿನ ನಗೆ ಬೀರಿತು.

ಕ್ವಾರ್ಟರ್‌ಗಳ ವಿವರ
1ನೇ ಕ್ವಾರ್ಟರ್‌: ಪಾಂಡಿಚೆರಿ 06-06 ಮುಂಬೈ
2ನೇ ಕ್ವಾರ್ಟರ್‌: ಪಾಂಡಿಚೆರಿ 06-10 ಮುಂಬೈ
3ನೇ ಕ್ವಾರ್ಟರ್‌: ಪಾಂಡಿಚೆರಿ 07-07 ಮುಂಬೈ
4ನೇ ಕ್ವಾರ್ಟರ್‌: ಪಾಂಡಿಚೆರಿ 10-10 ಮುಂಬೈ

Story first published: Sunday, May 26, 2019, 21:34 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X