ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಪಿಎಲ್ ಕಡಿಮೆ ಬೆಲೆ vs ಪಿಕೆಎಲ್ ದುಬಾರಿ ಬೆಲೆಯ ಆಟಗಾರರು

IPL top players who were bid for lesser money than Kabaddi top players

ನವದೆಹಲಿ, ಜೂ 1: ಐಪಿಎಲ್ 11 ಆವೃತ್ತಿ ಮುಗಿದು ಹೋಗಿದ್ದರೂ ಈಗಲೂ ಆಟದ ರೋಚಕ ಕ್ಷಣಗಳು ನಮ್ಮ ಕಣ್ಣ ಮುಂದೆ ನಿಲ್ಲೋದಿದೆ. ಐಪಿಎಲ್ ಹರಾಜು ವೇಳೆ ದುಬಾರಿ ಬೆಲೆಗೆ ಖರೀದಿಸಲಾಗಿದ್ದ ಆಟಗಾರರ ಕಳಪೆ ಆಟ ಮತ್ತು ಕಡಿಮೆ ಬೆಲೆಗೆ ಮಾರಾಟವಾದ ಆಟಗಾರರ ಗಮನಾರ್ಹ ಪ್ರದರ್ಶನವನ್ನು ನಾವು ಐಪಿಎಲ್ ವೇಳೆ ನೋಡಿದ್ದೆವು.

ಗುರುವಾರವಷ್ಟೇ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದ್ದು, ಮೊದಲ ದಿನವಾದ ಬುಧವಾರ ಹರಾಜಿನಲ್ಲಿ ಒಟ್ಟು 6 ಮಂದಿ ಆಟಗಾರರು 1 ಕೋ.ರೂ.ಗೂ ಮಿಕ್ಕಿದ ಬೆಲೆಗೆ ಹರಾಜಾಗಿದ್ದು ಕ್ರೀಡಾಭಿಮಾನಳೊಮ್ಮೆ ಪಿಕೆಎಲ್ ನತ್ತ ಕಣ್ಣು ಹೊರಳುವಂತೆ ಮಾಡಿತ್ತು.

ಹರಾಜಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವ ಆಟಗಾರರು ಉತ್ತಮ ಆಟ ಪ್ರದರ್ಶಿಸುತ್ತಾರೆ ಎನ್ನುವುದಕ್ಕೆ ಪುರಾವೆಯಿಲ್ಲ. ಹಾಗಂತ ಕಡಿಮೆ ಬೆಲೆಗೆ ಮಾರಾಟವಾಗುವ ಆಟಗಾರರು ಅದ್ಭುತ ಆಟದ ಮೂಲಕ ಬೆರಗು ಮೂಡಿಸಿದ್ದೂ ಇದೆ. ಐಪಿಎಲ್ ಕಡಿಮೆ ಬೆಲೆಗೆ ಹರಾಜಾಗಿ ಗಮನ ಸೆಳೆದ ಆಟಗಾರರು ಮತ್ತು ಪಿಕೆಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ..

ಯೂಸೂಫ್ ಪಠಾಣ್-ಮೋನು

ಯೂಸೂಫ್ ಪಠಾಣ್-ಮೋನು

ಸನ್ ರೈಸರ್ಸ ತಂಡದ ಆಲ್ ರೌಂಡರ್ ಯೂಸೂಫ್ ಪಠಾನ್ ಈಪಿಎಲ್ ಹರಾಜಿನ ವೇಳೆ 1.90 ಕೋ.ರೂ ಗೆ ಹರಾಜಾಗಿದ್ದರು. ಐಪಿಎಲ್ ಗೆ ಹೋಲಿಸಿದರೆ ಇದು ದೊಡ್ಡ ಮೊತ್ತವೇನಲ್ಲ. ಆದರೆ ಈ ಐಪಿಎಲ್ ಸೀಸನ್ ನಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದ ಹೈದರಾಬಾದ್ ತಂಡದಲ್ಲಿ ಪಠಾನ್ ಬಲವಾಗಿದ್ದಿದ್ದು ಸುಳ್ಳಲ್ಲ. ಇನ್ನು ಪಿಕೆಎಲ್ ಗೆ ಬಂದರೆ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ ತಂಡದಲ್ಲಿದ್ದ ಮೋನು ಅವರನ್ನು ಈ ಬಾರಿ ಹರ್ಯಾಣ ಸ್ಟೀಲರ್ಸ್ 1.51 ಕೋ. ರೂ. ದುಬಾರಿ ಮೊತ್ತಕ್ಕೆ ಖರೀದಿಸಿತ್ತು.

ಸ್ಟುವರ್ಟ್ ಬಿನ್ನಿ-ರಿಶಾಂಕ್

ಸ್ಟುವರ್ಟ್ ಬಿನ್ನಿ-ರಿಶಾಂಕ್

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಸ್ಟಾರ್ ಆಟಗಾರ ಈ ಬಾರಿ ಹರಾಜು ವೇಳೆ 50 ಲಕ್ಷ ರೂ. ಗೆ ಮಾರಾಟವಾಗಿದ್ದರು. ಬಿನ್ನಿ ಈ ಬಾರಿ ಅಂಥ ಆಟವೇನೂ ಪ್ರದರ್ಶಿಸಿಲ್ಲವಾದರೂ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಹರಾಜಿನ ವೇಳೆ ಗುರುತಿಸಿಕೊಂಡಿದ್ದರು. ಪಿಕೆಎಲ್ ನಲ್ಲಿ ರಿಶಾಂಕ್ ದೇವಾಡಿಗ ಅವರನ್ನು ಯೂಪಿ ಯೋಧ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿತ್ತು. ಈ ಬಾರಿ 1.11 ಕೋಟಿ ರೂ.ಗೆ ರಿಶಾಂಕ್ ಖರೀದಿಯಾಗಿ ಗಮನ ಸೆಳೆದಿದ್ದಾರೆ.

ಮಾಯಾಂಕ್ ಮಾರ್ಕಂಡೆ-ಫಜಲ್

ಮಾಯಾಂಕ್ ಮಾರ್ಕಂಡೆ-ಫಜಲ್

ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಮಾಯಾಂಕ್ ಮಾರ್ಕಂಡೆ ಅವರನ್ನು ಮುಂಬೈ ಇಂಡಿಯನ್ಸ್ ಈ ಬಾರಿ ಬರೀ 20 ಲಕ್ಷಕ್ಕೆ ಖರೀದಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಾಯಾಂಕ್ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದರು. ಪಿಕೆಎಲ್ ಹರಾಜಿನಲ್ಲಿ ಡಿಫೆಂಡರ್ ಆಟಗಾರನ ಪ್ರತಿಭೆಯನ್ನು ಅರಿತ ಮುಂಬೈ ಫ್ರಾಂಚೈಸಿ ಫಜಲ್ ಅವರನ್ನು 1 ಕೋ.ರೂ.ಗೆ ಖರೀದಿಸಿ ಗಮನ ಸೆಳೆದಿತ್ತು. ಐಪಿಎಲ್ ನಲ್ಲಿ ಮಾಯಾಂಕ್ ಕಡಿಮೆ ಬೆಲೆಗೆ ಹರಾಜಾದರೂ ಉತ್ತಮ ಆಟ ಪ್ರದರ್ಶಿಸಿದ್ದರು. 1 ಕೋ.ರೂ. ಭರ್ಜರಿ ಬೆಲೆ ಹರಾಜಾದ ಫಜಲ್ ಪ್ರದರ್ಶನ ಕಾದು ನೋಡಬೇಕಿದೆ.

ಮುಜೀಬ್ ಯೂಆರ್ ರಹ್ಮಾನ್-ದೀಪಕ್ ನಿವಾಜ್

ಮುಜೀಬ್ ಯೂಆರ್ ರಹ್ಮಾನ್-ದೀಪಕ್ ನಿವಾಜ್

ಕಿಂಗ್ಸ್ ಇಲೆವೆನ್ ತಂಡದ ಪರವಾಗಿ ಆಡಿದ್ದ ಮುಜೀಬ್ ಯೂಆರ್ ರಹ್ಮಾನ್ ಅವರು ಅಫ್ಘಾನಿಸ್ತಾನ್ ಬೌಲರ್. ಐಪಿಎಲ್ ವೇಳೆ ಮುಜೀಬ್ ಅಂಥ ದೊಡ್ಡ ಮೊತ್ತಕ್ಕೇನೂ ಹರಾಜಾಗಿರಲಿಲ್ಲ. 4 ಕೋಟಿ ರೂ. ಪಂಜಾಬ್ ಫ್ರಾಂಚೈಸಿ ಮುಜೀಬ್ ಅವರನ್ನು ಖರೀದಿಸಿತ್ತು. ಆದರೆ ಮುಜೀಬ್ ಕಿಂಗ್ಸ್ ಇಲೆವೆನ್ ಪರ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದರು. ರೈಡರ್ ನಿತಿನ್ ಟಾಮರ್ ಅವರು ಪಿಕೆಎಲ್ ನಲ್ಲಿ ಕೋಟಿಗೂ ಮಿಕ್ಕಿದ ಬೆಲೆಗೆ ಖರೀದಿಯಾಗುವ ಮೂಲಕ ಈ ಬಾರಿ ಗಮನಸೆಳೆದರು. ಪೂಣೇರಿ ಪಾಲ್ಟಾನ್ ತಂಡ ನಿತಿನ್ ನಿತಿನ್ ಅವರನ್ನು 1.15 ಕೋ.ರೂ.ಗೆ ಖರೀದಿಸಿದೆ. ಪಿಕೆಎಲ್ ಗೆ ಹೋಲಿಸಿದರೆ ಮುಜೀಬ್ ಹರಾಜಿನ ಬೆಲೆ ಸಣ್ಣದೆ.

ಬಿಲ್ಲಿ ಸ್ಟಾನ್ಲೇಕ್-ರಾಹುಲ್ ಚೌಧರಿ

ಬಿಲ್ಲಿ ಸ್ಟಾನ್ಲೇಕ್-ರಾಹುಲ್ ಚೌಧರಿ

ಹೈದರಾಬಾದ್ ಪರ ಕೇವಲ 50 ಲಕ್ಷಕ್ಕೆ ಮಾರಾಟವಾಗಿದ್ದ ಬಿಲ್ಲಿ ಸ್ಟಾನ್ಲೇಕ್ ಅವರು ಐಪಿಎಲ್ ನಲ್ಲಿ ಮಿಂಚಿದ್ದರು. ಮುಂಬೈ ಎದುರಿನ ಪಂದ್ಯದಲ್ಲಿ ಬಿಲ್ಲಿ ನಾಲ್ಕು ವಿಕೆಟ್ ಉರುಳಿಸಿ ಮುಂಬೈಯನ್ನು ಕಾಡಿದ್ದರು. ಐಪಿಎಲ್ ಕತೆ ಹಾಗಾದರೆ ಪಿಕೆಎಲ್ ನಲ್ಲಿ ಹರ್ಯಾಣದ ಸ್ಟಾರ್ ಆಟಗಾರ ರಾಹುಲ್ ಚೌಧರಿ ಅವರನ್ನು ತೆಲುಗು ಟೈಟಾನ್ಸ್ 1.29 ಕೋ.ರೂ.ಗೆ ತನ್ನಲ್ಲೇ ಉಳಿಸಿಕೊಂಡಿದೆ. 50 ಲಕ್ಷ ರೂ. ಮತ್ತು 1.29 ಕೋ.ರೂ ಹೋಲಿಕೆ ನೋಡಿ.

Story first published: Friday, June 1, 2018, 18:09 [IST]
Other articles published on Jun 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X