ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೌತ್ ಏ‍ಷಿಯನ್ ಗೇಮ್ಸ್‌: ಕಬಡ್ಡಿ ತಂಡದ ನಾಯಕನಾಗಿ ದೀಪಕ್ ಹೂಡಾ

Kabaddi: Deepak Hooda named captain of Indian team

ಡಿಸೆಂಬರ್ ಆರಂಭದಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕಬಡ್ಡಿ ತಂಡವನ್ನು ಪ್ರಕಟಿಸಲಾಗಿದೆ. ಭಾರತೀಯ ಕಬಡ್ಡಿ ತಂಡವನ್ನು ಅನುಭವಿ ಆಟಗಾರ ದೀಪಕ್ ಹೂಡ ಮುನ್ನಡೆಸಲಿದ್ದಾರೆ. ಭಾರತೀಯ ಕಬಡ್ಡಿ ತಂಡವನ್ನು ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ್ದರೂ ಪ್ರೋ ಕಬಡ್ಡಿಯಲ್ಲಿ ರಾಜಸ್ಥಾನ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಸೌತ್ ಏ‍ಷಿಯನ್ ಗೇಮ್ಸ್ ಟೂರ್ನಿಗಾಗಿ ಭಾರತೀಯ ಕಬಡ್ಡಿಗೆ 12 ತಂಡದ ಸದಸ್ಯರನ್ನು ನಿನ್ನೆಯಷ್ಟೇ ಹೆಸರಿಸಲಾಗಿದೆ. ಏಷಿಯನ್ ಗೇಮ್ಸ್‌ ಕ್ರೀಡಾಕೂಟದಿಂದ ತಂಡದಿಂದ ಹೊರಗುಳಿದಿದ್ದ ಸುರೇಂದರ್ ನಾಡಾ ಅವರು ತಂಡಕ್ಕೆ ಮರಳಿದ್ದಾರೆ.

ಪ್ರೊ ಕಬಡ್ಡಿ: ಡೆಲ್ಲಿ ಸೋಲಿಸಿ ಚೊಚ್ಚಲ ಟ್ರೋಫಿ ಎತ್ತಿದ ಬೆಂಗಾಲ್ ವಾರಿಯರ್ಸ್ಪ್ರೊ ಕಬಡ್ಡಿ: ಡೆಲ್ಲಿ ಸೋಲಿಸಿ ಚೊಚ್ಚಲ ಟ್ರೋಫಿ ಎತ್ತಿದ ಬೆಂಗಾಲ್ ವಾರಿಯರ್ಸ್

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಹೆಚ್ಚು ರೈಡಿಂಗ್ ಅಂಕ ಗಳಿಸಿರುವ ಪವನ್ ಶೆರಾವತ್ ಭಾರತ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 1 ರಿಂದ 10ನೇ ತಾರೀಕಿನ ವರೆಗೆ ನೇಪಾಳದ ಕಾಠ್ಮಾಂಡುವಿನಲ್ಲಿ ನಡೆಯಲಿದೆ.

ಭಾರತೀಯ ಕಬಡ್ಡಿ ತಂಡ ಕಳದ ಬಾರಿ ಏಷಿಯನ್ ಕ್ರೀಡಾಕೂಟದ ತಂಡವನ್ನು ಹೋಲಿಸಿದರೆ ಸಮತೋಲನ ಆಟಗಾರರನ್ನು ಹೊಂದಿದೆ. ಆರು ಮಂದಿ ರಕ್ಷಣಾ ವಿಭಾಗದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಏಷಿಯಮ್‌ ಗೇಮ್ಸ್‌ಗೆ ಕೇವಲ ನಾಲ್ಕು ಮಂದಿ ರಕ್ಷಣಾ ಆಟಗಾರರು ತಂಡದಲ್ಲಿದ್ದರು. ಜಕಾರ್ತಾದಲ್ಲಿ ನಡೆದ ಏಷಿಯನ್ ಕ್ರಿಡಾಕೂಟದಲ್ಲಿ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತರಾಗಲು ಇದೇ ಕಾರಣ ಎಂದು ವಿಶ್ಲೇಷಣೆಯೂ ನಡೆದಿತ್ತು.

ಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿ

ತಂಡ:

ದೀಪಕ್ ನಿವಾಸ್ ಹೂಡಾ (ನಾಯಕ), ಪವನ್ ಶೆರಾವತ್ (ಉಪನಾಯಕ), ನಿತೇಶ್ ಕುಮಾರ್, ವಿಶಾಲ್ ಭಾರಧ್ವಾಜ್, ಸುನಿಲ್ ಕುಮಾರ್, ಪರ್ವೇಶ್ ಭೈನ್ಸ್‌ವಾಲ್, ನವೀನ್ ಕುಮಾರ್, ಪರ್ದೀಪ್ ನರ್ವಾಲ್, ಅಮಿತ್ ಹೂಡಾ, ಸುರೇಂದರ್ ನಾಡಾ, ವಿಕಾಸ್ ಕಂಡೋಲಿಯನ್, ಮತ್ತು ದರ್ಶನ್ ಕಾಡಿಯನ್

Story first published: Wednesday, November 27, 2019, 13:53 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X