ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರೀಮಿಯರ್‌ ಲೀಗ್‌ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

Karnataka Premier League 2019: Team List of All Seven Franchise

ಬೆಂಗಳೂರು, ಜುಲೈ 28: ವಿವಿಧ ಫ್ರಾಂಚೈಸಿಗಳು ಕರ್ನಾಟಕ ಪ್ರೀಮಿಯರ್‌ ಲೀಗ್‌ನ 2019ರ ಆವೃತ್ತಿ ಸಲುವಾಗಿ ಜುಲೈ 27ರಂದು (ಶನಿವಾರ) ನಡೆದ ಆಟಗಾರರ ಹರಾಜು ಪ್ರಕ್ರಿಕೆಯಲ್ಲಿ ಹಣದ ಹೊಳೆ ಹರಿಸಿ ತಮ್ಮ ತಮ್ಮ ತಂಡಗಳನ್ನು ರಚಿಸಿಯಾಗಿದೆ.

ಕಳೆದ ಬಾರಿ ಬೆಂಗಳೂರು ಬ್ಲಾಸ್ಟರ್ಸ್‌ ಪರ ಆಡಿದ್ದ ಪವನ್‌ ದೇಶಪಾಂಡೆ ಅವರನ್ನು ಈ ಬಾರಿ ಶಿವಮೊಗ್ಗ ಲಯನ್ಸ್‌ ತಂಡ ಬರೋಬ್ಬರಿ 7.30 ಲಕ್ಷ ರೂ.ಗಳ ಭಾರಿ ಮೊತ್ತ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಈ ಬಾರಿಯ ಕೆಪಿಎಲ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯ ಪ್ರಮುಖ ಹೈಲೈಟ್‌ ಆಗಿದೆ.

<strong>ಕೆಪಿಎಲ್ ಹರಾಜು: ಪಾಂಡೆ ಕಡೆಗಣನೆ, ದೇಶಪಾಂಡೆಗೆ ಭಾರಿ ಡಿಮ್ಯಾಂಡ್!</strong>ಕೆಪಿಎಲ್ ಹರಾಜು: ಪಾಂಡೆ ಕಡೆಗಣನೆ, ದೇಶಪಾಂಡೆಗೆ ಭಾರಿ ಡಿಮ್ಯಾಂಡ್!

ಇನ್ನು ರಾಷ್ಟ್ರೀಯ ತಂಡದ ಸೇವೆಗಳಲ್ಲಿ ನಿರತರಾಗಿರುವ ಸ್ಟಾರ್‌ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಅವರನ್ನು ಮೊದಲಿಗೆ ಯಾವ ತಂಡವೂ ಖರೀದಿಗೆ ಮುಂದಾಗಲಿಲ್ಲ. ಬಳಿಕ ಮರು ಹರಾಜಿನಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡ 2 ಲಕ್ಷ ರೂ. ಮೊತ್ತಕ್ಕೆ ಪಾಂಡೆ ಅವರನ್ನು ತನ್ನತ್ತ ಕರೆದುಕೊಂಡಿದೆ. ಆದರೆ, ಭಾರತ ತಂಡದ ಪರ ಒಡಿಐ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆದಿರುವ ಮನೀಶ್‌, ಕೆಪಿಎಲ್‌ನಲ್ಲಿ ಎಷ್ಟು ಪಂದ್ಯಗಳನ್ನು ಆಡಬಲ್ಲರು ಎಂಬುದನ್ನು ಕಾದು ನೋಡಬೇಕಿದೆ ಅಷ್ಟೇ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ ಆಗಸ್ಟ್‌ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಸೆಪ್ಟೆಂಬರ್‌ 1ರಂದು ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಇನ್ನು ವಿವಿಧ ತಂಡಗಳು ತಮ್ಮ ತಮ್ಮ ಆಟಗಾರರನ್ನು ಖರೀದಿಸಿಯಾಗಿದ್ದು, ಯಾವ ತಂಡಗಳಲ್ಲಿ ಯಾರೆಲ್ಲಾ ಆಡುತ್ತಿದ್ದಾರೆ ಎಂಬುದರ ಸಂಪೂರ್ಣ ವಿವರವನ್ನು ಮೈಖೇಲ್‌ ಕನ್ನಡ ಇಲ್ಲಿ ನೀಡಿದೆ.

ಬೆಂಗಳೂರು ಬ್ಲಾಸ್ಟರ್ಸ್‌

ಬೆಂಗಳೂರು ಬ್ಲಾಸ್ಟರ್ಸ್‌

ಕೌಶಿಕ್‌ ವಿ., ಮನೋಜ್‌ ಭಾಂಡಗೆ, ರೋಹನ್‌ ಕದಮ್‌, ಶರತ್‌ ಬಿ.ಆರ್‌ , ಭರತ್‌ ಡಿ., ಅನಿಲ್‌ ಐ.ಜಿ., ಆನಂದ್‌ ದೊಡ್ಡಮನಿ, ಅನುರಾಗ್‌ ಬಾಜ್ಪಾಯ್‌, ನಿಕಿನ್‌ ಜೋಸ್‌, ನಾಗ ಭರತ್‌, ನಿಶಾಂತ್‌ ಸಿಂಗ್‌ ಶೇಖಾವತ್‌, ಜೊನಾಥನ್‌ ಆರ್‌., ಭರತ್‌ ಧುರಿ, ಮುತ್ತಣ್ಣ ಚಂದ್ರಶೇಖರ್‌, ಕಿಶೋರ್‌ ಕಾಮತ್‌, ಕುಲ್ದೀಪ್‌ ಕುಮಾರ್‌, ರಿಶಿ ಬೋಪಣ್ಣ, ಆದಿತ್ಯ ಗೋಯಲ್‌.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.85 ಲಕ್ಷ ರೂ.

ಶಿವಮೊಗ್ಗ ಲಯನ್ಸ್‌

ಶಿವಮೊಗ್ಗ ಲಯನ್ಸ್‌

ಅಭಿಮನ್ಯ ಮಿಥುನ್‌, ಪ್ರದೀಪ್‌ ಟಿ., ಪವನ್‌ ದೇಶಪಾಂಡೆ, ನಿಹಾಲ್‌ ಉಲ್ಲಾಳ್‌, ಪೃಥ್ವಿರಾಜ್‌ ಶೇಖಾವತ್‌, ರಿಷಭ್‌ ಸಿಂಗ್‌, ರೋಹಿತ್‌ ಗೌಡ, ಅರ್ಜುನ್‌ ಹೊಯ್ಸಳ, ಅಕ್ಷಯ್‌ ಬಲ್ಲಾಳ್‌, ನಿಧೀಶ್‌ ಎಂ., ರೋಹಿತ್‌ ಕೆ., ಪ್ರಶಾಂತ್‌ ಎಚ್‌.ಎಸ್‌, ಹೊಯ್ಸಳ ಕೆ., ಪ್ರದೀಪ್‌ ಗಂಗಾಧರ್‌, ಶಿವರಾಜ್‌ ಎಸ್‌., ಸುಜಿತ್‌ ಎನ್‌. ಗೌಡ, ಎಸ್‌.ಪಿ ಮಂಜುನಾಥ್‌.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 27.35 ಲಕ್ಷ ರೂ.

ಮೈಸೂರು ವಾರಿಯರ್ಸ್‌

ಮೈಸೂರು ವಾರಿಯರ್ಸ್‌

ಸುಚಿತ್‌ ಜೆ., ವೈಶಾಖ್‌ ವಿಜಯ್‌ ಕುಮಾರ್‌, ಸಿದ್ಧಾರ್ಥ್‌ ಕೆ.ವಿ., ಅಮಿತ್‌ ವರ್ಮಾ, ಅನಿರುದ್ಧ ಜೋಶಿ, ಕುಶಲ್‌ ಎಂ. ವಾಧ್ವಾನಿ, ವಿನಯ್‌ ಎನ್‌ ಸಾಗರ್‌, ವೆಂಕಟೇಶ್‌ ಎಂ., ಶೊಯೇಬ್‌ ಮ್ಯಾನೇಜರ್‌, ದೇವಯ್ಯ ಕೆ.ಎಸ್‌, ಸೌರಭ್‌ ಯಾದವ್‌, ಮಂಜೇಶ್‌ ರೆಡ್ಡಿ ಎನ್‌.ವಿ., ಸಂಕಲ್ಪ್‌ ಪಿ., ಬಿ.ಯು ಶಿವಶಂಕರ್‌, ರಾಮ್‌ ಸಾರಿಕ್‌ ಯಾದವ್‌, ಜಯೇಶ್‌ ಬಾಬು, ಕಿಶನ್‌ ಬಿದರೆ, ಡಿ. ನಿಶ್ಚಲ್‌.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 30.00 ಲಕ್ಷ ರೂ.

ಹುಬ್ಬಳ್ಳಿ ಟೈಗರ್ಸ್‌

ಹುಬ್ಬಳ್ಳಿ ಟೈಗರ್ಸ್‌

ಆರ್‌. ವಿನಯ್‌ ಕುಮಾರ್‌, ಪ್ರವೀಣ್‌ ದುಬೇ, ಶಿಶಿರ್‌ ಭವಾನೆ, ಆದಿತ್ಯ ಸೋಮಣ್ಣ, ಮೊಹಮ್ಮದ್‌ ತಾಹ, ಶಿವಿಲ್‌ ಕೌಶಿಕ್‌, ಮಹೇಶ್‌ ಪಟೇಲ್‌, ಸೂರಜ್‌ ಶೇಶಾದ್ರಿ, ಮಿತ್ರಕಾಂತ್‌ ಯಾದವ್‌, ವಿಶ್ವನಾಥ್‌ ಎಂ., ಶ್ರೀಜಿತ್‌ ಕೆ.ಎಲ್‌., ಪವನ್‌ ಕೆ.ಬಿ., ಡೇವಿಡ್‌ ಮಥಿಯಾಸ್‌, ವಿದ್ಯಾಧರ್‌ ಪಾಟಿಲ್‌, ಅಭಿಲಾಶ್ ಶೆಟ್ಟಿ, ಪರೀಕ್ಷಿತ್‌ ಶೆಟ್ಟಿ, ಧೀರಜ್‌ ಶಶಿಧರ್‌.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 29.25 ಲಕ್ಷ ರೂ.

ಬಳ್ಳಾರಿ ಟಸ್ಕರ್ಸ್‌

ಬಳ್ಳಾರಿ ಟಸ್ಕರ್ಸ್‌

ಸಿ.ಎಂ. ಗೌತಮ್‌, ದೇವದತ್‌ ಪಡಿಕಲ್‌, ಗೌತಮ್‌ ಕೆ., ಅಭಿಷೇಕ್‌ ರೆಡ್ಡಿ, ಕಾರ್ತಿಕ್‌ ಸಿ.ಎ., ಪ್ರಸಿಧ್ ಕೃಷ್ಣ, ಅಬ್ರಾರ್‌ ಖಾಝಿ, ಕೆ.ಪಿ ಅಪ್ಪಣ್ಣ, ಝೀಶಾನ್‌ ಅಲಿ ಸೈಯದ್‌, ಮೊಹಮ್ಮದ್‌ ನಿಯಾಸ್‌ ನಿಝಾರ್‌, ಭವೇಶ್‌ ಗುಲೇಚ, ರುಚಿರ್‌ ಜೋಶಿ, ಸ್ಯಾಂತೋಕ್‌ ಸಿಂಗ್‌, ವಿಷ್ಣು ಪ್ರಿಯನ್‌, ಗೌರವ್‌ ಧಿಮಾನ್‌, ಶರತ್‌ ಶ್ರೀನಿವಾಸ್‌, ಸೂರಜ್‌ ರೆಡ್ಡಿ, ಶರಣ ಬಸವ.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.65 ಲಕ್ಷ ರೂ.

ಬಿಜಾಪುರ್‌ ಬುಲ್ಸ್‌

ಬಿಜಾಪುರ್‌ ಬುಲ್ಸ್‌

ಭರತ್‌ ಚಿಪ್ಲಿ, ಕೆ.ಚಿ ಕಾರಿಯಪ್ಪ, ಪ್ರತೀಕ್‌ ಜೈನ್‌, ನವೀನ್‌ ಎಂ.ಜಿ., ಪ್ರಣವ್‌ ಭಾಟಿಯಾ, ಶಿಮೊನ್‌ ಲೂಯ್ಝ್‌, ಬಿ.ಎ. ಮೋಹಿತ್‌, ಜಿ.ಎಸ್‌ ಚಿರಂಜೀವಿ, ಸ್ವಪ್ನಿಲ್‌ ಶಿವಾಜಿ ಯೆಳವೆ, ಸುನಿಲ್‌ ರಾಜು, ಸಮರ್ಥ್‌ ಊಟಿ, ಲಿಯಾನ್‌ ಖಾನ್‌, ಭರತ್‌ ಎಂ.ಪಿ., ಪಿ. ಪ್ರವೀಣ್‌ ಕುಮಾರ್‌, ಸೂರಜ್‌ ಕಾಮತ್‌, ಎಸ್‌.ಎಲ್‌ ಅಕ್ಷಯ್‌, ಜಶ್ವಂತ್‌ ಆಚಾರ್ಯ, ರಾಜೂ ಭಟ್ಕಳ್‌.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 27.10 ಲಕ್ಷ ರೂ.

ಬೆಳಗಾವಿ ಪ್ಯಾಂಥರ್ಸ್‌

ಬೆಳಗಾವಿ ಪ್ಯಾಂಥರ್ಸ್‌

ಶುಭಾಂಗ್‌ ಹಗಡೆ, ದಿಕ್ಷಾನ್ಷು ನೇಗಿ, ಸ್ಟ್ಯಾಲಿನ್‌ ಹೂವರ್‌, ಆರ್‌. ಸಮರ್ಥ್‌, ಮನೀಶ್‌ ಪಾಂಡೆ, ಅವಿನಾಶ್ ಡಿ., ರಿತೇಶ್‌ ಭಟ್ಕಳ್‌, ಎ.ಎಮ್‌ ಕಿರಣ್‌, ಎಸ್‌ ರಕ್ಷಿತ್‌, ಅಭಿನವ್‌ ಮನೋಹರ್‌, ಮಿರ್‌ ಕೌನೇನ್‌ ಅಬ್ಬಾಸ್‌, ಅಬ್ದುಲ್‌ ಮಾಜಿದ್‌, ಅರ್ಶ್‌ ದೀಪ್‌ ಬ್ರಾರ್‌, ಎಂ.ಬಿ ದರ್ಶನ್‌, ಶರಣ್‌ ಗೌಡ, ಲೋಚನ್‌ ಅಪ್ಪಣ್ಣ, ಬಿ.ಒ ದರ್ಶನ್‌ ಮಾಚಯ್ಯ, ಝಹೂರ್‌ ಫಾರೂಕಿ.
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.70 ಲಕ್ಷ ರೂ.

Story first published: Sunday, July 28, 2019, 16:39 [IST]
Other articles published on Jul 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X