ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈ

Nammura Pratibhe: Karnataka Kabaddi player Prashanth Kumar rai life and his achievement

ಕ್ರೀಡಾ ಕ್ಷೇತ್ರದಲ್ಲಿ ಕಬಡ್ಡಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಪ್ರೋ ಕಬಡ್ಡಿ ಲೀಗ್ ದೇಶದ ಅನೇಕ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಮಿಂಚುತ್ತಿರುವ ಕರ್ನಾಟಕದ ದಕ್ಷಿಣ ಕನ್ನಡದ ಪ್ರತಿಭೆ ಪ್ರಶಾಂತ್ ಕುಮಾರ್ ರೈ. ಕಬಡ್ಡಿ ಮೇಲೆ ಅತೀವ ಆಸಕ್ತಿ ಹೊಂದಿದ್ದ ಪ್ರಶಾಂತ್ ಕುಮಾರ್ ರೈ ಈಗ ಪ್ರೋ ಕಬಡ್ಡಿಯಲ್ಲಿ ತಂಡವೊಂದನ್ನು ಮುನ್ನಡೆಸುತ್ತಿರುವ ನಾಯಕನಾಗಿದ್ದಾರೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಕೂಡ ಪ್ರಶಾಂತ್ ಕುಮಾರ್ ರೈ ಮುಡಿಗೇರಿಸಿಕೊಂಡಿದ್ದಾರೆ.

ಕಬಡ್ಡಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈ ಅವರ ಕ್ರೀಡಾ ಬದುಕಿನ ಹಾದಿ ಸುಲಭದ್ದಾಗಿರಲಿಲ್ಲ. ಸಾಮಾನ್ಯ ಕುಟುಂಬದಿಂದ ಬಂದ ಪ್ರಶಾಂತ್ ಕುಮಾರ್ ಅವರ ಈ ಪಯಣ ಹಾಗೂ ಅವರ ಸಾಧನೆಯ ಬಗ್ಗೆ ಮೈಖೇಲ್ ಕನ್ನಡ ಕುತೂಹಲಕಾರಿ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದೆ.

ನಮ್ಮೂರ ಪ್ರತಿಭೆ: ಜೋಧಪುರದಿಂದ ಬಂದು ಕರ್ನಾಟಕದಲ್ಲಿ ಮಿಂಚಿದ ಕರುಣ್ ನಾಯರ್ನಮ್ಮೂರ ಪ್ರತಿಭೆ: ಜೋಧಪುರದಿಂದ ಬಂದು ಕರ್ನಾಟಕದಲ್ಲಿ ಮಿಂಚಿದ ಕರುಣ್ ನಾಯರ್

ವೈಟ್‌ಲಿಫ್ಟರ್ ಆಗಬೇಕೆಂದುಕೊಂಡಿದ್ದ ಪ್ರಶಾಂತ್ ಕುಮಾರ್

ವೈಟ್‌ಲಿಫ್ಟರ್ ಆಗಬೇಕೆಂದುಕೊಂಡಿದ್ದ ಪ್ರಶಾಂತ್ ಕುಮಾರ್

ಪ್ರಸ್ತುತ ಕಬಡ್ಡಿ ಮೈದಾನದಲ್ಲಿ ರೈಡರ್ ಆಗಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ಶಾಲಾ ದಿನಗಳಲ್ಲಿ ಕಬಡ್ಡಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಾಗಿರಲಿಲ್ಲ. ಆದರೆ ಪಿಯುಸಿಗಾಗಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಕಾಲಿಟ್ಟ ಅವರಿಗೆ ಕಬಡ್ಡಿ ಅಂಗಳ ಕೈಬೀಸಿ ಕರೆದಿತ್ತು. ಹೀಗಾಗಿ ಆರಂಭದಲ್ಲಿ ವೈಟ್‌ಲಿಫ್ಟರ್ ಆಗಬೇಕೆಂದು ಕನಸು ಕಂಡಿದ್ದ ಪ್ರಶಾಂತ್ ನಂತರ ಕಬಡ್ಡಿಯತ್ತ ಗಮನಹರಿಸಿದರು. ಈ ಹಂತದಲ್ಲಿ ಉತ್ತಮ ಕೋಚ್‌ಗಳು ಪ್ರಶಾಂತ್ ಕುಮಾರ್‌ಗೆ ದೊರೆತಿದ್ದು ಅವರಲ್ಲಿ ಕೌಶಲ್ಯ ಮತ್ತಷ್ಟು ಉತ್ತಮಗೊಳ್ಳಲು ಕಾರಣವಾಯಿತು.

ಕರ್ನಾಟಕವನ್ನು ಪ್ರತಿನಿಧಿಸುವ ಮಟ್ಟಿಗೆ ಬೆಳೆದ ಪ್ರಶಾಂತ್

ಕರ್ನಾಟಕವನ್ನು ಪ್ರತಿನಿಧಿಸುವ ಮಟ್ಟಿಗೆ ಬೆಳೆದ ಪ್ರಶಾಂತ್

ಪ್ರಸ್ತುತ ಕಬಡ್ಡಿ ಮೈದಾನದಲ್ಲಿ ರೈಡರ್ ಆಗಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ಶಾಲಾ ದಿನಗಳಲ್ಲಿ ಕಬಡ್ಡಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಾಗಿರಲಿಲ್ಲ. ಆದರೆ ಪಿಯುಸಿಗಾಗಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಕಾಲಿಟ್ಟ ಅವರಿಗೆ ಕಬಡ್ಡಿ ಅಂಗಳ ಕೈಬೀಸಿ ಕರೆದಿತ್ತು. ಹೀಗಾಗಿ ಆರಂಭದಲ್ಲಿ ವೈಟ್‌ಲಿಫ್ಟರ್ ಆಗಬೇಕೆಂದು ಕನಸು ಕಂಡಿದ್ದ ಪ್ರಶಾಂತ್ ನಂತರ ಕಬಡ್ಡಿಯತ್ತ ಗಮನಹರಿಸಿದರು. ಈ ಹಂತದಲ್ಲಿ ಉತ್ತಮ ಕೋಚ್‌ಗಳು ಪ್ರಶಾಂತ್ ಕುಮಾರ್‌ಗೆ ದೊರೆತಿದ್ದು ಅವರಲ್ಲಿ ಕೌಶಲ್ಯ ಮತ್ತಷ್ಟು ಉತ್ತಮಗೊಳ್ಳಲು ಕಾರಣವಾಯಿತು.

ಪ್ರೊ ಕಬಡ್ಡಿಯಲ್ಲಿ ಮಿಂಚಿದ ಕನ್ನಡಿಗ

ಪ್ರೊ ಕಬಡ್ಡಿಯಲ್ಲಿ ಮಿಂಚಿದ ಕನ್ನಡಿಗ

ಕರ್ನಾಟಕ ಕಬಡ್ಡಿ ತಂಡದಲ್ಲಿ ಮಿಂಚಿದ್ದರೂ ಪ್ರೋ ಕಬಡ್ಡಿ ಲೀಗ್‌ನಲ್ಲಿಯೂ ಪ್ರಶಾಂತ್ ಕುಮಾರ್ ಹಾದಿ ಸುಗಮವಾಗಿರಲಿಲ್ಲ. ಆರಂಭಿಕ ಮೂರು ಆವೃತ್ತಿಯಲ್ಲಿ ಸೂಕ್ತ ಅವಕಾಶ ಸಿಗದೆ ಪ್ರಶಾಂತ್ ನಿರಾಸೆ ಅನುಭವಿಸಿದ್ದರು. ಆದರೆ ನಾಲ್ಕನೇ ಆವೃತ್ತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಈ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ನಂತರ ಪ್ರಶಾಂತ್ ಕುಮಾರ್ ಹಿಂದಿರುಗಿ ನೋಡಲೇ ಇಲ್ಲ. ನಾಲ್ಕನೇ ಆವೃತ್ತಿಯಲ್ಲಿ ಡೆಲ್ಲಿ ದಬಾಂಗ್ ತಂಡಕ್ಕೆ 13 ಲಕ್ಷಕ್ಕೆ ಹರಾಜಾಗಿದ್ದ ಪ್ರಶಾಂತ್ ಐದನೇ ಆವೃತ್ತಿಯಲ್ಲಿ 21 ಲಕ್ಷಕ್ಕೆ ಹರಾಜಾಗಿದ್ದರು. 6ನೇ ಆವೃತ್ತಿಯಲ್ಲಿ 79 ಲಕ್ಷ ಮೊತ್ತಕ್ಕೆ ಯುಪಿ ಯೋಧ ತಂಡದ ಪಾಲಾಗಿದ್ದ ಅವರು 7ನೇ ಆವೃತ್ತಿಯಲ್ಲಿ 77 ಲಕ್ಷ ಮೊತ್ತಕ್ಕೆ ಹರ್ಯಾಣ ಸ್ಟೀಲರ್ಸ್ ಪಾಲಾಗಿದ್ದರು. ಇತ್ತೀಚೆಗಷ್ಟೇ ಅಂತ್ಯವಾಗಿರುವ 8ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಪಾಲಾದ ಅವರು ತಂಡದ ನಾಯಕನಾಗಿಯೂ ಮುನ್ನಡೆಸಿದ್ದಾರೆ. ಈಗ ದೇಶ ಅಗ್ರ ರೈಡರ್‌ಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡದ ಈ ಆಟಗಾರ ಕೂಡ ಗುರುತಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡದ ಪುತ್ತೂರು ಪ್ರಶಾಂತ್ ತವರು

ದಕ್ಷಿಣ ಕನ್ನಡದ ಪುತ್ತೂರು ಪ್ರಶಾಂತ್ ತವರು

ಪ್ರಶಾಂತ್ ಕುಮಾರ್ ರೈ ಮೂಲತಃ ಪುತ್ತೂರಿನ ಒಳಮೊಗ್ರು ಗ್ರಾಮದ ಕೈಕಾರ ಎಂಬ ಪುಟ್ಟ ಹಳ್ಳಿಯವರು. ತಂದೆ ಸೀತಾರಾಮ್ ಹಾಗೂ ತಾಯಿ ಸತ್ಯವತಿ ರೈ. ಪುತ್ತೂರಿನಲ್ಲಿಯೇ ಶಿಕ್ಷಣವನ್ನು ಪೂರೈಸಿದ ಪ್ರಶಾಂತ್ ನಂತರ ಉದ್ಯೋಗ ಹಾಗೂ ಕಬಡ್ಡಿಯ ಕಾರಣಕ್ಕೆ ಬೆಂಗಳೂರಿನಲ್ಲಿ ಪತ್ನಿ ವಜ್ರೇಶ್ವರಿ ರೈ ಹಾಗೂ ಪುತ್ರ ಶತಾಯು ರೈ ಜೊತೆಗೆ ವಾಸವಿದ್ದಾರೆ. ಕಬಡ್ಡಿಯಲ್ಲಿ ಮಾಡಿದ ಸಾಧನೆಗಾಗಿ ಸಾಕಷ್ಟು ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರಶಾಂತ್ ಕುಮಾರ್ ಇತ್ತೀಚೆಗೆ ರಾಜ್ಯ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿಗೂ ಭಾಜನವಾಗಿದ್ದಾರೆ.

Story first published: Wednesday, May 11, 2022, 15:12 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X