ನಮ್ಮೂರ ಪ್ರತಿಭೆ: ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ಕರ್ನಾಟಕದ ಕ್ರೀಡಾ ರತ್ನ ರಕ್ಷಿತ್ ಎಸ್.

ರಕ್ಷಿತ್. ಎಸ್‌ , ಪ್ರೊ ಕಬಡ್ಡಿ ಮೂಲಕ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಕಬಡ್ಡಿ ಆಟಗಾರ. ಮೈಸೂರಿನ ರಕ್ಷಿತ್‌ ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಕಬಡ್ಡಿಯಲ್ಲಿ ತಮ್ಮ ಕೌಶಲ್ಯವನ್ನ ಪ್ರದರ್ಶಿಸಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಸ್ಪರ್ಧೆಯಲ್ಲಿ ಪ್ರತಿನಿಧಿಸಿರುವ ಕನ್ನಡಿಗ ರಕ್ಷಿತ್. ಎಸ್‌ ಕುರಿತಾಗಿ ನಿಮಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ರಕ್ಷಿತ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ರಕ್ಷಿತ್ ಬಾಲ್ಯ ಜೀವನ

ರಕ್ಷಿತ್ ಬಾಲ್ಯ ಜೀವನ

ಅಂತರಾಷ್ಟ್ರೀಯ ಕಬಡ್ಡಿ ಆಟಗಾರನಾಗಿರುವ ರಕ್ಷಿತ್ ಮೈಸೂರಿನ ಕುಂಬಾರಕೊಪ್ಪಲಿನವರು. ಅವರ ತಂದೆ ಶಂಕರ ಪೂಜಾರಿ ಮತ್ತು ತಾಯಿ ಗೀತಾರವರು.

ಕುಂಬಾರಕೊಪ್ಪಲಿನಲ್ಲಿ ಯಂಗ್‌ಸ್ಟರ್ಸ್ ಎಂಬ ಕಬಡ್ಡಿ ತಂಡದ ಆಟದಲ್ಲಿ ಭಾಗವಹಿಸುವ ಮೂಲಕ ಕಬಡ್ಡಿ ಆಟ ಆರಂಭಿಸಿದ ರಕ್ಷಿತ್‌, ಆಳ್ವಾಸ್‌ನಲ್ಲಿ ಪದವಿಯನ್ನು ಸಹ ಪೂರೈಸಿದ್ದಾರೆ. ರಕ್ಷಿತ್‌ಗೆ ಶಾಲಾ ದಿನಗಳಿಂದಲೂ ಕಬಡ್ಡಿ ಅಂದ್ರೆ ಎಲ್ಲಿಲ್ಲದ ಆಸಕ್ತಿ. ಅದ್ರಲ್ಲೂ ಕಾಲೇಜಿನ ಅವಧಿಯಲ್ಲಿ ಇವರಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದ್ದು, ಅವರಲ್ಲಿನ ಕಬಡ್ಡಿ ಪ್ರತಿಭೆಯು ಹೊರಬಂದಿತು.

ಯಂಗ್‌ಸ್ಟರ್ಸ್‌ ತಂಡದಲ್ಲಿ ಆರಂಭಿಕ ದಿನಗಳಲ್ಲಿ ಆಡಿದ ರಕ್ಷಿತ್ ಆಳ್ವಾಸ್‌ ಕಾಲೇಜಿಗೆ ತೆರಳಿದ ಬಳಿಕ ಅಲ್ಲಿ ಸಿಕ್ಕಂತಹ ಪ್ರೋತ್ಸಾಹ ಮತ್ತು ಸೌಲಭ್ಯದಿಂದಾಗಿ ಕಬಡ್ಡಿಯಲ್ಲಿ ಒಂದೊಂದೇ ಹಂತವನ್ನು ಏರಿದರು.

ನಮ್ಮೂರ ಪ್ರತಿಭೆ: ಬಲು ಕಠಿಣ 'ಐರನ್‌ಮ್ಯಾನ್ ಟ್ರಯಥ್ಲಾನ್' ಪೂರ್ತಿಗೊಳಿಸಿ ದಾಖಲೆ ಬರೆದ ಕನ್ನಡಿಗ ಶ್ರೇಯಸ್ ಹೊಸೂರು

ಭಾರತ ಸೀನಿಯರ್ ತಂಡದ ಪರ ಆಡಬೇಕು ಎಂಬ ಕನಸಿದೆ

ಭಾರತ ಸೀನಿಯರ್ ತಂಡದ ಪರ ಆಡಬೇಕು ಎಂಬ ಕನಸಿದೆ

ಆರಂಭಿಕ ಹಂತದಲ್ಲಿ ಕರ್ನಾಟಕ ತಂಡದ ಪರ ಆಡ್ಬೇಕು ಎಂಬ ಕನಸು ಕಟ್ಟಿಕೊಂಡಿದ್ದ ರಕ್ಷಿತ್, ರಾಜ್ಯದ ಪರ ಪ್ರದರ್ಶನ ನೀಡಿದ ಬಳಿಕ ರಾಷ್ಟ್ರೀಯ ಸೀನಿಯರ್ ತಂಡದ ಪರ ಕಣಕ್ಕಿಳಿಯಬೇಕೆಂಬ ಗುರಿಯನ್ನ ನೆಟ್ಟಿದ್ದಾರೆ.

ಭಾರತ ಜ್ಯೂನಿಯರ್ ತಂಡದಲ್ಲಿ ಈಗಾಗಲೇ ಸ್ಪರ್ಧಿಸಿರುವ ರಕ್ಷಿತ್. ಎಸ್‌ ಮುಂದೊಂದು ದಿನ ಭಾರತದ ಹಿರಿಯ ಕಬಡ್ಡಿ ತಂಡದ ಪರ ಆಡ್ಬೇಕು. ದೇಶಕ್ಕೆ ಮತ್ತು ನಮ್ಮ ಮೈಸೂರಿಗೆ ಕೀರ್ತಿ ತರಬೇಕು ಎಂಬ ಮಹಾದಾಸೆ ಹೊಂದಿದ್ದಾರೆ.

ನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡ

ಅಜಯ್ ಠಾಕೂರ್‌ ರೋಲ್‌ ಮಾಡೆಲ್

ಅಜಯ್ ಠಾಕೂರ್‌ ರೋಲ್‌ ಮಾಡೆಲ್

ರಕ್ಷಿತ್‌ಗೆ ಭಾರತ ಸೀನಿಯರ್ ತಂಡದ ಮಾಜಿ ನಾಯಕ ಅಜಯ್ ಠಾಕೂರ್ ಅಂದ್ರೆ ಬಹಳ ಇಷ್ಟ. ಠಾಕೂರ್ ಆಟ ಮತ್ತು ಎದುರಾಳಿಗೆ ಅವರು ಕೊಡುವ ಗೌರವ ರಕ್ಷಿತ್‌ಗೆ ತುಂಬಾನೆ ಸ್ಫೂರ್ತಿ ನೀಡಿದೆಯಂತೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಲ್ಲಿ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲಬೇಕು ಮತ್ತು ರಾಜ್ಯಕ್ಕೆ ಗೌರವ ತಂದುಕೊಡುವ ಭರವಸೆ ಹೊಂದಿದ್ದಾರೆ.

ರಕ್ಷಿತ್ ಕಬಡ್ಡಿ ಸಾಧನೆಗಳು

ರಕ್ಷಿತ್ ಕಬಡ್ಡಿ ಸಾಧನೆಗಳು

ನಾಲ್ಕನೇ ಜೂನಿಯರ್ ಏಷ್ಯನ್ ಚಾಂಪಿಯನ್ ಶಿಪ್‌ನಲ್ಲಿ- ಚಿನ್ನದ ಪದಕ

ಉಡುಪಿಯಲ್ಲಿ ನಡೆದ ಸೌತ್ ಜೋನ್ ಇಂಟರ್ ಯೂನಿವರ್ಸಿಟಿ ಗೇಮ್‌ನಲ್ಲಿ- ಚಿನ್ನದ ಪದಕ

ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಟೂರ್ನಮೆಂಟ್‌ನಲ್ಲಿ- ಕಂಚಿನ ಪದಕ

ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ನಡೆದ 42 , 43ನೇ ಜೂನಿಯರ್ ನ್ಯಾಷನಲ್‌ನಲ್ಲಿ ಭಾಗವಹಿಸುವಿಕೆ

ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದ 62 ಮತ್ತು 63 ಹೆಚ್‌ಸಿಎಫ್‌ ನ್ಯಾಷನಲ್ಸ್‌ನಲ್ಲಿ ಭಾಗವಹಿಸಿದ್ದಾರೆ

ಪ್ರೊ ಕಬಡ್ಡಿಯಲ್ಲಿ ಐದು ಮತ್ತು ಆರನೇ ಸೀಸನ್‌ನಲ್ಲಿ ತೆಲುಗು ಟೈಟನ್ಸ್ ಪರ ಮಿಂಚಿದ್ದ ರಕ್ಷಿತ್‌

2019ರಲ್ಲಿ ಕರ್ನಾಟಕ ಸರ್ಕಾರದಿಂದ ಕ್ರೀಡಾ ರತ್ನ ಪ್ರಶಸ್ತಿ ಗೌರವ

For Quick Alerts
ALLOW NOTIFICATIONS
For Daily Alerts
Story first published: Tuesday, June 14, 2022, 19:31 [IST]
Other articles published on Jun 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X