ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಜನವರಿ 15ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 2021, January 15: All matches preview, Predicted 7, Head to head details and live streaming

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 14ರ ಶುಕ್ರವಾರದವರೆಗೂ ಒಟ್ಟು 54 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದ್ದರೆ, ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನ ಮತ್ತು ದಬಾಂಗ್ ಡೆಲ್ಲಿ ತೃತೀಯ ಸ್ಥಾನದಲ್ಲಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 54 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 15 ) ಒಟ್ಟು 3 ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ ಹಾಗೂ ಮೂರನೇ ಪಂದ್ಯದಲ್ಲಿ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 3 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!

ಪಂದ್ಯ 1: ಹರಿಯಾಣ ಸ್ಟೀಲರ್ಸ್ vs ದಬಾಂಗ್ ಡೆಲ್ಲಿ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ಉತ್ತಮ ಹಂತದಲ್ಲಿದ್ದರೆ, ಕಳಪೆ ಪ್ರದರ್ಶನ ನೀಡಿರುವ ಹರಿಯಾಣ ಸ್ಟೀಲರ್ಸ್ ಸಾಮಾನ್ಯ ಸ್ಥಾನವನ್ನು ಪಡೆದುಕೊಂಡಿದೆ. 9 ಪಂದ್ಯಗಳನ್ನಾಡಿ 5 ಪಂದ್ಯಗಳನ್ನು ಗೆದ್ದು, 2 ಪಂದ್ಯಗಳಲ್ಲಿ ಸೋತು, ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 32 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದರೆ, 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು, ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 23 ಅಂಕಗಳನ್ನು ಹೊಂದಿರುವ ಹರಿಯಾಣ ಸ್ಟೀಲರ್ಸ್ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳು ಸೆಣಸಾಟ ನಡೆಸಲಿರುವ ಇಂದಿನ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 55ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಹರಿಯಾಣ ಸ್ಟೀಲರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ನಡೆದಿರುವ 8 ಮುಖಾಮುಖಿ ಪಂದ್ಯಗಳಲ್ಲಿ ಹರಿಯಾಣ ಸ್ಟೀಲರ್ಸ್ 6 ಪಂದ್ಯಗಳಲ್ಲಿ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಪಡೆದುಕೊಂಡಿದ್ದರೆ, ದಬಾಂಗ್ ಡೆಲ್ಲಿ 2 ಪಂದ್ಯಗಳಲ್ಲಿ ಗೆದ್ದಿದೆ.

ಹರಿಯಾಣ ಸ್ಟೀಲರ್ಸ್ ಸಂಭಾವ್ಯ ಆಡುವ ಬಳಗ: ವಿಕಾಶ್ ಕಾಂಡೋಲಾ (ರೈಡರ್) ಮೀಟು ಶರ್ಮಾ (ರೈಡರ್) ವಿನಯ್ ತೆವಾಟಿಯಾ (ರೈಡರ್) ಜೈದೀಪ್ ದಹಿಯಾ (ಎಡ ಕವರ್) ಮೋಹಿತ್ ನಂದಲ್ (ಬಲ ಕವರ್) ಸುರೇಂದರ್ ನಾಡಾ (ಎಡ ಮೂಲೆ) ರವಿಕುಮಾರ್ (ಬಲ ಮೂಲೆ)

ದಬಾಂಗ್ ಡೆಲ್ಲಿ ಸಂಭಾವ್ಯ ಆಡುವ ಬಳಗ: ಅಜಯ್ ಠಾಕೂರ್ (ರೈಡರ್) ವಿಜಯ್ ಮಲಿಕ್ (ರೈಡರ್) ಅಶು ಮಲಿಕ್ (ರೈಡರ್) ಜೀವ ಕುಮಾರ್ (ಎಡ ಕವರ್) ಮಂಜೀತ್ ಛಿಲ್ಲರ್ (ಬಲ ಕವರ್) ಜೋಗಿಂದರ್ ನರ್ವಾಲ್ (ಎಡ ಮೂಲೆ) ಸಂದೀಪ್ ನರ್ವಾಲ್ (ಬಲ ಮೂಲೆ)

ಪಂದ್ಯ 2: ಯುಪಿ ಯೋಧಾ vs ತೆಲುಗು ಟೈಟಾನ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ಯುಪಿ ಯೋಧಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವುದರ ಮೂಲಕ 23 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಟೂರ್ನಿಯಲ್ಲಿ ಇಲ್ಲಿಯವರೆಗೂ ಯಾವುದೇ ಪಂದ್ಯವನ್ನು ಕೂಡ ಗೆಲ್ಲದೇ ಇರುವ ತೆಲುಗು ಟೈಟಾನ್ಸ್ ಆಡಿರುವ ಒಟ್ಟು 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು, ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 10 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಇನ್ನು ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್ ತಂಡಗಳ ನಡುವೆ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ನಡೆದಿರುವ ಒಟ್ಟು 8 ಮುಖಾಮುಖಿ ಪಂದ್ಯಗಳಲ್ಲಿ ಯುಪಿ ಯೋಧಾ 4 ಪಂದ್ಯಗಳಲ್ಲಿ ಜಯ ಸಾಧಿಸಿ ಮುನ್ನಡೆಯನ್ನು ಸಾಧಿಸಿದ್ದರೆ, ತೆಲುಗು ಟೈಟಾನ್ಸ್ ಕೇವಲ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಆವೃತ್ತಿಯ 56ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭವಾಗಲಿದೆ.

ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!

ಯುಪಿ ಯೋಧಾ ಸಂಭಾವ್ಯ ಆಡುವ ಬಳಗ: ಪರ್ದೀಪ್ ನರ್ವಾಲ್ (ರೈಡರ್) ಸುರೇಂದರ್ ಗಿಲ್ (ರೈಡರ್) ಶ್ರೀಕಾಂತ್ ಜಾಧವ್ (ರೈಡರ್) ಶುಭಂ ಕುಮಾರ್ ಬಲಿಯಾನ್ (ಎಡ ಕವರ್) ಅಶು ಸಿಂಗ್ (ಬಲ ಮುಖಪುಟ) ಸುಮಿತ್ ಸಾಂಗ್ವಾನ್ (ಎಡ ಮೂಲೆ) ನಿತೇಶ್ ಕುಮಾರ್ (ಬಲ ಮೂಲೆ)

ತೆಲುಗು ಟೈಟಾನ್ಸ್ ಸಂಭಾವ್ಯ ಆಡುವ ಬಳಗ: ರಜನೀಶ್ ದಲಾಲ್ (ರೈಡರ್) ಅಂಕಿತ್ ಬೇನಿವಾಲ್ (ರೈಡರ್) ಆದರ್ಶ್ ಟಿ (ರೈಡರ್) ಸಿ ಅರುಣ್ (ಎಡ ಕವರ್) ಸುರಿಂದರ್ ಸಿಂಗ್ (ರೈಟ್ ಕವರ್) ಮುಹಮ್ಮದ್ ಶಿಹಾಸ್ (ಎಡ ಮೂಲೆ) ಆಕಾಶ್ ಚೌಧರಿ (ಬಲ ಮೂಲೆ)

ಪಂದ್ಯ 3: ಯು ಮುಂಬಾ vs ಬೆಂಗಾಲ್ ವಾರಿಯರ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋತು ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡು 25 ಅಂಕಗಳನ್ನು ಪಡೆದುಕೊಂಡಿರುವ ಯು ಮುಂಬಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಜಯ ಗಳಿಸಿ 5 ಪಂದ್ಯಗಳಲ್ಲಿ ಸೋತು 22 ಅಂಕಗಳನ್ನು ಪಡೆದುಕೊಂಡಿರುವ ಬೆಂಗಾಲ್ ವಾರಿಯರ್ಸ್ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ನಡೆದಿರುವ ಒಟ್ಟು 14 ಮುಖಾಮುಖಿ ಪಂದ್ಯಗಳಲ್ಲಿ ಯು ಮುಂಬಾ 10 ಪಂದ್ಯಗಳಲ್ಲಿ ಗೆದ್ದಿದ್ದರೆ, ಬೆಂಗಾಲ್ ವಾರಿಯರ್ಸ್ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಟೂರ್ನಿಯ 57ನೇ ಪಂದ್ಯವಾಗಿದ್ದು ರಾತ್ರಿ 9.30ಕ್ಕೆ ಶುರುವಾಗಲಿದೆ.

ಬೆಂಗಾಲ್ ವಾರಿಯರ್ಸ್ ಸಂಭಾವ್ಯ ಆಡುವ ಬಳಗ: ಮಣಿಂದರ್ ಸಿಂಗ್ (ನಾಯಕ) ಆಕಾಶ್ ಪಿಕಾಲ್ಮುಂಡೆ ಮೊಹಮ್ಮದ್ ನಬಿಬಕ್ಷ್ ದರ್ಶನ್ ಅಮಿತ್ ನಿರ್ವಾಲ್ ರಾನ್ ಸಿಂಗ್ ಅಬೋಜರ್ ಮಿಘಾನಿ

ಯು ಮುಂಬಾ ಸಂಭಾವ್ಯ ಆಡುವ ಬಳಗ: ಅಭಿಷೇಕ್ ಸಿಂಗ್ ಜಶನ್ದೀಪ್ ಸಿಂಗ್ ಆಶಿಶ್ ಸಂಗ್ವಾನ್ ಹರೇಂದ್ರ ಕುಮಾರ್ ರಾಹುಲ್ ಸೇತ್ಪಾಲ್ ರಿಂಕು ಫಜೆಲ್ ಅತ್ರಾಚಲಿ (ನಾಯಕ)

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Saturday, January 15, 2022, 17:21 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X