ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2021: ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡ ಹೀಗಿದೆ, ದುಬಾರಿ ಮೊತ್ತ ಸಿಕ್ಕಿದ್ದು ಯಾರಿಗೆ ಗೊತ್ತಾ?

PKL 2021: List of players bought, costliest player and full squad of Bengaluru Bulls

ಮುಂಬೈ: ತನ್ನದೇ ಆದ ಜನಪ್ರಿಯತೆಯನ್ನು ಹೊಂದಿರುವ ಪ್ರೊ ಕಬಡ್ಡಿ ಲೀಗ್ ( ಪಿ ಕೆ ಎಲ್ ) ಮರಳಿ ಬರುತ್ತಿದೆ. 12 ತಂಡಗಳುಳ್ಳ ಎಂಟನೇ ಆವೃತ್ತಿಯು ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗಾಗಿ ಕಳೆದ ಆಗಸ್ಟ್ 29 ರಿಂದ 31 ರವರೆಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು.

ಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆ

ಹೀಗೆ ನಡೆಸಲಾದ ಹರಾಜು ಪ್ರಕ್ರಿಯೆಯಲ್ಲಿ 12 ತಂಡಗಳ ಫ್ರಾಂಚೈಸಿಗಳು ಸಾಧ್ಯವಾದಷ್ಟು ಬಲಿಷ್ಠ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳುವ ಪ್ರಯತ್ನಗಳನ್ನು ಮಾಡಿವೆ. ಈ ಹಿಂದಿನ ಆವೃತ್ತಿಗಳಲ್ಲಿ ವಿವಿಧ ತಂಡಗಳ ಪರ ಆಡಿದ್ದ ಕೆಲ ಸ್ಟಾರ್ ಆಟಗಾರರು ಈ ಬಾರಿ ಬೇರೆ ತಂಡಗಳ ಪಾಲಾಗಿದ್ದಾರೆ.

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಗಾಗಿ ನಡೆದ 3 ದಿನಗಳ ಹರಾಜಿನ ಪ್ರಕ್ರಿಯೆಯಲ್ಲಿ ಮಂಗಳವಾರ 22 ವಿದೇಶಿ ಆಟಗಾರರು ಮತ್ತು 19 ದೇಶಿ ಆಟಗಾರರ ಹರಾಜು ನಡೆದಿದೆ. ಆಗಸ್ಟ್ 30 ರ ಸೋಮವಾರದಂದು ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಖ್ಯಾತ ರೈಡರ್ ಪರ್ದೀಪ್ ನರ್ವಾಲ್ ಬರೋಬ್ಬರಿ 1.65 ಕೋಟಿಗೆ ಹರಾಜಾಗುವುದರ ಮೂಲಕ ಯುಪಿ ಯೋಧ ತಂಡವನ್ನು ಸೇರಿಕೊಂಡು ಅತಿ ದೊಡ್ಡ ಮೊತ್ತಕ್ಕೆ ಈ ಬಾರಿ ಬಿಕರಿಯಾದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಇನ್ನು ಮತ್ತೊಬ್ಬ ರೈಡರ್ ಸಿದ್ಧಾರ್ಥ್ ದೇಸಾಯಿ 1.30 ಕೋಟಿಗೆ ಹರಾಜು ಆಗುವುದರ ಮೂಲಕ ತೆಲುಗು ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!

ಇನ್ನು ಬೆಂಗಳೂರು ಬುಲ್ಸ್ ತಂಡದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಆಟಗಾರರ ಬದಲಾವಣೆಗಳಾಗಿದ್ದು ನೂತನವಾಗಿ 10 ಆಟಗಾರರ ಸೇರ್ಪಡೆಯಾಗಿದೆ. ಈ ಮೂಲಕ ಒಟ್ಟು 15 ಆಟಗಾರರನ್ನೊಳಗೊಂಡ ಬೆಂಗಳೂರು ತಂಡದ ವಿವರ ಮುಂದೆ ಇದೆ ಓದಿ..

ಹರಾಜಿನ ನಂತರ ಬೆಂಗಳೂರು ಬುಲ್ಸ್ ತಂಡ ಹೀಗಿದೆ

ಹರಾಜಿನ ನಂತರ ಬೆಂಗಳೂರು ಬುಲ್ಸ್ ತಂಡ ಹೀಗಿದೆ

ಉಳಿಸಿಕೊಂಡ ಆಟಗಾರರು: ಸೌರಭ್ ನಂದಾಲ್, ಬಾಂಟಿ, ಮೋಹಿತ್ ಸೆಹ್ರಾವತ್, ಅಮಿತ್ ಶಿಯೋರನ್ ಮತ್ತು ಪವನ್ ಸೆಹ್ರಾವತ್.

ಖರೀದಿಸಲ್ಪಟ್ಟ ಆಟಗಾರರು:

ಡಾಂಗ್ ಜಿಯಾನ್ ಲೀ - ರೈಡರ್ - ರೂ .12.50 ಲಕ್ಷ

ಅಫೋಲ್ಫಜ್ಲ್ ಮಘ್ಸೊಡ್ಲೌ ಮಹಾಲಿ - ರೈಡರ್ - ರೂ .13 ಲಕ್ಷ

ಚಂದ್ರನ್ ರಂಜಿತ್ - ರೈಡರ್ - ರೂ .80 ಲಕ್ಷ

ಜಿಬಿ ಮೋರೆ - ರೈಡರ್ - 25 ಲಕ್ಷ

ದೀಪಕ್ ನರ್ವಾಲ್ - ರೈಡರ್ - ರೂ. 26.50 ಲಕ್ಷ

ಜಿಯರ್ ರೆಹಮಾನ್ - ಡಿಫೆಂಡರ್ - ರೂ. 12.20 ಲಕ್ಷ

ಮಹೇಂದ್ರ ಸಿಂಗ್ - ಡಿಫೆಂಡರ್ - ರೂ. 50 ಲಕ್ಷ

ಮಯೂರ್ ಜಗನ್ನಾಥ ಕದಂ - ಡಿಫೆಂಡರ್ - ರೂ. 15 ಲಕ್ಷ

ವಿಕಾಸ್ - ಡಿಫೆಂಡರ್ - 10 ಲಕ್ಷ

ಅಂಕಿತ್ - ಡಿಫೆಂಡರ್ - 10 ಲಕ್ಷ

ಅತಿ ದುಬಾರಿ ಆಟಗಾರ

ಅತಿ ದುಬಾರಿ ಆಟಗಾರ

ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಹರಾಜಿನಲ್ಲಿ ಬೆಂಗಳೂರು ತಂಡದ ಪರ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದದ್ದು ಅನುಭವಿ ರೈಡರ್ ಚಂದ್ರನ್ ರಂಜಿತ್. ಬರೋಬ್ಬರಿ 80 ಲಕ್ಷ ನೀಡಿ ಚಂದ್ರನ್ ರಂಜಿತ್ ಅವರನ್ನು ಬೆಂಗಳೂರು ಬುಲ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಬೆಂಗಳೂರು ತಂಡ ಸೇರಿದ ಟಾಪ್ 3 ದುಬಾರಿ ಆಟಗಾರರು

ಬೆಂಗಳೂರು ತಂಡ ಸೇರಿದ ಟಾಪ್ 3 ದುಬಾರಿ ಆಟಗಾರರು

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಬೆಂಗಳೂರು ಬುಲ್ಸ್ ಅತಿಹೆಚ್ಚು ಮೊತ್ತವನ್ನು ನೀಡಿ ಖರೀದಿಸಿದ ಟಾಪ್ 3 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ಚಂದ್ರನ್ ರಂಜಿತ್ - 80 ಲಕ್ಷ ರೂ
2. ಮಹೀಂದ್ರ ಸಿಂಗ್ - 50 ಲಕ್ಷ ರೂ
3. ದೀಪಕ್ ನರ್ವಾಲ್ - 26.50 ಲಕ್ಷ ರೂ

Story first published: Wednesday, September 1, 2021, 14:10 [IST]
Other articles published on Sep 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X