ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಯುಪಿ ಯೋಧಾಸ್ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ಗೂಳಿಗಳು

PKL 2022: Bengaluru Bulls Won Against UP Yoddha 38-35 Points And Qualified To Playoff

ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ಬೆಂಗಳೂರು ಬುಲ್ಸ್ ಪ್ಲೇ ಆಫ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 38-35 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು.

ಬೆಂಗಳೂರು ಬುಲ್ಸ್ ಲೀಗ್‌ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದೆ. ಇದುವರೆಗೂ ಆಡಿರುವ 20 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಜಯ 7 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ 68 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಯುಪಿ ಯೋಧಾಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಭರತ್ ತಂಡಕ್ಕೆ ಆರಂಭದಲ್ಲೇ ರೈಡಿಂಗ್ ಪಾಯಿಂಟ್ ತಂದುಕೊಡುವ ಮೂಲಕ ಮುನ್ನಡೆ ಸಾಧಿಸುವಲ್ಲಿ ಕಾರಣವಾದರು.

PKL 2022: Bengaluru Bulls Won Against UP Yoddha 38-35 Points And Qualified To Playoff

ವಿಕಾಶ್ ಕಂಡೋಲಾ ಮತ್ತು ಭರತ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಯಶಸ್ವೀ ರೈಡರ್ ಎನಿಸಿಕೊಂಡರು. ಭರತ್ 8 ರೈಡಿಂಗ್ ಪಾಯಿಂಟ್ ಗಳಿಸಿದರೆ, ವಿಕಾಶ್ ಖಂಡೋಲಾ 6 ರೈಡಿಂಗ್ ಪಾಯಿಂಟ್ ಗಳಿಸಿ ಮಿಂಚಿದರು. ನೀರಜ್ ನರ್ವಾಲ್ ಕೂಡ 5 ಅಂಕಗಳನ್ನು ಗಳಿಸುವ ಮೂಲಕ ಇವರಿಬ್ಬರಿಗೆ ಉತ್ತಮ ಸಾಥ್ ನೀಡಿದರು.

ಯುಪಿ ಯೋಧಾಸ್ ಪರವಾಗಿ ಪ್ರದೀಪ್ ನರ್ವಾಲ್ ಸೂಪರ್ 10 ಅಂಕಗಳನ್ನು ಪಡೆದರು ಕೂಡ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಯುಪಿ ಯೋಧಾಸ್‌ ರಕ್ಷಣಾ ವಿಭಾಗ ಕಳಪೆ ಪ್ರದರ್ಶನ ನೀಡಿತು, ಇದರ ಲಾಭ ಪಡೆದ ಬುಲ್ಸ್ ಪಡೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು.

ತಪ್ಪಿಗೆ ಅವಕಾಶ ನೀಡದ ಗೂಳಿಗಳು

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಬೆಂಗಳೂರು ಗೂಳಿಗಳು ಕೊನೆಯವರೆಗೂ ತಪ್ಪಿಗೆ ಅವಕಾಶ ನೀಡಲಿಲ್ಲ. ಭರತ್ ಆರಂಭದಿಂದಲೇ ತಂಡಕ್ಕೆ ಪಾಯಿಂಟ್‌ಗಳನ್ನು ತಂದುಕೊಟ್ಟರು. ಯುಪಿ ಯೋಧಾಸ್ ತಂಡವನ್ನು ಮೊದಲ ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ 13-10 ಮುನ್ನಡೆ ಸಾಧಿಸಿತು.

ಎದುರಾಳಿಗಳ ವಿರುದ್ಧ ಒತ್ತಡ ಹೇರುವುದನ್ನು ಮುಂದುವರೆಸಿದ ಬೆಂಗಳೂರು ತಂಡದ ರೈಡರ್ ಗಳು ಯುಪಿ ಯೋಧಾಸ್‌ ತಂಡದ ರಕ್ಷಣಾ ದೋಷವನ್ನು ಅಂಕಗಳನ್ನಾಗಿ ಮಾರ್ಪಡಿಸಿಕೊಂಡರು. ಮೊದಲಾರ್ಧದ ಅಂತ್ಯಕ್ಕೆ 19-14 ರಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ದ್ವಿತೀಯಾರ್ಧದ ಆರಂಭದಲ್ಲೇ ಯುಪಿ ಯೋಧಾಸ್ ತಂಡವನ್ನು ಮತ್ತೊಂದು ಆಲೌಟ್ ಮಾಡುವ ಮೂಲಕ 10 ಪಾಯಿಂಟ್‌ಗಳ ಮುನ್ನಡೆ ಪಡೆದುಕೊಂಡಿತು. ಭರತ್ ಮತ್ತು ನೀರಜ್ ನರ್ವಾಲ್ ಉತ್ತಮವಾದ ರೈಡಿಂಗ್ ಮಾಡಿದರು.

ಕೊನೆಯ ಐದು ನಿಮಿಷಗಳಲ್ಲಿ ಬೆಂಗಳೂರು ಬುಲ್ಸ್ ಕೆಲವು ಅಂಕಗಳನ್ನು ಬಿಟ್ಟುಕೊಡುವ ಮೂಲಕ ಅಂಕಗಳ ನಡುವಿನ ಅಂತರ ಕಡಿಮೆಯಾಯಿತು. ಪಂದ್ಯದಲ್ಲಿ ವಾಪಸ್ ಆಗಲು ಯುಪಿ ಯೋಧಾಸ್ ಹೋರಾಟ ನೀಡಿತು. ಆದರೆ, ಪ್ರದೀಪ್ ನರ್ವಾಲ್‌ರನ್ನು ಮಹೇಂದರ್ ಸಿಂಗ್ ಸೂಪರ್ ಟ್ಯಾಲ್ ಮಾಡುವ ಮೂಲಕ ಮುನ್ನಡೆ ಹೆಚ್ಚಿಸಿದರು. ಅಂತಿಮವಾಗಿ ಬೆಂಗಳೂರು ಬುಲ್ಸ್ ಆಲೌಟ್ ಆದರೂ ಕೂಡ ಗೆಲುವು ಸಾಧಿಸುವಷ್ಟು ಮುನ್ನಡೆಯಲ್ಲಿದ್ದರು.

ಈ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇದೇ ಪ್ರದರ್ಶನ ಮುಂದುವರೆಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿವೆ ಬೆಂಗಳೂರು ಗೂಳಿಗಳು.

Story first published: Sunday, December 4, 2022, 23:09 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X