ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್: ಶರಾವತ್ ಅಬ್ಬರದ ನಡುವೆಯೂ ಬೆಂಗಳೂರು ಬುಲ್ಸ್ ವಿರುದ್ಧ ಗೆದ್ದ ಬೆಂಗಾಲ್ ವಾರಿಯರ್ಸ್

PKL 8: Bengal Warriors beat Bengaluru Bulls and Gujarat Giants beat Tamil Thalaivas

ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಇಂದು ( ಜನವರಿ 20 ) 2 ಪಂದ್ಯಗಳು ನಡೆದಿದ್ದು ಪ್ರಥಮ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಮುಖಾಮುಖಿಯಾದವು.

ಭಾರತ vs ದ.ಆಫ್ರಿಕಾ: ಇವರಿಂದಾಗಿ ವೆಂಕಟೇಶ್ ಐಯ್ಯರ್‌ಗೆ ರಾಹುಲ್ ಬೌಲಿಂಗ್ ನೀಡಲಿಲ್ಲ ಎಂದ ಧವನ್!ಭಾರತ vs ದ.ಆಫ್ರಿಕಾ: ಇವರಿಂದಾಗಿ ವೆಂಕಟೇಶ್ ಐಯ್ಯರ್‌ಗೆ ರಾಹುಲ್ ಬೌಲಿಂಗ್ ನೀಡಲಿಲ್ಲ ಎಂದ ಧವನ್!

ಹೀಗೆ ಗುಜರಾತ್ ಜಯಂಟ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಗುಜರಾತ ಜಯಂಟ್ಸ್ ತಮಿಳ್ ತಲೈವಾಸ್ ತಂಡದ ವಿರುದ್ಧ 37-35 ಅಂತರದ ಜಯ ಸಾಧಿಸಿದ್ದರೆ,ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಬೆಂಗಾಲ್ ವಾರಿಯರ್ಸ್ 40 - 39 ಅಂಕಗಳ ಅಂತರದಿಂದ ಗೆದ್ದು ಬೀಗಿದೆ.

ಇದೆಂಥ ನಾಯಕತ್ವ, ಆ ಇಬ್ಬರಿಲ್ಲದೇ ಟೀಮ್ ಇಂಡಿಯಾ ಸೋತಿದೆ ಎಂದು ಬೇಸರಗೊಂಡ ಮಾಜಿ ಕ್ರಿಕೆಟಿಗಇದೆಂಥ ನಾಯಕತ್ವ, ಆ ಇಬ್ಬರಿಲ್ಲದೇ ಟೀಮ್ ಇಂಡಿಯಾ ಸೋತಿದೆ ಎಂದು ಬೇಸರಗೊಂಡ ಮಾಜಿ ಕ್ರಿಕೆಟಿಗ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 67ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪಂದ್ಯದ ಹಲವಾರು ಹಂತಗಳಲ್ಲಿ ಬೆಂಗಾಲ್ ವಾರಿಯರ್ಸ್ ಮೇಲೆ ಸವಾರಿಯನ್ನು ಮಾಡಿತು. ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಸೂಪರ್ 10 ಪಡೆದರು. ಅತ್ತ ಬೆಂಗಾಲ್ ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ 9 ಅಂಕಗಳನ್ನು ಪಡೆದರು. ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡದ ಪ್ರಮುಖ ಆಟಗಾರ ಪವನ್ ಶೆರಾವತ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡದ ಪ್ರಮುಖ ಆಟಗಾರ ಮಣಿಂದರ್ ಸಿಂಗ್ ಹೆಚ್ಚಾಗಿ ಡಗ್ ಔಟ್ ನಲ್ಲೇ ಕಾಲ ಕಳೆದರು. ಹೀಗಾಗಿ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಕೂಡ ಆಲ್ ಔಟ್ ಮಾಡುವಲ್ಲಿ ವಿಫಲವಾಗಿ ಮಧ್ಯಂತರದ ವೇಳೆಗೆ ಬೆಂಗಾಲ್ ವಾರಿಯರ್ಸ್ ಬೆಂಗಳೂರು ಬುಲ್ಸ್ ವಿರುದ್ಧ 14 - 13 ಅಂಕಗಳ ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು.

ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆ ಅಬ್ಬರಿಸಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶೇರಾವತ್ ರೈಡ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ ಬೆಂಗಾಲ್ ವಾರಿಯರ್ಸ್ ತಂಡವನ್ನು ನಾಲ್ಕನೇ ನಿಮಿಷಕ್ಕೆ ಆಲ್ ಔಟ್ ಮಾಡಿ 3 ಅಂಕಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಹೀಗೆ ತನ್ನ ಉತ್ತಮ ರೈಡ್ ಮುಂದುವರೆಸಿದ ಪವನ್ ಶೇರಾವತ್ ಎದುರಾಳಿ ತಂಡದ ಓರ್ವ ಆಟಗಾರನನ್ನು ಮಾತ್ರ ಕಣದಲ್ಲಿ ಉಳಿಯುವಂತೆ ಮಾಡಿದರು. ಹೀಗೆ ಏಕಾಂಗಿಯಾಗಿ ಉಳಿದಿದ್ದ ಬೆಂಗಾಲ್ ವಾರಿಯರ್ಸ್ ತಂಡದ ಮೊಹಮ್ಮದ್ ನಬಿಭಕ್ಷ್ ಅವರನ್ನು ಬೆಂಗಳೂರು ಬುಲ್ಸ್ ತಂಡ ಟ್ಯಾಕಲ್ ಮಾಡುವುದರ ಮೂಲಕ ತನ್ನ ಎರಡನೇ ಆಲ್ ಔಟ್ ಸಾಧಿಸಿತು. ಆದರೆ ನಂತರ ಬೆಂಗಾಲ್ ವಾರಿಯರ್ಸ್ ತಂಡ ಬೆಂಗಳೂರು ಬುಲ್ಸ್ ತಂಡವನ್ನು ಆಲ್ ಔಟ್ ಮಾಡಿ 3 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಮಣಿಂದರ್ ಸಿಂಗ್ ಬೋನಸ್ ತೆಗೆದುಕೊಳ್ಳುವುದರ ಮೂಲಕ ಬೆಂಗಾಲ್ ವಾರಿಯರ್ಸ್ ತಂಡದ ಮುನ್ನಡೆ ಮುಂದುವರೆಯುವಂತೆ ಮಾಡಿದರು. ಹೀಗೆ ಬೆಂಗಾಲ್ ವಾರಿಯರ್ಸ್ ತಂಡದ ಡಿಫೆನ್ಸ್ ವಿಭಾಗ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಬೆಂಗಾಲ್ ವಾರಿಯರ್ಸ್ ತಂಡ ಗೆಲ್ಲುವಂತೆ ಮಾಡಿದರು. ಈ ಗೆಲುವಿನೊಂದಿಗೆ ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪಂದ್ಯ ಸೋತ ಬೆಂಗಳೂರು ಬುಲ್ಸ್ ಅಂಕಗಳ ನೆರವಿನೊಂದಿಗೆ ತೃತೀಯ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೇರಿದೆ.

Story first published: Thursday, January 20, 2022, 23:35 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X