ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL7 ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್ ಗೆ ಬಹುಪರಾಕ್!

PKL7: Bengaluru bulls Beat UP Yodha to reach Semis Twitter reaction

ಬೆಂಗಳೂರು, ಅಕ್ಟೋಬರ್ 14: ಪ್ರೊ ಕಬಡ್ಡಿ ಲೀಗ್ ನ ಏಳನೇ ಆವೃತ್ತಿಯ ಪ್ಲೇಆಫ್ ಹಂತದ ಮೊದಲ ಪಂದ್ಯ ರೋಚಕ ಪಂದ್ಯ ಕಂಡಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಹೆಚ್ಚುವರಿ ಅವಧಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.

ಪ್ರೊ ಕಬಡ್ಡಿ: ಯೋಧ ಕೆಡವಿ ಸೆಮಿಫೈನಲ್ಸ್ ತಲುಪಿದ ಬುಲ್ಸ್ಪ್ರೊ ಕಬಡ್ಡಿ: ಯೋಧ ಕೆಡವಿ ಸೆಮಿಫೈನಲ್ಸ್ ತಲುಪಿದ ಬುಲ್ಸ್

ಲೀಗ್ ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು 35-33 ಹಾಗೂ 45-33 ಅಂತರದಿಂದ ಸೋಲಿಸಿದ್ದ ಯುಪಿ ಯೋಧಾ ತಂಡವು ಎಲಿಮಿನೇಟರ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಉಭಯ ತಂಡಗಳು 36-36 ಅಂಕಗಳೊಂದಿಗೆ ಸಮಬಲ ಸಾಧಿಸಿದವು.

ಹೆಚ್ಚುವರಿ ಅವಧಿಯಲ್ಲಿ ಯುಪಿ ಯೋಧಾ ಆಟಗಾರ ಕನ್ನಡಿಗ ರಿಷಾಂಕ್ ದೇವಾಡಿಗ ಅವರು ಪವನ್, ಸೌರಭ್ ಔಟ್ ಮಾಡಿ ಯುಪಿ ತಂಡಕ್ಕೆ ಮುನ್ನಡೆ ತಂದರು. ಆದರೆ, ನಂತರ ಪವನ್ ಶೆರಾವತ್ ಸೂಪರ್ ರೇಡ್ ಮೂಲಕ ಬೆಂಗಳೂರನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ಬುಲ್ಸ್ 48-45ರ ಅಂತರದಲ್ಲಿ ಗೆಲುವು ಸಾಧಿಸಿತು.

ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ 4ನೇ ಸ್ಥಾನ ಪಡೆದಿದ್ದ ಯು ಮುಂಬಾ ಹಾಗೂ 5ನೇ ಸ್ಥಾನದಲ್ಲಿದ್ದ ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಿವೆ.

ಡೆಲ್ಲಿ, ಬೆಂಗಾಲ್ ಎರಡು ಪಂದ್ಯ ಗೆದ್ದರೂ ಕಪ್

ಡೆಲ್ಲಿ, ಬೆಂಗಾಲ್ ಎರಡು ಪಂದ್ಯ ಗೆದ್ದರೂ ಕಪ್

ಲೀಗ್ ಹಂತದ ನಂತರ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ದಬ್ಬಾಂಗ್ ಡೆಲ್ಲಿ ಹಾಗೂ ಎರಡು ಸ್ಥಾನ ಪಡೆದ ಬೆಂಗಾಲ್ ವಾರಿಯರ್ಸ್ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ. ಹೀಗಾಗಿ ಲೀಗ್ ಹಂತದ ಎರಡು ಅಗ್ರ ತಂಡಗಳಿಗೆ ಎರಡೇ ಪಂದ್ಯ ಗೆದ್ದರೆ ಕಪ್ ಎತ್ತುವ ಅವಕಾಶ ಸಿಗಲಿದೆ. ಆದರೆ, ಉಳಿದ 4 ತಂಡಗಳು ಸತತ 3 ಪಂದ್ಯ ಗೆದ್ದರೆ ಕಪ್ ಗೆಲ್ಲಬಹುದು.

ಅಕ್ಟೋಬರ್ 19ರಂದು ಅಂತಿಮ ಹಣಾಹಣಿ

ಅಕ್ಟೋಬರ್ 19ರಂದು ಅಂತಿಮ ಹಣಾಹಣಿ

ಮೊದಲ ಸೆಮಿಫೈನಲ್ ಪಂದ್ಯವು ಬುಧವಾರದಂದು ನಡೆಯಲಿದ್ದು, ದಬ್ಬಾಂಗ್ ಡೆಲ್ಲಿ ತಂಡವನ್ನು ಬೆಂಗಳೂರು ಬುಲ್ಸ್ ಎದುರಿಸಲಿದೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಮುಂಬೈ ಹಾಗೂ ಹರ್ಯಾಣ ನಡುವಿನ ಪಂದ್ಯದಲ್ಲಿ ಜಯ ದಾಖಲಿಸುವ ತಂಡವು ಸೆಣಸಲಿದೆ. ಪಿಕೆಎಲ್ 7 ಸೀಸನ್ ನ ಅಂತಿಮ ಹಣಾಹಣಿ ಅಕ್ಟೋಬರ್ 19ರಂದು ನಡೆಯಲಿದೆ.

ಪಂದ್ಯದ ಅಂಕಿ ಅಂಶ

ಪಂದ್ಯದ ಅಂಕಿ ಅಂಶ, ಪವನ್ ಹಾಗೂ ಸುಮಿತ್ ಅಂತಿಮ ಕ್ಷಣಗಳಲ್ಲಿ ತೋರಿದ ಚಾಕಚಕ್ಯತೆಯಿಂದ ಯುಪಿ ಯೋಧಾರನ್ನು ಮಣಿಸಲು ಸಾಧ್ಯವಾಯಿತು. ಅತ್ಯಂತ ಕಠಿಣ ಸ್ಪರ್ಧೆಯನ್ನು ನೀಡಿದ ಯುಪಿ ಯೋಧಾ ವಿರುದ್ಧ ಗೆಲುವು ಅತ್ಯಂತ ಸಂತಸ ತಂದಿದೆ ಎಂದ ಬೆಂಗಳೂರು ಬುಲ್ಸ್ ಟ್ವೀಟ್.

ಬುಲ್ಸ್ ಗೆ ಬಂದ ಆಪತ್ತು ತಪ್ಪಿತು

ಪವನ್ ಇಪ್ಪತ್ತು, ತಪ್ಪಿದ ಆಪತ್ತು, ಕೊನೆಗೆ ಗಮ್ಮತ್ತು, ಬೆಂಗಳುರು ಸೆಮೀಸ್ ಗೆ ಬಂತು ಎಂದು ಸಂಭ್ರಮಿಸಿದ ಬೆಂಗಳೂರು ಬುಲ್ಸ್ ಅಭಿಮಾನಿಗಳು.

ರಾಕಿ ಭಾಯ್ ಸಾಂಗ್

ಯಶ್ ಅಭಿನಯದ ಕೆಜಿಎಫ್ ಚಿತ್ರದ ರಾಕಿ ಭಾಯ್ ಸಾಂಗ್ ಹಾಕಿ ಪವನ್ ಶೆರಾವತ್ ಅದ್ಭುತ ರೇಡ್ ದೃಶ್ಯವೊಂದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಲಾಗಿದ್ದು, ಈ ವಿಡಿಯೋ ಟ್ವಿಟ್ಟರ್, ವಾಟ್ಸಾಪ್ ಗಳಲ್ಲಿ ತ್ವರಿತವಾಗಿ ಹಂಚಿಕೆಯಾಗಿ ವೈರಲ್ ಆಗುತ್ತಿದೆ.

Story first published: Monday, October 14, 2019, 22:22 [IST]
Other articles published on Oct 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X