ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಬೆಂಗಳೂರಿಗೆ ಮತ್ತೆ ಸೋಲಿನ ಕಹಿ ತಿನ್ನಿಸಿದ ಪಾಟ್ನಾ ಪೈರೇಟ್ಸ್!

Pro Kabaddi 2018: Pardeep stars as Patna win the match 35-32

ಪುಣೆ, ನವೆಂಬರ್ 26: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್‌ನಲ್ಲಿ ಭಾನುವಾರ (ನವೆಂಬರ್ 25) ನಡೆದ ಪ್ರೊ ಕಬಡ್ಡಿ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವಿನ ಕಾಳಗದಲ್ಲಿ ಬೆಂಗಳೂರು ಮತ್ತೆ ಸೊಲಿನ ಕಹಿ ಅನುಭವಿಸಿದೆ. ಪಾಟ್ನಾ ತಂಡ ಬೆಂಗಳೂರನ್ನು 35-32ರ ಅಂತರದಿಂದ ಹಿಮ್ಮೆಟ್ಟಿಸಿತು.

ಅಂದು ಅಭಿಮಾನಿಗಳ ಹೃದಯ ಕದ್ದಿದ್ದವಳು ಇಂದು ಕೆಂಗಣ್ಣಿಗೆ ಗುರಿಯಾದಳು!ಅಂದು ಅಭಿಮಾನಿಗಳ ಹೃದಯ ಕದ್ದಿದ್ದವಳು ಇಂದು ಕೆಂಗಣ್ಣಿಗೆ ಗುರಿಯಾದಳು!

ಪಾಟ್ನಾ ಪರ ಪರ್ದೀಪ್ ನರ್ವಾಲ್ ದಾಳಿಯಾತ್ಮಕ ಆಟವಾಡಿ ತಂಡಕ್ಕೆ ಗೆಲುವು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 10 ರೈಡಿಂಗ್ ಮತ್ತು 1 ಬೋನಸ್ ಸೇರಿ ಪರ್ದೀಪ್ ಒಟ್ಟು 11 ಅಂಕಗಳನ್ನು ತಂಡದ ಖಾತೆಗೆ ಸೇರಿಸಿ ಪಾಟ್ನಾ ಮೇಲುಗೈ ಸಾಧಿಸುವಂತೆ ನೋಡಿಕೊಂಡರು.

ಎಂಎಸ್‌ಎಲ್‌: ಎಬಿಡಿ ಬಳಗ ಸೋಲಿಸಿದ ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ಎಂಎಸ್‌ಎಲ್‌: ಎಬಿಡಿ ಬಳಗ ಸೋಲಿಸಿದ ನೆಲ್ಸನ್ ಮಂಡೇಲಾ ಬೇ ಜೈಂಟ್ಸ್

ಶನಿವಾರ (ನವೆಂಬರ್ 24) ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ ಎದುರು 32-26ರ ಜಯ ಸಾಧಿಸಿತ್ತು. ಆದರೆ ಭಾನುವಾರ ಪಾಟ್ನಾ ವಿರುದ್ಧ ಬೆಂಗಳೂರು ತಲೆ ಬಾಗಿದೆ. ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿಯನ್ನು ಹರ್ಯಾಣ ಸ್ಟೀಲರ್ಸ್ 34-27 ಅಂತರದಿಂದ ಸೋಲಿಸಿದೆ.

ವ್ಯರ್ಥವಾದ ರೋಹಿತ್ ಶ್ರಮ

ವ್ಯರ್ಥವಾದ ರೋಹಿತ್ ಶ್ರಮ

ಪ್ರತೀ ಪಂದ್ಯದಲ್ಲೂ ಬೆಂಗಳೂರು ತಂಡದ ಮುಂಚೂಣಿಯ ಆಟಗಾರ ರೋಹಿತ್ ಕುಮಾರ್ ತಂಡದ ಬೆಂಗಾವಲಿಗೆ ನಿಲ್ಲುತ್ತಿದ್ದು ಕಾಣಿಸುತ್ತಿದೆ. ಈ ಪಂದ್ಯದಲ್ಲೂ ರೋಹಿತ್ ಒಟ್ಟು 13 ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರಾದರೂ ಅವರಿಂದ ಬೆಂಗಳೂರನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ಪವನ್ ಕೊಸರಾಟ

ಪವನ್ ಕೊಸರಾಟ

ಬೆಂಗಳೂರಿನ ಮತ್ತೊಬ್ಬ ಆಟಗಾರ ಪವನ್ ಕುಮಾರ್ ಕೂಡ ತಂಡದ ಗೆಲುವಿನ ನಿಟ್ಟಿನಲ್ಲಿ ಕೊಸರಾಡಿದರು. ಪವನ್ 6 ಅಂಗಳನ್ನು ತಂಡದ ಖಾತೆಗೆ ಸೇರಿಸಿದರು. ಆದರೆ ಇನ್ನುಳಿದ ಆಟಗಾರರ ಬೆಂಬಲ ತಂಡಕ್ಕೆ ಗಮನಾರ್ಹವೆನಿಸಲಿಲ್ಲ.

ಬೆನ್ನು ಬಿದ್ದ ಪಾಟ್ನಾ

ಬೆನ್ನು ಬಿದ್ದ ಪಾಟ್ನಾ

ಬಿ ಝೋನ್ ಪಾಯಿಂಟ್ ಟೇಬಲ್ ನಲ್ಲಿ ಬೆಂಗಳೂರು ಈಗಲೂ ಅಗ್ರ ಸ್ಥಾನದಲ್ಲಿದೆ. ಆದರೆ ಪಾಟ್ನಾ ಪೈರೇಟ್ಸ್ ಬೆಂಗಳೂರಿನ ಬೆನ್ನು ಬಿದ್ದಿದೆ. ಸೋಮವಾರ (ನವೆಂಬರ್ 26) ಬೆಂಗಳೂರಿಗೆ ಮತ್ತೆ ಯುಪಿ ಯೋಧಾ ಎದುರು ಪಂದ್ಯವಿದ್ದು ಅದನ್ನು ಗೆಲ್ಲಬೇಕಿದೆ.

ಒಗ್ಗಟ್ಟು ಪಾಟ್ನಾದ ಬಲ

ಒಗ್ಗಟ್ಟು ಪಾಟ್ನಾದ ಬಲ

ಈಚಿನ ಎಲ್ಲಾ ಪಂದ್ಯದಲ್ಲೂ ಪಾಟ್ನಾ ಮೈಲುಗೈ ಸಾಧಿಸುವಲ್ಲಿ ತಂಡದ ಒಗ್ಗಟ್ಟಿನಾಟ ಪರಿಣಾಮಕಾರಿಯೆನಿಸಿದ್ದು ಕಂಡು ಬಂದಿದೆ. ಬೆಂಗಳೂರಿನ ಸೋಲಿಗೂ ಒಗ್ಗಟ್ಟಿನ ಕೊರತೆಯೇ ಕಾರಣ. ಅಂದರೆ ತಂಡದ ಮುಂಚೂಣಿ ಆಟಗಾರರ ಹೊರತಾಗಿ ಇತರ ಆಟಗಾರರ ಬೆಂಬಲವೂ ತಂಡಕ್ಕೆ ಬೇಕು. ಕಬಡ್ಡಿ ಆಟ ಇಡೀ ತಂಡದ ಬೆಂಬಲವನ್ನು ಬೇಡುವುದರಿಂದ ಇಡೀ ತಂಡ ಒಟ್ಟಾಗಿ ಹೆಚ್ಚು ಅಂಕ ಕದ್ದಷ್ಟು ಅನುಕೂಲವಾಗಲಿದೆ.

Story first published: Monday, November 26, 2018, 0:42 [IST]
Other articles published on Nov 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X