ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಎದುರು ಪಾಟ್ನಾ ಪೈರೇಟ್ಸ್‌ಗೆ ಗೆಲುವು

Pro Kabaddi 2018: Patna Pirates defeat Bengal Warriors

ಮುಂಬೈ, ನವೆಂಬರ್ 10: ಮುಂಬೈಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶನಿವಾರ (ನವೆಂಬರ್ 10) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 50-30ರ ಭರ್ಜರಿ ಗೆಲುವು ದಾಖಲಿಸಿದೆ.

ಯುಪಿ ಯೋಧಾ ಸೋಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬುಲ್ಸ್ಯುಪಿ ಯೋಧಾ ಸೋಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬುಲ್ಸ್

ಪಾಟ್ನಾ ಪರ ನರ್ವಾಲ್ ಜೋಡಿ ಅಮೋಘ ಆಟವಾಡಿದ್ದು ತಂಡಕ್ಕೆ ಗೆಲುವನ್ನು ತಂದಿತು. ದೀಪಕ್ ನರ್ವಾಲ್ ಅವರು 5 ರೈಡಿಂಗ್, 1 ಟ್ಯಾಕ್ಲ್‌, 7 ಬೋನಸ್ ಸೇರಿ ಒಟ್ಟಿಗೆ 13 ಅಂಕಗಳನ್ನು ತಂಡದ ಖಾತೆಗೆ ಸೇರಿಸಿ ಗೆಲುವಿನ ರುವಾರಿಯೆನಿಸಿದರು. ಮತ್ತೊಬ್ಬ ಆಟಗಾರ ಪರ್ದೀಪ್ ನರ್ವಾಲ್ ಕೂಡ 11 ಪಾಯಿಂಟ್ಸ್ ಸೇರಿಸಿದರು.

ಪೈರೇಟ್ಸ್ ಪರ ವಿಜಯ್, ಜೈದೀಪ್, ವಿಕಾಸ್ ಖಾಲೆ, ರವೀಂದ್ರ ಕುಮಾರ್ ಕೂಡ ಪಾಯಿಂಟ್ಸ್ ಕೊಡುಗೆ ನೀಡಿದರು. ಬೆಂಗಾಲ್ ವಾರಿಯಯರ್ಸ್ ಪರ ಅಮಿತ್ ನಗಾರ್, ಮಣೀಂದರ್ ಸಿಂಗ್ ಉತ್ತಮ ಆಟವಾಡಿದ್ದು ಕಾಣಿಸಿತಾದರೂ ಪೈರೇಟ್ಸ್ ಒಗ್ಗಟ್ಟಿನ ಆಟದ ಮುಂದೆ ಬೆಂಗಾಲ್ ತಲೆ ಬಾಗಿತು.

ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್

ಪಂದ್ಯದ ಬಳಿಕ ಬಿ ಝೋನ್ ಅಂಕಪಟ್ಟಿಯಲ್ಲಿ ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನದಲ್ಲಿ ಬೆಂಗಾಲ್ ವಾರಿಯಯರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬೆಂಗಳೂರು ಬುಲ್ಸ್ ಇದೆ. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 38-35ರ ರೋಚಕ ಜಯ ಸಾಧಿಸಿತು.

Story first published: Saturday, November 10, 2018, 22:35 [IST]
Other articles published on Nov 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X