ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಸಿಡಿದು ನಿಂತ ಪವನ್, ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

Pro Kabaddi 2019: Bengaluru Beats Telugu 40-39

ಬೆಂಗಳೂರು, ಸೆಪ್ಟೆಂಬರ್ 6: ಪ್ರೊ ಕಬಡ್ಡಿ ಲೀಗ್ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಮತ್ತೆ ಜಯದ ಹಾದಿ ಹಿಡಿದಿದೆ. ಶುಕ್ರವಾರ (ಸೆಪ್ಟೆಂಬರ್ 6) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ 77ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬುಲ್ಸ್ 40-39ರ ರೋಚಕ ಗೆಲುವನ್ನಾಚರಿಸಿದೆ.

ಸ್ಯಾಮ್ಸನ್, ಧವನ್ ಮಿಂಚು, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ'ಗೆ ಸರಣಿಸ್ಯಾಮ್ಸನ್, ಧವನ್ ಮಿಂಚು, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ'ಗೆ ಸರಣಿ

ಪಂದ್ಯದ ಮೊದಲಿನಿಂದಲೂ ಮುನ್ನಡೆ ಸಾಧಿಸಿದ ಬೆಂಗಳೂರು ಬುಲ್ಸ್‌ಗೆ ಪವನ್ ಕುಮಾರ್ ಶೆಹ್ರಾವತ್, ನಾಯಕ ರೋಹಿತ್‌ ಕುಮಾರ್ ಬಲ ತುಂಬಿದರು. ಆಟದ ಅಂತ್ಯಕ್ಕೆ ತೆಲುಗು ಟೈಟಾನ್ಸ್ ಕೂಡ ಅಂಕ ಕದಿಯುತ್ತ ಸಾಗಿ ಪಂದ್ಯವನ್ನು ರೋಚಕ ಹಂತಕ್ಕೆ ತಂದಿತ್ತು. ಆದರೂ ಕೊನೇ ಕ್ಷಣದಲ್ಲಿ ಬೆಂಗಳೂರು ಮೇಲುಗೈ ಸಾಧಿಸಿತು.

ಯುಎಸ್ ಓಪನ್ ಫೈನಲ್: ಸೆರೆನಾಗೆ 19ರ ಚೆಲುವೆ ಬಿಯಾಂಕಾ ಎದುರಾಳಿ!ಯುಎಸ್ ಓಪನ್ ಫೈನಲ್: ಸೆರೆನಾಗೆ 19ರ ಚೆಲುವೆ ಬಿಯಾಂಕಾ ಎದುರಾಳಿ!

ಬೆಂಗಳೂರು ಬುಲ್ಸ್‌ನಿಂದ ಪವನ್ 23 (18 ರೈಡ್, 1 ಟ್ಯಾಕ್ಲ್‌, 4 ಬೋನಸ್), ರೋಹಿತ್ 5, ಮಣೀಂದರ್ 3 ಅಂಕ ಸಂಪಾದಿಸಿದರೆ, ತೆಲುಗು ಟೈಟಾನ್ಸ್‌ನಿಂದ ಸಿದ್ಧಾರ್ಥ ದೇಸಾಯ್ 23 (19 ರೈಡ್, 1 ಟ್ಯಾಕ್ಲ್‌, 3 ಬೋನಸ್), ಅಬೋಝರ್ 4, ರಾಕೇಶ್ ಗೌಡ 4, ಫರ್ಹಾದ್ 2 ಅಂಕ ಸೇರಿಸಿ ಪೈಪೋಟಿಗೆ ಕಾರಣರಾದರು.

ಈ ಪಂದ್ಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (54 ಪಾಯಿಂಟ್ಸ್), ಬೆಂಗಳೂರು ಬುಲ್ಸ್‌ (43), ಹರ್ಯಾಣ ಸ್ಟೀಲರ್ಸ್ (41), ಬೆಂಗಾಲ್ ವಾರಿಯರ್ಸ್ (40), ಜೈಪರ್ ಪಿಂಕ್ ಪ್ಯಾಂಥರ್ಸ್ (38) ಮೊದಲ ಐದು ಸ್ಥಾನಗಳಲ್ಲಿದ್ದವು. ಗೇಮ್ ಚೇಂಜರ್ ಪ್ರಶಸ್ತಿ ಪವನ್‌ ಕುಮಾರ್‌ಗೆ ಲಭಿಸಿತು.

Story first published: Saturday, September 7, 2019, 10:50 [IST]
Other articles published on Sep 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X