ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಿದ್ದಾಜಿದ್ದಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿಗೆ ಶರಣಾದ ಬೆಂಗಳೂರು ಬುಲ್ಸ್

Pro Kabaddi 2019: Dabang Delhi beat Bengaluru Bulls

ನವದೆಹಲಿ, ಆಗಸ್ಟ್ 24: ನವದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಆಗಸ್ಟ್ 24) ನಡೆದ ಪ್ರೊ ಕಬಡ್ಡಿ ಲೀಗ್‌ 56ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ 31-33ರ ಸೋಲನುಭವಿಸಿದೆ. ಕೊನೇ ಕ್ಷಣದಲ್ಲಿ ಬೆಂಗಳೂರು ಗೆಲುವಿನಾಸೆ ಮೂಡಿಸಿಯೂ ಅಂತಿಮವಾಗಿ ಸೋಲೊಪ್ಪಿಕೊಂಡಿತು.

ಪಂದ್ಯದ ಮಧ್ಯಭಾಗದಲ್ಲಿ ಬೆಂಗಳೂರು ಬುಲ್ಸ್ ಮುನ್ನಡೆಯಲ್ಲಿತ್ತು. ಆದರೆ ಪಂದ್ಯ ಮುಕ್ತಾಯ ಹಂತಕ್ಕೆ ತಲುಪುವ ಹೊತ್ತು ಎದುರಾಳಿ ಡೆಲ್ಲಿ ಅಂಕ ಕದಿಯಲಾರಂಭಿಸಿತು. ಡೆಲ್ಲಿ ತಂಡದಲ್ಲಿ ಒಗ್ಗಟ್ಟಿನಾಟ ಕಾಣಿಸಿದರೆ ಬೆಂಗಳೂರು ತಂಡದಲ್ಲಿ ಪವನ್ ಕುಮಾರ್ ಅವರ ಏಕಾಂಗಿ ಹೋರಾಟ ಕಾಣಿಸಿತು. ಬೆಂಗಳೂರು ಸೋಲಿಗೆ ಇದೂ ಒಂದು ಕಾರಣ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ 7 ರೇಡ್, 6 ಬೋನಸ್, ಮೇರಜ್ ಶೈಕ್ 5, ರವೀಂದರ್ ಪಾಹಲ್ 4, ವಿಶಾಲ್ ಮಾನೆ 3, ವಿಜಯ್, ಚಂದ್ರನ್ ರಂಜಿತ್ ಮತ್ತು ಜೋಗೀಂದರ್ ಸಿಂಗ್ ನರ್ವಾಲ್ ತಲಾ 2 ಅಂಕ ಸೇರಿಸಿದರು. ಬೆಂಗಳೂರು ಪರ ಪವನ್ ಕುಮಾರ್ 12, ಅಮಿತ್ ಶಿಯೋರಾನ್ 4, ಮಹೇಂದರ್ ಸಿಂಗ್ ಮತ್ತು ಬಂತಿ ತಲಾ 3, ಸೌರಭ್ ನಂದಲ್ 2 ಅಂಕ ಸೇರಿಸಿದರು.

ಈ ಪಂದ್ಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿದ್ದವು. ತೆಲುಗು ಟೈಟಾನ್ ಕೊನೇ ಸ್ಥಾನದಲ್ಲಿತ್ತು.

Story first published: Saturday, August 24, 2019, 21:30 [IST]
Other articles published on Aug 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X