ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್ ರೋಚಕ ಪಂದ್ಯ ಸಮಬಲ!

Pro Kabaddi 2019: Dabang Delhi-Bengaluru Bulls match Tie

ಜೈಪುರ್, ಸೆಪ್ಟೆಂಬರ್ 23: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 23) ನಡೆದ ಪ್ರೊ ಕಬಡ್ಡಿ ಲೀಗ್ 105ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್ 39-39ರ ಸಮಬಲ ಸಾಧಿಸಿವೆ. ಫಲಿತಾಂಶ ನಿಜಕ್ಕೂ ಡೆಲ್ಲಿ ಪರವಾಗಿತ್ತಾದರೂ ಬೆಂಗಳೂರು ತಂಡ ಕೊನೇ ಘಳಿಗೆಯಲ್ಲಿ ಮಾಡಿದ ಹೋರಾಟದಿಂದ ಫಲಿತಾಂಶವನ್ನು ಹಿಡಿದಿಟ್ಟುಕೊಳ್ಳುವಂತಾಯ್ತು.

ಅನುಚಿತ ವರ್ತನೆ: ವಿರಾಟ್‌ ಕೊಹ್ಲಿಗೆ ನಕಾರಾತ್ಮಕ ಅಂಕ ನೀಡಿದ ಐಸಿಸಿ!ಅನುಚಿತ ವರ್ತನೆ: ವಿರಾಟ್‌ ಕೊಹ್ಲಿಗೆ ನಕಾರಾತ್ಮಕ ಅಂಕ ನೀಡಿದ ಐಸಿಸಿ!

ಬೆಂಗಳೂರಿನಿಂದ ಪವನ್ ಕುಮಾರ್ ಶೆಹ್ರಾವತ್ 17 (11 ರೈಡ್, 2 ಟ್ಯಾಕ್ಲ್‌, 4 ಬೋನಸ್), ಅಮಿತ್ ಶಿಯೋರಾನ್ 6, ಬಂತಿ 4, ಅಜಯ್ 2, ಸುಮಿತ್ ಸಿಂಗ್ 2, ಅಂಕಿತ್ 1, ಸೌರಭ್ ನಂದಲ್ 1 ಅಂಕ ಸೇರಿಸಿ ಸೋಲಿನಂಚಿನಲ್ಲಿದ್ದ ತಂಡವನ್ನು ಸಮಬಲದ ಹೋರಾಟದತ್ತ ತಂದರು.

4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್

ದಬಾಂಗ್ ಡೆಲ್ಲಿಯಿಂದ ಟಾಪ್ ರೈಡರ್ ನವೀನ್ ಕುಮಾರ್ 14 (12 ರೈಡ್, 2 ಬೋನಸ್), ಚಂದ್ರನ್ ರಂಜಿತ್ 5, ಅನಿಲ್ ಕುಮಾರ್ 4, ರವೀಂದರ್ ಪಾಹಲ್ 4, ವಿಶಾಲ್ ಮಾನೆ 2, ಜೋಗೀಂದರ್ ಸಿಂಗ್ ನರ್ವಾಲ್ 2, ಅಜಯ್ 1 ಅಂಕ ಸೇರಿಸಿ ಪೈಪೋಟಿಗೆ ಕಾರಣರಾದರು.

ಪ್ರೊ ಕಬಡ್ಡಿ: ಪಿಂಕ್ ಪ್ಯಾಂಥರ್ಸ್ ಮಣಿಸಿ ಪ್ಲೇ ಆಫ್‌ಗೆ ಮುನ್ನುಗ್ಗಿದ ವಾರಿಯರ್ಸ್!ಪ್ರೊ ಕಬಡ್ಡಿ: ಪಿಂಕ್ ಪ್ಯಾಂಥರ್ಸ್ ಮಣಿಸಿ ಪ್ಲೇ ಆಫ್‌ಗೆ ಮುನ್ನುಗ್ಗಿದ ವಾರಿಯರ್ಸ್!

ಈ ಪಂದ್ಯದ ಮುಕ್ತಾಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಕೆಸಿ (72 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (68), ಹರ್ಯಾಣ ಸ್ಟೀಲರ್ಸ್ (59), ಯು ಮುಂಬಾ (53), ಬೆಂಗಳೂರು ಬುಲ್ಸ್ (53) ಮೊದಲ 5 ಸ್ಥಾನಗಳಲ್ಲಿವೆ.

Story first published: Monday, September 23, 2019, 22:18 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X