ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL : ಪ್ರೊ ಕಬಡ್ಡಿ: ಪಿಂಕ್ ಫ್ಯಾಂಥರ್ಸ್‌ ಅಬ್ಬರ, ಬೆಂಗಾಲ್ ವಾರಿಯರ್ಸ್‌ಗೆ ಸುಲಭ ಜಯ

Pro kabaddi 2021

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 122ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್‌ ಸುಲಭ ಗೆಲುವು ಸಾಧಿಸಿದ್ರೆ, 123ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಪ್ಯಾಂಥರ್ಸ್ ಅಬ್ಬರಿಸಿ ಗೆಲುವು ಸಾಧಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ 28 ಪಾಯಿಂಟ್ಸ್ ಕಲೆಹಾಕಿದ್ರೆ, ತಮಿಳ್ ತಲೈವಾಸ್ ಕೇವಲ 10 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಬೆಂಗಾಲ್ ಆರ್ಭಟ ಮುಂದುವರಿದು 24 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಆದ್ರೆ ತಮಿಳ್ ತಲೈವಾಸ್ ರೈಡಿಂಗ್‌ನಲ್ಲಿ ಮತ್ತೆ ಎಡವಿ 11 ಪಾಯಿಂಟ್ಸ್ ಅಷ್ಟೇ ಕಲೆಹಾಕಿತು. ಅಂತಿಮವಾಗಿ ಬೆಂಗಾಲ್ 52-21 ಅಂತರದ ಭಾರೀ ಅಂತರದ ಗೆಲುವು ದಾಖಲಿಸಿದೆ.

Ind vs WI 1st T20: ಟೀಂ ಇಂಡಿಯಾಗೆ ಆರು ವಿಕೆಟ್‌ಗಳ ಭರ್ಜರಿ ಜಯInd vs WI 1st T20: ಟೀಂ ಇಂಡಿಯಾಗೆ ಆರು ವಿಕೆಟ್‌ಗಳ ಭರ್ಜರಿ ಜಯ

ಬೆಂಗಾಲ್ ಪರ ಮಣಿಂದರ್ ಸಿಂಗ್ 14, ಮೊಹಮ್ಮದ್ ನಬೀಭಕ್ಷ್‌ 13 ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಇನ್ನು ತಮಿಳ್ ತಲೈವಾಸ್ ಪರ ಹಿಮಾಂಶು ಸಿಂಗ್ 7 ಪಾಯಿಂಟ್ಸ್‌ಗಳಿಸಿದ್ದೇ ಹೆಚ್ಚು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತೆಲುಗು ಟೈಟನ್ಸ್‌ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಫ್ಯಾಂಥರ್ಸ್ 23-11ರ ಲೀಡ್‌ ಪಡೆಯಿತು. ದ್ವಿತಿಯಾರ್ಧದಲ್ಲಿ ಮತ್ತೆ ಮೇಲುಗೈ ಸಾಧಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ 31 ಪಾಯಿಂಟ್ಸ್ ಗಳಿಸಿದರೆ, ತೆಲುಗು ಟೈಟನ್ಸ್ 24 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಫ್ಯಾಂಥರ್ಸ್ 54-35 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಫ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 14 ಪಾಯಿಂಟ್ಸ್ ಮೂಲಕ ಮಿಂಚಿನ ಆಟವಾಡಿದ್ರೆ, ತೆಲುಗು ಟೈಟನ್ಸ್ ಪರ ಅಂಕಿತ್ ಮತ್ತು ಸುರಿಂದರ್ ಸಿಂಗ್ ಕೊಂಚ ಪ್ರತಿರೋಧ ಒಡ್ಡಿದ್ರು.

ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 20 ಪಂದ್ಯಗಳಲ್ಲಿ 15 ಜಯಗಳಿಂದ ಒಟ್ಟು 80 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 65 ಪಾಯಿಂಟ್ಸ್‌ ಪಡೆದಿದ್ದು,. ಯುಪಿ ಯೋಧಾ 63 ಪಾಯಿಂಟ್ಸ್‌ ಮೂಲಕ ಮೂರನೇ ಸ್ಥಾನ ಪಡೆದಿದೆ. ಹರಿಯಾಣ ಸ್ಟೀಲರ್ಸ್ 63 ಪಾಯಿಂಟ್ಸ್ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Story first published: Thursday, February 17, 2022, 9:48 [IST]
Other articles published on Feb 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X