ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಪ್ರೊ ಕಬಡ್ಡಿ: ಬೆಂಗಾಲ್, ಗುಜರಾತ್, ದಬಾಂಗ್ ಡೆಲ್ಲಿಗೆ ಗೆಲುವು

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 127ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ಪುಣೇರಿ ಪಲ್ಟನ್ ವಿರುದ್ಧ ಗೆಲುವು ಸಾಧಿಸಿದ್ರೆ, ದಬಾಂಗ್ ಡೆಲ್ಲಿ ತಂಡವು ತೆಲುಗು ಟೈಟನ್ಸ್‌ ವಿರುದ್ಧ ಗೆಲುವು ಸಾಧಿಸಿತು. ಅದೇ ರೀತಿಯಲ್ಲಿ ಗುಜರಾತ್ ಜಾಯಿಂಟ್ಸ್‌, ತಮಿಳ್ ತಲೈವಾಸ್ ವಿರುದ್ಧ ಗೆಲುವು ಸಾಧಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 43-36 ಪಾಯಿಂಟ್ಸ್ ಅಂತರದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಗೆಲುವು ಸಾಧಿಸಿದೆ.

128ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ತೆಲುಗು ಟೈಟನ್ಸ್‌ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಡೆಲ್ಲಿ 19-14 ಪಾಯಿಂಟ್ಸ್ ಮೂಲಕ ಮುನ್ನಡೆ ಸಾಧಿಸಿದ್ರೆ, ದ್ವಿತಿಯಾರ್ಧದಲ್ಲೂ 21-18 ಪಾಯಿಂಟ್ಸ್ ಅಂತರದಲ್ಲಿ ಜಯ ಸಾಧಿಸಿ ಅಂತಿಮವಾಗಿ 40-32 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ.

ಇನ್ನು ನಡೆದ ಮೂರನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್‌ ತಂಡವು ತಮಿಳ್ ತಲೈವಾಸ್ ವಿರುದ್ಧ ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ ಗುಜರಾತ್ 16-13 ಪಾಯಿಂಟ್ಸ್‌ನಿಂದ ಮುನ್ನಡೆ ಸಾಧಿಸಿದ್ರೆ, ದ್ವಿತಿಯಾರ್ಧದಲ್ಲಿ ಮತ್ತೊಮ್ಮೆ 27-20 ಪಾಯಿಂಟ್ಸ್‌ ಮುನ್ನಡೆ ಕಂಡು 43-33 ಪಾಯಿಂಟ್ಸ್‌ನಿಂದ ಗೆದ್ದು ಬೀಗಿತು.

ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 21 ಪಂದ್ಯಗಳಲ್ಲಿ 15 ಜಯಗಳಿಂದ ಒಟ್ಟು 81 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 75 ಪಾಯಿಂಟ್ಸ್‌ ಪಡೆದಿದ್ದು,. ಯುಪಿ ಯೋಧಾ 68 ಪಾಯಿಂಟ್ಸ್‌ ಮೂಲಕ ಮೂರನೇ ಸ್ಥಾನ ಪಡೆದಿದೆ. ಬೆಂಗಳೂರು ಬುಲ್ಸ್‌ 66 ಪಾಯಿಂಟ್ಸ್ ಮೂಲಕ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

Story first published: Saturday, February 19, 2022, 8:57 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X