ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8 ಸೆಮಿಫೈನಲ್ಸ್: ತಂಡಗಳು, ಸಮಯ, ದಿನಾಂಕ ಮತ್ತು ನೇರಪ್ರಸಾರದ ಮಾಹಿತಿ

Pro Kabaddi 2022 Semifinal Schedule Time Table: Teams, Date, Time, Live Streaming Info in kannada

ಕಳೆದ ವರ್ಷದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾಗಿದ್ದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಇದೀಗ ಪ್ಲೇ ಆಫ್ ಹಂತಕ್ಕೆ ಬಂದು ತಲುಪಿದೆ. ಹೌದು, ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷ ನಡೆಯದೇ ಇದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು 12 ತಂಡಗಳ ಪೈಕಿ 4 ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ. ಲೀಗ್ ಹಂತದ ಪಂದ್ಯಗಳಲ್ಲಿ ಹೆಚ್ಚು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ಪಾಟ್ನಾ ಪೈರೇಟ್ಸ್ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದ ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶವನ್ನು ಮಾಡಿದ್ದವು.

ಹೀಗೆ ಗ್ರೂಪ್ ಹಂತದ ಪಂದ್ಯಗಳಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸಿದ್ದ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಸೆಮಿಫೈನಲ್ ಹಂತಕ್ಕೆ ನೇರವಾಗಿ ಪ್ರವೇಶವನ್ನು ಪಡೆದುಕೊಂಡರೆ ಅಂಕಪಟ್ಟಿಯಲ್ಲಿ 3, 4, 5 ಮತ್ತು 6ನೇ ಸ್ಥಾನಗಳನ್ನು ಕ್ರಮವಾಗಿ ಪಡೆದುಕೊಂಡಿದ್ದ ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಹಣಾಹಣಿಯನ್ನು ನಡೆಸಿದವು. ಹೀಗೆ ಯುಪಿ ಯೋಧಾ ಮತ್ತು ಪುಣೇರಿ ಪಲ್ಟಾನ್ ತಂಡಗಳ ನಡುವೆ ನಡೆದ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡಕ್ಕೆ ಸೋಲುಣಿಸಿದ ಯುಪಿ ಯೋಧಾ ಸೆಮಿಫೈನಲ್ ಪ್ರವೇಶಿಸಿತು. ಹಾಗೂ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ನಡೆದ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಸೆಣಸಾಟದಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ನೇರವಾಗಿ ಸೆಮಿಫೈನಲ್ ತಲುಪಿದ್ದ ಪಾಟ್ನಾ ಪೈರೇಟ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳ ಜೊತೆಗೆ ಎಲಿಮಿನೇಟರ್ ಪಂದ್ಯಗಳಲ್ಲಿ ಜಯ ಸಾಧಿಸಿದ ಯುಪಿ ಯೋಧಾ ಮತ್ತು ಬೆಂಗಳೂರು ಬುಲ್ಸ್ ತಂಡಗಳು ಕೂಡ ಸೆಮಿಫೈನಲ್ ಹಂತವನ್ನು ತಲುಪುವಲ್ಲಿ ಯಶಸ್ವಿಯಾಗಿವೆ.

ಹೀಗೆ ಸೆಮಿಫೈನಲ್ಸ್ ಹಂತವನ್ನು ಯಶಸ್ವಿಯಾಗಿ ತಲುಪಿರುವ ತಂಡಗಳಲ್ಲಿ ಯಾವ ತಂಡ ಯಾವ ತಂಡವನ್ನು ಎದುರಿಸಲಿದೆ ಮತ್ತು ಯಾವಾಗ ಪಂದ್ಯಗಳು ನಡೆಯಲಿವೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಕೋವಿಡ್-19 ಲಸಿಕೆ ಪ್ರಮಾಣಪತ್ರವಿಲ್ಲದೆ ಇಡೀದಿನ ಏರ್‌ಪೋರ್ಟ್‌ನಲ್ಲಿ ಪರದಾಟ: ಭಾರತ ಅಂಡರ್-19 ಕ್ರಿಕೆಟಿಗರ ವಿಚಾರ ತಡವಾಗಿ ಬಹಿರಂಗಕೋವಿಡ್-19 ಲಸಿಕೆ ಪ್ರಮಾಣಪತ್ರವಿಲ್ಲದೆ ಇಡೀದಿನ ಏರ್‌ಪೋರ್ಟ್‌ನಲ್ಲಿ ಪರದಾಟ: ಭಾರತ ಅಂಡರ್-19 ಕ್ರಿಕೆಟಿಗರ ವಿಚಾರ ತಡವಾಗಿ ಬಹಿರಂಗ

ಪ್ರೋ ಕಬಡ್ಡಿ ಲೀಗ್ ಪಂದ್ಯಗಳ ಆಯೋಜನೆಯ ವಿನ್ಯಾಸದಂತೆ ಎಲಿಮಿನೇಟರ್ ಮೊದಲನೇ ಪಂದ್ಯದಲ್ಲಿ ಗೆದ್ದ ಯುಪಿ ಯೋಧಾ ತಂಡ ಸೆಮಿಫೈನಲ್ 1 ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದು ಈಗಾಗಲೇ ಸೆಮಿಫೈನಲ್ 1 ತಲುಪಿರುವ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಾಟವನ್ನು ನಡೆಸಲಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಫೆಬ್ರವರಿ 23ರ ಬುಧವಾರದಂದು ಸಂಜೆ 7:30ಕ್ಕೆ ಆರಂಭವಾಗಲಿದೆ.

ಇನ್ನು ಪ್ರೋ ಕಬಡ್ಡಿ ಲೀಗ್ ಪಂದ್ಯಗಳ ಆಯೋಜನೆಯ ವಿನ್ಯಾಸದಂತೆ ಎಲಿಮಿನೇಟರ್ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದ ಬೆಂಗಳೂರು ಬುಲ್ಸ್ ಸೆಮಿಫೈನಲ್ 2 ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಫೆಬ್ರವರಿ 23ರ ಬುಧವಾರದಂದು ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ.

ರೋಹಿತ್ ಶರ್ಮಾ ಮುಂದಿದೆ ಕಠಿಣ ಸವಾಲು, ವರ್ಷವಿಡೀ ಕ್ರಿಕೆಟ್ ಆಡಬಲ್ಲರೇ? ಎಂದು ಪ್ರಶ್ನಿಸಿದ ದಿನೇಶ್ ಕಾರ್ತಿಕ್ರೋಹಿತ್ ಶರ್ಮಾ ಮುಂದಿದೆ ಕಠಿಣ ಸವಾಲು, ವರ್ಷವಿಡೀ ಕ್ರಿಕೆಟ್ ಆಡಬಲ್ಲರೇ? ಎಂದು ಪ್ರಶ್ನಿಸಿದ ದಿನೇಶ್ ಕಾರ್ತಿಕ್

ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Wednesday, February 23, 2022, 14:28 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X