ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅ. 5ರಿಂದ ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ತಂಡದ ವೇಳಾಪಟ್ಟಿ ಪ್ರಕಟ

Pro kabaddi league 2018: Bengaluru Bulls schedule

ಬೆಂಗಳೂರು, ಸೆಪ್ಟೆಂಬರ್ 18: ವಿವೋ ಪ್ರೊ ಕಬಡ್ಡಿಯ ಆರನೇ ಆವೃತ್ತಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ.

ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ತೆಲುಗು ಟೈಟಾನ್ಸ್ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಲಿವೆ.

ಪ್ಲೇ ಆಫ್ ಪಂದ್ಯಗಳು ಕೊಚ್ಚಿ ಮತ್ತು ಮುಂಬೈನಲ್ಲಿ ನಡೆಯಲಿದ್ದು, ಜನವರಿ 5ರಂದು ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

ಪಿಕೆಎಲ್ ಕಳೆದ ಸೀಸನ್ ಗಳೆಡೆಗೆ ಸಣ್ಣದೊಂದು ಇಣುಕುನೋಟ.. ಪಿಕೆಎಲ್ ಕಳೆದ ಸೀಸನ್ ಗಳೆಡೆಗೆ ಸಣ್ಣದೊಂದು ಇಣುಕುನೋಟ..

ಬೆಂಗಳೂರಿನಲ್ಲಿ ನವೆಂಬರ್ 23 ರಿಂದ 29ರವರೆಗೆ 11 ಪಂದ್ಯಗಳು ನಡೆಯಲಿವೆ.

ಕಾಗದದ ಮೇಲಿನ ಹುಲಿಯಾಗಿರುವ ಬೆಂಗಳೂರು ಬುಲ್ಸ್, ಈ ಆವೃತ್ತಿಯಲ್ಲಿ ತನ್ನ ನೈಜ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ. ಕಳೆದ ಆವೃತ್ತಿಯಲ್ಲಿ 22 ಪಂದ್ಯಗಳಲ್ಲಿ ಕೇವಲ 8ರಲ್ಲಿ ಗೆಲುವು ಸಾಧಿಸಿತ್ತು.

Pro kabaddi league 2018: Bengaluru Bulls schedule

ಈ ಬಾರಿ ರೋಹಿತ್ ಬಕುಮಾರ್ ನೇತೃತ್ವದ ತಂಡಕ್ಕೆ ರೈಡರ್ ಕಾಶಿಲಿಂಗ್ ಅಡಕೆ, ಪವನ್ ಕುಮಾರ್ ಸೆಹ್ರಾವತ್ ಅವರ ಬಲ ಸಿಕ್ಕಿದೆ. ರಾಜು ಲಾಲ್ ಚೌಧರಿ ಅವರ ಅನುಭವದ ಜತೆ ಮಹೇಂದರ್ ಸಿಂಗ್, ಜವಹರ್ ಕೆ ಮತ್ತು ನಿತೇಶ್ ಬಿ.ಆರ್. ಅವರ ರಕ್ಷಣಾಕೋಟೆಯ ತಾಳಮೇಳ ಕೂಡಿದರೆ ಬುಲ್ಸ್‌ಗೆ ಗೆಲುವು ಒಲಿಯಲಿದೆ.

ಆಶೀಶ್ ಸಾಂಗ್ವಾನ್, ಜಸ್ಮೆರ್ ಗುಲಿಯಾ ಮತ್ತು ಡಾಂಗ್ ಜು ಹಾಂಗ್ ಅವರ ಮೇಲೆ ಬುಲ್ಸ್ ಮಾಲೀಕತ್ವ ನಂಬಿಕೆ ಇರಿಸಿದೆ.

ಐಪಿಎಲ್ ಕಡಿಮೆ ಬೆಲೆ vs ಪಿಕೆಎಲ್ ದುಬಾರಿ ಬೆಲೆಯ ಆಟಗಾರರುಐಪಿಎಲ್ ಕಡಿಮೆ ಬೆಲೆ vs ಪಿಕೆಎಲ್ ದುಬಾರಿ ಬೆಲೆಯ ಆಟಗಾರರು

ಈ ಆವೃತ್ತಿಯಲ್ಲಿ ಬುಲ್ಸ್ ತಂಡ 21 ಲೀಗ್ ಹಂತದ ಪಂದ್ಯಗಳನ್ನು ಆಡಲಿದ್ದು, ಒಂದು ವೈಲ್ಡ್ ಕಾರ್ಡ್ ಪಂದ್ಯವೂ ಇರಲಿದೆ.

ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳ ವೇಳಾಪಟ್ಟಿ

ಅ. 10: ತಮಿಳ್ ತಲೈವಾಸ್ ವಿರುದ್ಧ
ಸ್ಥಳ: ಚೆನ್ನೈ, ಸಮಯ: 9.00 PM

ಅ. 17: ತಮಿಳ್ ತಲೈವಾಸ್
ಸ್ಥಳ: ಸೋನಿಪಟ್, ಸಮಯ: 8.00 PM

ಅ. 21: ಪುಣೇರಿ ಪಲ್ಟನ್
ಸ್ಥಳ: ಪುಣೆ, ಸಮಯ: 9.00 PM

ಅ. 24: ಹರಿಯಾಣ ಸ್ಟೀಲರ್ಸ್
ಸ್ಥಳ: ಪುಣೆ, ಸಮಯ: 8.00 PM

ಅ. 31: ಪಟ್ನಾ ಪೈರೇಟ್ಸ್
ಸ್ಥಳ: ಪಟ್ನಾ, ಸಮಯ: 9.00 PM

ನ. 3: ಯುಪಿ ಯೋಧಾ
ಸ್ಥಳ: ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ), ಸಮಯ: 9.00 PM

ನ. 8: ಯುಪಿ ಯೋಧಾ
ಸ್ಥಳ: ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ), ಸಮಯ: 9.00 PM

ನ. 14: ಯು ಮುಂಬಾ
ಸ್ಥಳ: ಮುಂಬೈ, ಸಮಯ: 9.00 PM

ನ. 17: ಗುಜರಾತ್ ಫಾರ್ಚುನ್‌ಗಿಯಾಂಟ್ಸ್
ಸ್ಥಳ: ಅಹ್ಮದಾಬಾದ್, ಸಮಯ: 9.00 PM

ನ. 18: ಜೈಪುರ ಪಿಂಕ್ ಪ್ಯಾಂಥರ್ಸ್
ಸ್ಥಳ: ಅಹ್ಮದಾಬಾದ್, ಸಮಯ: 8.00 PM

ನ. 23: ಬೆಂಗಾಲ್ ವಾರಿಯರ್ಸ್
ಸ್ಥಳ: ಬೆಂಗಳೂರು, ಸಮಯ: 8.00 PM

ನ. 24: ತಮಿಳ್ ತಲೈವಾಸ್
ಸ್ಥಳ: ಬೆಂಗಳೂರು, ಸಮಯ: 9.00 PM

ನ. 25: ಪಟ್ನಾ ಪೈರೇಟ್ಸ್
ಸ್ಥಳ: ಬೆಂಗಳೂರು, ಸಮಯ: 9.00 PM

ನ. 27: ತೆಲುಗು ಟೈಟನ್ಸ್
ಸ್ಥಳ: ಬೆಂಗಳೂರು, ಸಮಯ: 9.00 PM

ನ. 28: ಯುಪಿ ಯೋಧಾ
ಸ್ಥಳ: ಬೆಂಗಳೂರು, ಸಮಯ: 9.00 PM

ನ. 29: ಬೆಂಗಾಲ್ ವಾರಿಯರ್ಸ್
ಸ್ಥಳ: ಬೆಂಗಳೂರು, ಸಮಯ: 9.00 PM

ಡಿ. 5: ದಬಾಂಗ್ ಡೆಲ್ಲಿ
ಸ್ಥಳ: ದೆಹಲಿ, ಸಮಯ: 9.00 PM

ಡಿ. 12: ತೆಲುಗು ಟೈಟನ್ಸ್
ಸ್ಥಳ: ಹೈದರಾಬಾದ್, ಸಮಯ: 9.00 PM

ಡಿ. 18: ತೆಲುಗು ಟೈಟನ್ಸ್
ಸ್ಥಳ: ಜೈಪುರ, ಸಮಯ: 8.00 PM

ಡಿ. 19: ಪಟ್ನಾ ಪೈರೇಟ್ಸ್
ಸ್ಥಳ: ಜೈಪುರ, ಸಮಯ: 8.00 PM

ಡಿ. 26: ಬೆಂಗಾಲ್ ವಾರಿಯರ್ಸ್
ಸ್ಥಳ: ಕೋಲ್ಕತಾ, ಸಮಯ: 9.00 PM

ಪ್ಲೇ ಆಫ್ ಪಂದ್ಯಗಳು

ಎಲಿಮಿನೇಟರ್-1
ಡಿ. 30, ಸ್ಥಳ: ಕೊಚ್ಚಿ,
ಸಮಯ: 8.00 PM

ಎಲಿಮಿನೇಟರ್-2
ಡಿ. 30, ಸ್ಥಳ: ಕೊಚ್ಚಿ
ಸಮಯ: 9.00 PM

ಕ್ವಾಲಿಫೈಯರ್-1
ಡಿ. 31, ಸ್ಥಳ: ಕೊಚ್ಚಿ
ಸಮಯ: 8.00 PM

ಎಲಿಮಿನೇಟರ್-2
ಡಿ. 31, ಸ್ಥಳ: ಕೊಚ್ಚಿ
ಸಮಯ: 9.00 PM

ಕ್ವಾಲಿಫೈಯರ್ -2
ಜ. 3, ಸ್ಥಳ: ಮುಂಬೈ
ಸಮಯ: 8.00 PM

ಫೈನಲ್
ಜ. 5, ಸ್ಥಳ: ಮುಂಬೈ
ಸಮಯ: 8.00 PM

Story first published: Tuesday, October 9, 2018, 16:07 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X