ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಯಂಟ್ಸ್‌ ಬಾಹುಬಲಕ್ಕೆ ತಬಿಬ್ಬಾದ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್

Pro Kabaddi League 2019: disappointing outing for Bengaluru Bulls

ಹೈದರಾಬಾದ್‌, ಜುಲೈ 21: ಬಹು ಬಾರಿಯ ಚಾಂಪಿಯನ್ಸ್‌ ಪಟನಾ ಪೈರೇಟ್ಸ್‌ ತಂಡವನ್ನು ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಬಗ್ಗು ಬಡಿದು ಶುಭಾರಂಭ ಮಾಡಿದ್ದ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ತಂಡ, ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ ಜಯಂಟ್ಸ್‌ ಎದುರು ಮಣ್ಣು ಮುಕ್ಕಿದೆ.

ಕಳೆದ ವರ್ಷ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿದ್ದ ಬೆಂಗಳೂರು ತಂಡ, ಇಲ್ಲಿನ ಗಚ್ಚಿ ಬೌಲಿ ಕ್ರೀಡಾಂಗಣದಲ್ಲಿ ಅಕ್ಷರಶಃ ಕಳಾಹೀನ ಪ್ರದರ್ಶನ ನೀಡಿ 24-42 ಅಂತರದ ಹೀನಾಯ ಸೋಲುಂಡಿತು.

ಪಂದ್ಯದಲ್ಲಿ ಬೆಂಗಳೂರು ತಂಡದ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ (8) ಹೋರಾಟ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್‌ ಕುಮಾರ್‌ (4) ರೇಡಿಂಗ್‌ನಲ್ಲಿ ಯಸಸ್ಸು ತಂದುಕೊಡುವಲ್ಲಿ ವಿಫಲರಾದ ಪರಿಣಾಮ ಬುಲ್ಸ್‌ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿತು. ಟ್ಯಾಕಲ್‌ನಲ್ಲಿ ಮಹೇಂದರ್‌ ಸಿಂಗ್‌ ನಾಲ್ಕು ಅಂಕ ಗಳಿಸಿ ಗಮನ ಸೆಳೆದರು.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

ಮತ್ತೊಂದೆಡೆ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್‌ ಜಯಂಟ್ಸ್‌ ತಂಡದ ಪರ ಎಲ್ಲಾ ಆಟಗಾರರು ತಂದುಕೊಟ್ಟ ಅಂಗಳಿಂದ ಮೇಲುಗೈ ಲಭ್ಯವಾಯಿತು. ಪ್ರಮುಖವಾಗಿ ಡಿಫೆನ್ಸ್‌ ವಿಭಾಗದ ಕಡೆಗೆ ಹೆಚ್ಚಿನ ಒತ್ತು ನೀಡಿದ ಜಯಂಟ್ಸ್‌ ಎದುರಾಳಿ ಬೆಂಗಳೂರು ತಮಡದ ರೇಡರ್‌ಗಳನ್ನು ಯಶಸ್ವಿಯಾಗಿ ಬಂಧಿಸಿ ಸತತ ಅಂಕಗಳನ್ನು ದಾಖಲಿಸಿತು. ಅಲ್ಲದೆ ಮೂರು ಬಾರಿ ಬುಲ್ಸ್‌ ಪಡೆಯನ್ನು ಆಲ್‌ಔಟ್‌ ಮಾಡಿ ಒಟ್ಟು 6 ಲೋನಾ ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

ಜಯಂಟ್ಸ್‌ ತಂಡದ ಪರ 15 ಬಾರಿ ದಾಳಿಗಿದ ಯುವ ರೇಡರ್‌ ಸಚಿನ್‌ ಒಟ್ಟು ಆರು ಅಂಕಗಳನ್ನು ಗಳಿಸಿದರು. ಅವರಿಗೆ ಡಿಫೆಂಡರ್‌ ಸುನಿಲ್‌ ಕುಮಾರ್‌ (6) ಮತ್ತು ಜಿಬಿ ಮೋರೆ (6) ಉತ್ತಮ ಸಾಥ್‌ ನೀಡಿದರು. ಬದಲಿ ಆಟಗಾರ ಸೋನು ಕೂಡ 5 ಅಂಕಗಳ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ವಿಶ್ವಕಪ್‌ನಲ್ಲಿದ್ದರೂ ವಿಂಡೀಸ್‌ ಪ್ರವಾಸಕ್ಕೆ ಮಯಾಂಕ್‌ ಬೇಡವಾದರು ಏಕೆ?ವಿಶ್ವಕಪ್‌ನಲ್ಲಿದ್ದರೂ ವಿಂಡೀಸ್‌ ಪ್ರವಾಸಕ್ಕೆ ಮಯಾಂಕ್‌ ಬೇಡವಾದರು ಏಕೆ?

ಪಂದ್ಯದ ಹಾಫ್‌ ಟೈಮ್ ಹೊತ್ತಿಗೆ 21-10 ಅಂಕಗಳಿಂದ ಒಟ್ಟು 11 ಅಂಕಗಳ ಮುನ್ನಡೆ ಗಳಿಸಿದ್ದ ಗುಜರಾತ್‌ ತಂಡ ಹಿಂದಿರುಗಿ ನೋಡಲೇ ಇಲ್ಲ. ರೇಡಿಂಗ್‌ ಮತ್ತು ಟ್ಯಾಕಲ್‌ ಎಲ್ಲದರಲ್ಲೂ ಅಂಕಗಳನ್ನು ಪೋಣಿಸುತ್ತಾ ಸಾಗುವ ಮೂಲಕ ಕಳೆದ ವರ್ಷದ ಫೈನಲ್‌ ಸೋಲಿಗೆ ಭರ್ಜರಿ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

Story first published: Sunday, July 21, 2019, 21:17 [IST]
Other articles published on Jul 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X