ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 9ನೇ ಸೀಸನ್: ವೇಳಾಪಟ್ಟಿ, ನೇರಪ್ರಸಾರದ ವಿವರ, ಟಿಕೆಟ್ ಬುಕ್ಕಿಂಗ್ ಮಾಹಿತಿ

 pro kabaddi 2022

ಅಂತೂ.. ಇಂತೂ ಜನಮೆಚ್ಚಿನ ಪ್ರೊ ಕಬಡ್ಡಿ ಲೀಗ್‌ 9ನೇ ಸೀಸನ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮೊದಲಾರ್ಧದ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಅಕ್ಟೋಬರ್‌ 7ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್‌ ಆರಂಭಗೊಳ್ಳಲಿದ್ದು, ನಂತರ ಅಕ್ಟೋಬರ್‌ 28ರಂದು ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ (ಬ್ಯಾಡ್ಮಿಂಟನ್‌ ಕೋರ್ಟ್‌) ನಂತರದ ಹಂತ ನಡೆಯಲಿದೆ.

ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಒಟ್ಟು 66 ಪಂದ್ಯಗಳು ನಡೆಯಲಿದೆ. ಈ ಋತುವಿನ ಲೀಗ್‌ನಲ್ಲಿ ಕಬಡ್ಡಿ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನೋಡುವ ಅವಕಾಶವಿದ್ದು, ಅವರನ್ನು ವಿಶೇಷವಾಗಿ ಉಪಚರಿಸಲು ಲೀಗ್‌ ಸಜ್ಜಾಗಿದೆ. ಲೀಗ್‌ಗೆ ಈ ಬಾರಿ ಭವ್ಯವಾಗಿ ಉದ್ಘಾಟನೆಗೊಳ್ಳಲಿದ್ದು, ಮೂರು ದಿನಗಳ ಕಾಲ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿದೆ. 66 ಪಂದ್ಯಗಳಿಂದ ಕೂಡಿದ ವೇಳಾಪಟ್ಟಿಯಲ್ಲಿ ಪ್ರತಿಯೊಂದು ಪಂದ್ಯ ವಿಭಿನ್ನವಾಗಿದ್ದು, ಮೊದಲ 2 ದಿನಗಳೊಳಗೆ ಕಬಡ್ಡಿ ಅಭಿಮಾನಿಗಳು ಎಲ್ಲ 12 ತಂಡಗಳ ಆಟವನ್ನು ವೀಕ್ಷಿಸಬಹುದು. ಪಿಕೆಎಲ್‌ 9ನೇ ಋತುವಿನಲ್ಲಿ ಲೀಗ್‌ ಹಂತದಲ್ಲಿ ಪ್ರತಿ ಶುಕ್ರವಾರ ಮತ್ತು ಭಾನುವಾರ ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳನ್ನ ವೀಕ್ಷಿಸಬಹುದು.

ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ vs ಯು ಮುಂಬಾ ಫೈಟ್‌

ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ vs ಯು ಮುಂಬಾ ಫೈಟ್‌

ಅಕ್ಟೋಬರ್‌ 7ರಂದು ನಡೆಯುವ 9ನೇ ಋತುವಿನ ಮೊದಲ ಪಂದ್ಯದಲ್ಲಿ 8ನೇ ಋತುವಿನ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆ.ಸಿ. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಲಿದೆ. ನಂತರ ನಡೆಯುವ ಲೀಗ್‌ನ ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಯು.ಪಿ. ಯೋಧಾಸ್‌ ವಿರುದ್ಧ ಹೋರಾಟ ನಡೆಸಲಿದೆ. ಮೊದಲಾರ್ಧದ ವೇಳಾಪಟ್ಟಿಯ ಪ್ರತಿಯೊಂದು ಪಂದ್ಯದಲ್ಲೂ ವಿಶೇಷ ಮುಖಾಮುಖಿಯನ್ನು ಲೀಗ್‌ ಖಚಿತಪಡಿಸುತ್ತಿದೆ.

ಟೂರ್ನಿಯ ಎರಡನೇ ಹಂತದಲ್ಲಿ ತಂಡಗಳು ತಮ್ಮ ರಣತಂತ್ರ ರೂಪಿಸಲು, ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುಲು ಅವಕಾಶ ನೀಡುವ ದೃಷ್ಟಿಯಿಂದ ಲೀಗ್‌ನ ಎರಡನೇ ಹಂತದ ವೇಳಾಪಟ್ಟಿಯಲ್ಲಿ 2022ರ ಅಕ್ಟೋಬರ್‌ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು.

ಪ್ರೊ ಕಬಡ್ಡಿ ಟಿಕೆಟ್ ಬುಕ್ಕಿಂಗ್ ಮತ್ತು ನೇರ ಪ್ರಸಾರದ ವೀಕ್ಷಣೆ ಮಾಹಿತಿ

ಪ್ರೊ ಕಬಡ್ಡಿ ಟಿಕೆಟ್ ಬುಕ್ಕಿಂಗ್ ಮತ್ತು ನೇರ ಪ್ರಸಾರದ ವೀಕ್ಷಣೆ ಮಾಹಿತಿ

ಕಬಡ್ಡಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ತಮ್ಮ ಟಿಕೆಟ್‌ಗಳನ್ನು BookMyShow ಮೂಲಕ ಕಾಯ್ದಿರಿಸಿಕೊಳ್ಳಬಹುದು. 9ನೇ ಆವೃತ್ತಿಯ ವಿವೋ ಪ್ರೋ ಕಬಡ್ಡಿ ಲೀಗ್‌ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ (Star Sports Network) ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar)ನಲ್ಲಿ ನೇರ ಪ್ರಸಾರವಾಗಲಿದೆ.

ಭಾರತದಲ್ಲಿ ಪ್ರೊ ಕಬಡ್ಡಿಯನ್ನ ಈ ಚಾನೆಲ್‌ನಲ್ಲಿ ವೀಕ್ಷಿಸಬಹುದು: ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ 1 ತಮಿಳ್, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ, ಸ್ಟಾರ್ ಸ್ಪೋರ್ಟ್ಸ್ ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಹಿಂದಿ HD, ಸ್ಟಾರ್‌ ಸ್ಪೋರ್ಟ್ಸ್‌ ಫಸ್ಟ್‌

ಇನ್ನು ಪ್ರೊ ಕಬಡ್ಡಿ ಪಂದ್ಯಗಳ ಕುರಿತಾಗಿ ಅಪ್‌ಡೇಟ್‌ ಪಡೆಯಲು ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ prokabaddi ಫಾಲೋ ಮಾಡಬಹುದು.

ಅಂಕಿ-ಅಂಶ ನೋಡಿ ಮಾತಾಡ್ರಿ..! ಪತ್ರಕರ್ತನ ಪ್ರಶ್ನೆಗೆ ಗರಂ ಆದ ರಾಹುಲ್ ದ್ರಾವಿಡ್

ಪ್ರೊ ಕಬಡ್ಡಿ ಸೀಸನ್ 9 ಸಂಪೂರ್ಣ ವೇಳಾಪಟ್ಟಿ

ಪ್ರೊ ಕಬಡ್ಡಿ ಸೀಸನ್ 9 ಸಂಪೂರ್ಣ ವೇಳಾಪಟ್ಟಿ

ಅಕ್ಟೋಬರ್ 7 ಶುಕ್ರವಾರ : ದಬಾಂಗ್ ದೆಹಲಿ ವಿರುದ್ಧ ಯು ಮುಂಬಾ 7:30 PM
ಅಕ್ಟೋಬರ್ 7 ಶುಕ್ರವಾರ : ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ 8:30 PM
ಅಕ್ಟೋಬರ್ 7 ಶುಕ್ರವಾರ : ಜೈಪುರ ಪಿಂಕ್ ಪ್ಯಾಂಥರ್ಸ್ vs ಯುಪಿ ಯೋದ್ದಾಸ್ 9:30 PM
ಅಕ್ಟೋಬರ್ 8 ಶನಿವಾರ : ಪಾಟ್ನಾ ಪೈರೇಟ್ಸ್ vs ಪುಣೇರಿ ಪಲ್ಟನ್ 7:30 PM
ಅಕ್ಟೋಬರ್ 8 ಶನಿವಾರ : ಗುಜರಾತ್ ಜೈಂಟ್ಸ್ ವಿರುದ್ಧ ತಮಿಳು ತಲೈವಾಸ್ 8:30 PM
ಅಕ್ಟೋಬರ್ 8 ಶನಿವಾರ : ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 9:30 PM
ಅಕ್ಟೋಬರ್ 9 ಭಾನುವಾರ : ಜೈಪುರ ಪಿಂಕ್ ಪ್ಯಾಂಥರ್ಸ್ vs ಪಾಟ್ನಾ ಪೈರೇಟ್ಸ್ 7:30 PM
ಅಕ್ಟೋಬರ್ 9 ಭಾನುವಾರ : ತೆಲುಗು ಟೈಟಾನ್ಸ್ vs ಬೆಂಗಾಲ್ ವಾರಿಯರ್ಸ್ 8:30 PM
ಅಕ್ಟೋಬರ್ 9 ಭಾನುವಾರ : ಪುಣೇರಿ ಪಲ್ಟನ್ ವಿರುದ್ಧ ಬೆಂಗಳೂರು ಬುಲ್ಸ್ 9:30 PM
ಅಕ್ಟೋಬರ್ 10 ಸೋಮವಾರ : ಯು ಮುಂಬಾ vs ಯುಪಿ ಯೋದ್ದಾಸ್ 7:30 PM
ಅಕ್ಟೋಬರ್ 10 ಸೋಮವಾರ : ದಬಾಂಗ್ ದೆಹಲಿ vs ಗುಜರಾತ್ ಜೈಂಟ್ಸ್ 8:30 PM
ಅಕ್ಟೋಬರ್ 11 ಮಂಗಳವಾರ : ಹರಿಯಾಣ ಸ್ಟೀಲರ್ಸ್ vs ತಮಿಳ್ ತಲೈವಾಸ್ 7:30 PM
ಅಕ್ಟೋಬರ್ 11 ಮಂಗಳವಾರ : ಪಾಟ್ನಾ ಪೈರೇಟ್ಸ್ vs ತೆಲುಗು ಟೈಟಾನ್ಸ್ 8:30 PM
ಅಕ್ಟೋಬರ್ 12 ಬುಧವಾರ : ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ 7:30 PM
ಅಕ್ಟೋಬರ್ 12 ಬುಧವಾರ : ಯುಪಿ ಯೋದ್ದಾಸ್ vs ದಬಾಂಗ್ ದೆಹಲಿ 8:30 PM
ಅಕ್ಟೋಬರ್ 14 ಶುಕ್ರವಾರ : ತಮಿಳು ತಲೈವಾಸ್ vs U ಮುಂಬಾ 7:30 PM
ಅಕ್ಟೋಬರ್ 14 ಶುಕ್ರವಾರ : ಹರಿಯಾಣ ಸ್ಟೀಲರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ 8:30 PM
ಅಕ್ಟೋಬರ್ 14 ಶುಕ್ರವಾರ : ಗುಜರಾತ್ ಜೈಂಟ್ಸ್ ವಿರುದ್ಧ ಪುಣೇರಿ ಪಲ್ಟನ್ 9:30 PM
ಅಕ್ಟೋಬರ್ 15 ಶನಿವಾರ : ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 7:30 PM
ಅಕ್ಟೋಬರ್ 15 ಶನಿವಾರ : ತೆಲುಗು ಟೈಟಾನ್ಸ್ vs ದಬಾಂಗ್ ದೆಹಲಿ 8:30 PM
ಅಕ್ಟೋಬರ್ 15 ಶನಿವಾರ : ಬೆಂಗಾಲ್ ವಾರಿಯರ್ಸ್ vs ಪಾಟ್ನಾ ಪೈರೇಟ್ಸ್ 9:30 PM
ಅಕ್ಟೋಬರ್ 16 ಭಾನುವಾರ : ಪುಣೇರಿ ಪಲ್ಟನ್ ವಿರುದ್ಧ ಯು ಮುಂಬಾ 7:30 PM
ಅಕ್ಟೋಬರ್ 16 ಭಾನುವಾರ : ಯುಪಿ ಯೋದ್ದಾಸ್ vs ಬೆಂಗಳೂರು ಬುಲ್ಸ್ 8:30 PM
ಅಕ್ಟೋಬರ್ 17 ಸೋಮವಾರ: ತಮಿಳ್ ತಲೈವಾಸ್ vs ಪಾಟ್ನಾ ಪೈರೇಟ್ಸ್ 7:30 PM
ಅಕ್ಟೋಬರ್ 17 ಸೋಮವಾರ: ದಬಾಂಗ್ ದೆಹಲಿ vs ಹರಿಯಾಣ ಸ್ಟೀಲರ್ಸ್ 8:30 PM
ಅಕ್ಟೋಬರ್ 18 ಮಂಗಳವಾರ : ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 7:30 PM
ಅಕ್ಟೋಬರ್ 18 ಮಂಗಳವಾರ : ತೆಲುಗು ಟೈಟಾನ್ಸ್ ವಿರುದ್ಧ ಪುಣೇರಿ ಪಲ್ಟನ್ 8:30 PM
ಅಕ್ಟೋಬರ್ 19 ಬುಧವಾರ : ಗುಜರಾತ್ ಜೈಂಟ್ಸ್ vs ಯುಪಿ ಯೋದ್ದಾಸ್ 7:30 PM
ಅಕ್ಟೋಬರ್ 19 ಬುಧವಾರ : ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ 8:30 PM
ಅಕ್ಟೋಬರ್ 21 ಶುಕ್ರವಾರ : ಯು ಮುಂಬಾ vs ಹರಿಯಾಣ ಸ್ಟೀಲರ್ಸ್
ಅಕ್ಟೋಬರ್ 21 ಶುಕ್ರವಾರ : ಪುಣೇರಿ ಪಲ್ಟನ್ ವಿರುದ್ಧ ಬೆಂಗಾಲ್ ವಾರಿಯರ್ಸ್ 8:30 PM
ಅಕ್ಟೋಬರ್ 21 ಶುಕ್ರವಾರ : ಪಾಟ್ನಾ ಪೈರೇಟ್ಸ್ ವಿರುದ್ಧ ದಬಾಂಗ್ ದೆಹಲಿ 9:30 PM
ಅಕ್ಟೋಬರ್ 22 ಶನಿವಾರ : ಯು ಮುಂಬಾ vs ಬೆಂಗಳೂರು ಬುಲ್ಸ್ 7:30 PM
ಅಕ್ಟೋಬರ್ 22 ಶನಿವಾರ : ಜೈಪುರ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟಾನ್ಸ್ 8:30 PM
ಅಕ್ಟೋಬರ್ 22 ಶನಿವಾರ : ಹರಿಯಾಣ ಸ್ಟೀಲರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 9:30 PM
ಅಕ್ಟೋಬರ್ 23 ಭಾನುವಾರ : ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ 7:30 PM
ಅಕ್ಟೋಬರ್ 23 ಭಾನುವಾರ : ಯುಪಿ ಯೋದ್ದಾಸ್ vs ತಮಿಳ್ ತಲೈವಾಸ್‌ 8:30 PM
ಅಕ್ಟೋಬರ್ 25 ಮಂಗಳವಾರ : ಪುಣೇರಿ ಪಲ್ಟನ್ vs ಜೈಪುರ ಪಿಂಕ್ ಪ್ಯಾಂಥರ್ಸ್ 7:30 PM
ಅಕ್ಟೋಬರ್ 25 ಮಂಗಳವಾರ : ತೆಲುಗು ಟೈಟಾನ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 8:30 PM
ಅಕ್ಟೋಬರ್ 26 ಬುಧವಾರ : ಗುಜರಾತ್ ಜೈಂಟ್ಸ್ ವಿರುದ್ಧ ಯು ಮುಂಬಾ 7:30 PM
ಅಕ್ಟೋಬರ್ 26 ಬುಧವಾರ : ದಬಾಂಗ್ ದೆಹಲಿ vs ಬೆಂಗಾಲ್ ವಾರಿಯರ್ಸ್ 8:30 PM
ಅಕ್ಟೋಬರ್ 28 ಶುಕ್ರವಾರ : ತಮಿಳು ತಲೈವಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ 7:30 PM
ಅಕ್ಟೋಬರ್ 28 ಶುಕ್ರವಾರ : ಹರಿಯಾಣ ಸ್ಟೀಲರ್ಸ್ ವಿರುದ್ಧ ಪುಣೇರಿ ಪಲ್ಟನ್ 8:30 PM
ಅಕ್ಟೋಬರ್ 28 ಶುಕ್ರವಾರ : ಪಾಟ್ನಾ ಪೈರೇಟ್ಸ್ ವಿರುದ್ಧ ಯುಪಿ ಯೋಧಾಸ್ 9:30 PM
ಅಕ್ಟೋಬರ್ 29 ಶನಿವಾರ : ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ದೆಹಲಿ 7:30 PM
ಅಕ್ಟೋಬರ್ 29 ಶನಿವಾರ : ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 8:30 PM
ಅಕ್ಟೋಬರ್ 29 ಶನಿವಾರ : ಬೆಂಗಾಲ್ ವಾರಿಯರ್ಸ್ ವಿರುದ್ಧ ಯು ಮುಂಬಾ 9:30 PM
ಅಕ್ಟೋಬರ್ 30 ಭಾನುವಾರ : ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 7:30 PM
ಅಕ್ಟೋಬರ್ 30 ಭಾನುವಾರ : ತಮಿಳ್ ತಲೈವಾಸ್ ವಿರುದ್ಧ ದಬಾಂಗ್ ದೆಹಲಿ 8:30 PM
ಅಕ್ಟೋಬರ್ 31 ಸೋಮವಾರ : ಗುಜರಾತ್ ಜೈಂಟ್ಸ್ vs ಪಾಟ್ನಾ ಪೈರೇಟ್ಸ್ 7:30 PM
ಅಕ್ಟೋಬರ್ 31 ಸೋಮವಾರ : ಯುಪಿ ಯೋದ್ದಾಸ್ vs ತೆಲುಗು ಟೈಟಾ ns 8:30 PM
ನವೆಂಬರ್ 1 ಮಂಗಳವಾರ : ಪುಣೇರಿ ಪಲ್ಟನ್ ವಿರುದ್ಧ ದಬಾಂಗ್ ದೆಹಲಿ 7:30 PM
ನವೆಂಬರ್ 1 ಮಂಗಳವಾರ : ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್ 8:30 PM
ನವೆಂಬರ್ 2 ಬುಧವಾರ : ಯು ಮುಂಬಾ vs ತೆಲುಗು ಟೈಟಾನ್ಸ್ 7:30 PM
ನವೆಂಬರ್ 2 ಬುಧವಾರ : ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್ 8 :30 PM
ನವೆಂಬರ್ 4 ಶುಕ್ರವಾರ : ಪಾಟ್ನಾ ಪೈರೇಟ್ಸ್ ವಿರುದ್ಧ ಯು ಮುಂಬಾ 7:30 PM
ನವೆಂಬರ್ 4 ಶುಕ್ರವಾರ : ದಬಾಂಗ್ ಡೆಲ್ಲಿ vs ಜೈಪುರ ಪಿಂಕ್ ಪ್ಯಾಂಥರ್ಸ್ 8:30 PM
ನವೆಂಬರ್ 4 ಶುಕ್ರವಾರ : ಯುಪಿ ಯೋದ್ದಾಸ್ vs ಪುಣೇರಿ ಪಲ್ಟನ್ 9:30 PM
ನವೆಂಬರ್ 5 ಶನಿವಾರ : ಗುಜರಾತ್ ಜೈಂಟ್ಸ್ vs ಬೆಂಗಾಲ್ ವಾರಿಯರ್ಸ್ 7: 30 PM
ನವೆಂಬರ್ 5 ಶನಿವಾರ : ತಮಿಳು ತಲೈವಾಸ್ vs ತೆಲುಗು ಟೈಟಾನ್ಸ್ 8:30 PM
ನವೆಂಬರ್ 5 ಶನಿವಾರ : ಹರಿಯಾಣ ಸ್ಟೀಲರ್ಸ್ vs ಯುಪಿ ಯೋದ್ದಾಸ್ 9:30 PM
ನವೆಂಬರ್ 6 ಭಾನುವಾರ : ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ 7:30 PM
ನವೆಂಬರ್ 6 ಭಾನುವಾರ : ಪುಣೇರಿ ಪಲ್ಟನ್ vs ತಮಿಳು ತಲೈವಾಸ್ 8:30 PM
ನವೆಂಬರ್ 7 ಸೋಮವಾರ : ಯು ಮುಂಬಾ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 7:30 PM
ನವೆಂಬರ್ 7 ಸೋಮವಾರ : ಪಾಟ್ನಾ ಪೈರೇಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 8:30 PM
ನವೆಂಬರ್ 8 ಮಂಗಳವಾರ : ಬೆಂಗಾಲ್ ವಾರಿಯರ್ಸ್ vs ಯುಪಿ ಯೋದ್ದಾಸ್ 7:30 PM
ನವೆಂಬರ್ 8 ಮಂಗಳವಾರ : TBC vs TBC 8:30 PM

Story first published: Thursday, October 6, 2022, 16:38 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X