ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ಮಣಿಸದಿದ್ದರೆ ಬೆಂಗಳೂರು ಬುಲ್ಸ್ ಗತಿ?!

Pro Kabaddi: Tamil Thalaivas look forward to a good show in home leg

ಚೆನ್ನೈ, ಆಗಸ್ಟ್ 17: ಪ್ರೊ ಕಬಡ್ಡಿ ಲೀಗ್ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಈ ಬಾರಿಯ ಆವೃತ್ತಿಯ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಶನಿವಾರ (ಆಗಸ್ಟ್ 17) ಆತಿಥೇಯ ತಮಿಳ್ ತಲೈವಾಸ್ ಎದುರು ಬುಲ್ಸ್ ಮೇಲುಗೈ ಸಾಧಿಸಿದ್ದರೆ ಪ್ರಶಸ್ತಿ ಸುತ್ತಿನ ಹಾದಿ ಕಠಿಣವಾಗಲಿದೆ.

ಪ್ರೊ ಕಬಡ್ಡಿ 2019: ಪಟನಾ ಪೈರೇಟ್ಸ್‌ ಪಡೆಯನ್ನು ಕಟ್ಟಿಹಾಕಿದ ಯು ಮುಂಬಾಪ್ರೊ ಕಬಡ್ಡಿ 2019: ಪಟನಾ ಪೈರೇಟ್ಸ್‌ ಪಡೆಯನ್ನು ಕಟ್ಟಿಹಾಕಿದ ಯು ಮುಂಬಾ

ಚೆನ್ನೈಯ ಜವಾಹರಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ಬೆಂಗಳೂರು ಬುಲ್ಸ್ ಗೆಲ್ಲಲೇಬೇಕು. ಈ ಪಂದ್ಯವೂ ಸೋತರೆ, ಸದ್ಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ತಂಡಗಳನ್ನು ಕೆಳಗಿಳಿಸೋದು ಬುಲ್ಸ್‌ಗೆ ಸವಾಲೆನಿಸಲಿದೆ. ಬೆಂಗಳೂರು ಬುಲ್ಸ್ ಈಗ ಪಾಯಿಂಟ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ 2019: ಯುಪಿ ಯೋಧರೆದು ಮುಗ್ಗರಿಸಿದ ಬೆಂಗಳೂರು ಬುಲ್ಸ್‌ಪ್ರೊ ಕಬಡ್ಡಿ 2019: ಯುಪಿ ಯೋಧರೆದು ಮುಗ್ಗರಿಸಿದ ಬೆಂಗಳೂರು ಬುಲ್ಸ್‌

ಕಳೆದ ಸೀಸನ್‌ನಲ್ಲಿ ಎ ಝೋನ್‌ ಅಂಕಪಟ್ಟಿಯಲ್ಲಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 5ನೇ ಸ್ಥಾನದೊಂದಿಗೆ ಆಟ ಮುಗಿಸಿತ್ತು. ಈ ಬಾರಿ ಅಭಿಷೇಕ್ ಬಚ್ಚನ್ ಮಾಲಕತ್ವದ ಜೈಪುರ್ ಅದ್ಭುತ ಪ್ರದರ್ಶನದೊಂದಿಗೆ ಈಗಾಗಲೇ ಅಗ್ರ ಸ್ಥಾನಕ್ಕೇರಿದೆ. ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಬೆಂಗಳೂರು ಬುಲ್ಸ್ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 4 ಗೆಲುವು, 3 ಸೋಲುಗಳೊಂದಿಗೆ ಒಟ್ಟು 22 ಅಂಕಗಳನ್ನು ಕಲೆ ಹಾಕಿದೆ. ಸದ್ಯ ನಂ.1 ಸ್ಥಾನದಲ್ಲಿರುವ ಜೈಪರ್ 7ರಲ್ಲಿ 6 ಗೆಲುವುಗಳೊಂದಿಗೆ 30 ಪಾಯಿಂಟ್ ಗಳಿಸಿದೆ. ದ್ವಿತೀಯ ಸ್ಥಾನಿ ದಬಾಂಗ್ ಡೆಲ್ಲಿ 26 ಅಂಕ ಕಲೆ ಹಾಕಿದೆ.

ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌

ಬೆಂಗಳೂರು ಬುಲ್ಸ್‌ಗೆ ಇನ್ನೂ ಸುಮಾರು 15 ಲೀಗ್‌ ಪಂದ್ಯಗಳಿವೆ. ಇವುಗಳಲ್ಲಿ ಬೆಂಗಳೂರು ಗೆಲುವು ಸಾಧಿಸುತ್ತಾ ಸಾಗಿದರೆ ಪ್ರಶಸ್ತಿ ಸುತ್ತಿಗೇರಲು ಅವಕಾಶವಿದೆ. ಹಾಗಂತ ಈಗಾಗಲೇ ಅಂಕಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಹುಮ್ಮಸ್ಸಿನಲ್ಲಿರುವ ತಂಡಗಳೂ ಸಲುಭವಾಗಿ ಕೆಳಗಿಳಿಯಲಾರವು, ಅವಕಾಶ ಕೈ ಚೆಲ್ಲಲಾರವು. ಒಟ್ಟಿನಲ್ಲಿ ಬೆಂಗಳೂರು ಬುಲ್ಸ್ 'ಫುಲ್ ಚಾರ್ಚ್‌'ನೊಂದಿಗೆ ಪುಟಿದೇಳಬೇಕಷ್ಟೇ.

Story first published: Saturday, August 17, 2019, 12:21 [IST]
Other articles published on Aug 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X