ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ ವೀಕ್ಷಣೆಗೆ 10,000 ಅಭಿಮಾನಿಗಳಿಗೆ ಅನುಮತಿ

10,000 fans allowed at Tokyo Olympics events, says Organisers

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ಗೆ ಸುಮಾರು 10 ಸಾವಿರ ಅಭಿಮಾನಿಗಳಿಗೆ ಕ್ರೀಡಾಕೂಟ ವೀಕ್ಷಿಸಲು ಅನುಮತಿ ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ. ಆದರೆ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಕ್ರೀಡಾಕೂಟವನ್ನು ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಸಲಾಗುತ್ತದೆ ಎಂದು ಆಯೋಕರು ಸೋಮವಾರ (ಜೂನ್ 21) ಹೇಳಿದ್ದಾರೆ.

WTC Final: ಇಂಗ್ಲೆಂಡ್‌ನಲ್ಲಿ ಕಪಿಲ್‌ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್WTC Final: ಇಂಗ್ಲೆಂಡ್‌ನಲ್ಲಿ ಕಪಿಲ್‌ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್

ಒಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಲು ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ. ಒಲಿಂಪಿಕ್ಸ್ ಆರಂಭಕ್ಕೆ ದಿನ ಹತ್ತಿರವಾಗುವಾಗ ಈ ನಿರ್ಧಾರ ಪ್ರಕಟವಾಗಿದೆ. ಆದರೆ ಹೊರ ದೇಶಗಳ ಅಭಿಮಾನಿಗಳಿಗೆ ವೀಕ್ಷಣೆಗೆ ನಿಷೇಧ ಹೇರಲಾಗಿದೆ ಎಂದು ತಿಳಿದು ಬಂದಿದೆ.

'ಸಾವರ್ಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಬಂಧ ಸಡಿಲಿಸಿರುವುದರಿಂದ ಟೋಕಿಯೋ ಒಲಿಂಪಿಕ್ಸ್‌ಗೆ ಸ್ಟೇಡಿಯಂನ ಒಟ್ಟು ಸಾಮರ್ಥ್ಯದ 50 ಶೇ. ಅಂದರೆ ಗರಿಷ್ಠ 10 ಸಾವಿರದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ,' ಎಂದು ಆಯೋಜಕರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

WTC Final: ವೀರೇಂದ್ರ ಸೆಹ್ವಾಗ್ 'ಮೂಡ್ ಸ್ವಿಂಗ್' ಆಗಲು ಕಾರಣ?WTC Final: ವೀರೇಂದ್ರ ಸೆಹ್ವಾಗ್ 'ಮೂಡ್ ಸ್ವಿಂಗ್' ಆಗಲು ಕಾರಣ?

ಪ್ಯಾರಾಲಂಪಿಕ್ಸ್‌ಗೆ ವೀಕ್ಷಕರಿಗೆ ಅನುಮತಿ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಜುಲೈ 16ರ ಬಳಿಕ ನಿರ್ಧರಿಸಲಾಗುತ್ತದೆ ಎಂದು ಎಂದು ಆಯೋಜಕರು ಹೇಳಿದ್ದಾರೆ. ಅಂದರೆ ಒಲಿಂಪಿಕ್ಸ್‌ಗೆ ಒಂದು ವಾರ ಮುಂಚೆ ಪ್ಯಾರಾಲಂಪಿಕ್ಸ್‌ಗೆ ಅಭಿಮಾನಿಗಳಿಗೆ ಅವಕಾಶ ನೀಡುವ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ.

Story first published: Tuesday, June 22, 2021, 9:36 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X