ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಿಸಿಎಸ್ 10ಕೆ ನೋಂದಣಿಗೆ ಚಾಲನೆ, ಮೇ 21ಕ್ಕೆ ಓಟ

ಟಾಟಾ ಕನ್ಸ್ ಲ್ಟೆನ್ಸಿ ಸರ್ವಿಸ್ ನ ವಿಶ್ವ 10ಕೆ 2017ರ ನಗರದಲ್ಲಿನ ಸಂಭ್ರಮದ ಹತ್ತನೇ ಆವೃತ್ತಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ

By Mahesh

ಬೆಂಗಳೂರು, ಮಾರ್ಚ್ 24: ಟಾಟಾ ಕನ್ಸ್ ಲ್ಟೆನ್ಸಿ ಸರ್ವಿಸ್ ನ ವಿಶ್ವ 10ಕೆ 2017ರ ನಗರದಲ್ಲಿನ ಸಂಭ್ರಮದ ಹತ್ತನೇ ಆವೃತ್ತಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರೋಕ್ಯಾಮ್ ಇಂಟರ್ ನ್ಯಾಷನಲ್ ಘೋಷಿಸಿದೆ.

2017ರ ಮೇ ಮೂರನೇ ಟಿಸಿಎಸ್ 10ಕೆ 21ರಂದು ಈ ಮ್ಯಾರಥಾನ್ ನಿಗದಿಯಾಗಿದ್ದು, ಈ ಬಾರಿ ಪ್ರತಿಷ್ಠಿತ ಟಿಸಿಎಸ್ ನ ಏಳು ಬ್ಯಾನರ್‌ಗಳ ಅಡಿಯಲ್ಲಿ ಓಟ ಜರುಗಲಿದೆ. ಜತೆಗೆ ಈ ಬಾರಿ ಪ್ರಶಸ್ತಿ ಮೊತ್ತದ 2ಲಕ್ಷ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.

ನಗರದ ಹೃದಯ ಭಾಗದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ 10ಕೆಗೆ ಹಸಿರು ನಿಶಾನೆ ತೋರಲಿದ್ದು, ಪ್ರಶಸ್ತಿ ಮೊತ್ತ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಓಟ ಪ್ರಮುಖ ಟ್ರ್ಯಾಕ್ ಮತ್ತು ಫೀಲ್ಡ್ ಓಟಗಾರರನ್ನು ಆಕರ್ಷಿಸಲು ಎದುರು ನೋಡುತ್ತಿದೆ.

2017ರ ಮಾರ್ಚ್ 23ರಂದು ವಿಶ್ವ 10ಕೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಏಪ್ರಿಲ್ 13ವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಥವಾ ಓಪನ್ 10ಕೆ ಸ್ಲಾಟ್‌ಗಳ ಲಭ್ಯತೆ ಇರುವವರೆಗೂ ನೋಂದಣಿ ಮುಂದುವರಿಯಲಿದೆ. ಇದೇ ವೇಳೆ 2017ರ ಏಪ್ರಿಲ್ 28ಕ್ಕೆ ಇತರ ಮೂರು ವಿಭಾಗಗಳ ನೋಂದಣಿ ಪ್ರಕ್ರಿಯೆ ಅಂತ್ಯವಾಗಲಿದೆ.

TCS 10 K


ಪುನೀತ್ ಬೆಂಬಲ: ವಿಶ್ವ 10ಕೆಗೆ ಬೆಂಬಲ ಮುಂದುವರಿಸಿರುವ ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಬೆಂಗಳೂರು ರನ್‌ಗೆ ಆತ್ಮೀಯ ಆಹ್ವಾನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಅತಿ ವೇಗದ ಫಿಟ್ನೇಸ್ ಚಳವಳಿಯಾಗಿರುವ ಓಟದಲ್ಲಿ ಪಾಲ್ಗೊಳ್ಳಲು ಸಜ್ಜಾಗಿ, ಮತ್ತೊಂದು ಓಟದ ಸಂಮಕ್ಕೆ ನಗರ ಸಿದ್ದಗೊಂಡಿದೆ ಎಂದಿದ್ದಾರೆ.

ಅಲ್ಲದೆ ಟಿಸಿಎಸ್ ವಿಶ್ವ 10ಕೆಗೆ ನಗರ ಅತ್ಯುತ್ತ ಮ ತಾಣವಾಗಿದೆ. ಓಟವನ್ನು ಆಸ್ವಾದಿಸಲು ನಮ್ಮೆಲ್ಲರಿಗೂ ಇದೊಂದು ಉತ್ತಮ ಅವಕಾಶ. ಇದು ಯಾವುದೇ ದೂರದ ಓಟವಲ್ಲ. ಮೊದಲನೇ ಅಥವಾ 10ನೇ ನಿಮ್ಮ ಓಟವನ್ನು ಸ್ಮರಣೀಯವಾಗಿಸಿಕೊಳ್ಳಲು ಈ ಓಟವನ್ನು ಸವಾಲಾಗಿ ಸ್ವೀಕರಿಸಿ ಎಂದಿದ್ದಾರೆ.

ಈ ವರ್ಷ ಮತ್ತೆ ನಗರದ ಓಟವನ್ನು ಪ್ರೋತ್ಸಾಹಿಸಲು ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ವೈಯಕ್ತಿಕ ಓಟದ ಕಥೆಗಳು, ದತ್ತಿ ಸಂಸ್ಥೆಗೆ ಕೊಡುಗೆ ನೀಡಲು ಬಯಸುವವರು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಪುನೀತ್ ಕರೆ ನೀಡಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X