ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Flashback 2019; ಕ್ರೀಡಾ ಕ್ಷೇತ್ರದಲ್ಲಿನ ಟಾಪ್ 10 ಟ್ರೆಂಡಿಂಗ್ ಸುದ್ದಿಗಳು

2019 Top Ten Trending Sports News

2019 ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಯಿತು. ಕೆಲ ಕ್ರೀಡಾಪಟುಗಳಿಗೆ 2019 ಮರೆಯಲಾಗದ ವರ್ಷ ಅಂತಾ ಹೇಳಿದ್ರೆ ತಪ್ಪಾಗಲಾರ್ದು. ಭಾರತೀಯ ಕ್ರೀಡಾಪಟುಗಳು 2019 ರಲ್ಲಿ ಕಹಿ - ಸಿಹಿ ಎರಡನ್ನು ಸವಿದಿದ್ದಾರೆ. 2019 ರಲ್ಲಿ ಸಾಕಷ್ಟು ರಾಷ್ಟ್ರೀಯ ಹಾಗೂ ಅಂತಾರಾಷ್ಟೀಯ ಕ್ರೀಡಾ ಕೂಟಗಳು ಆಯೋಜನೆಗೊಂಡವು.

Flashback 2019: WWE ರೆಸ್ಲಿಂಗ್ ಸೂಪರ್ ದಾಖಲೆಗಳುFlashback 2019: WWE ರೆಸ್ಲಿಂಗ್ ಸೂಪರ್ ದಾಖಲೆಗಳು

2019 ವರ್ಷದ ಆರಂಭದಿಂದ ಕ್ರೀಡಾ ಕ್ಷೇತ್ರದಲ್ಲಿ ಆದ ಪ್ರಮುಖ ಘಟನಾವಳಿಗಳ ಚಿತ್ರಣವನ್ನು ನೀಡಿದ್ದೇವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡಿದ ಕ್ರೀಡಾ ವಿಚಾರಗಳನ್ನು ಹೆಕ್ಕಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ವಿಶ್ವಕಪ್ , ಪ್ರೊ ಕಬಡ್ಡಿ, ಐಪಿಎಲ್ ಹೀಗೆ ಇನ್ನಿತರೆ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ 2019 ರಲ್ಲಿ ಯಾವಾವ ಹ್ಯಾಶ್ ಟ್ಯಾಗ್ ಗಳು ಟ್ರೆಂಡ್ ನಲ್ಲಿತ್ತು ಎಂಬುದರ ಟಾಪ್ ಟೆನ್ ಪಟ್ಟಿ ಇಲ್ಲಿದೆ.

ಕ್ರಿಕೆಟ್ ವಿಶ್ವಕಪ್

ಕ್ರಿಕೆಟ್ ವಿಶ್ವಕಪ್

2019ರ 50 ಓವರ್ ಕ್ರಿಕೆಟ್ ವಿಶ್ವಕಪ್ ಅನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿದ್ದವು. ಪ್ರಶಸ್ತಿಗಾಗಿ ಒಟ್ಟು 10 ತಂಡ ಕಾಳಗ ನಡೆಸಿದ್ದವು. ಟೂರ್ನಿಯುದ್ದಕ್ಕೂ ಅಜೇಯ ಓಟ ಮುಂದುವರೆಸಿದ್ದ ಟೀಂ ಇಂಡಿಯಾ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನನುಭವಿಸಿ ಟೂರ್ನಿಯಿಂದ ಹೊರಬಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಸೆಣಸಾಡಿದವು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 241 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೂಡ 241 ರನ್ ಗಳಿಸಿತು. ವಿಚಿತ್ರ ಅಂದರೆ ಸೂಪರ್ ಓವರ್ ನಲ್ಲೂ ಸ್ಕೋರ್ ಸಮಗೊಂಡಿತು. ಆದರೆ ಪಂದ್ಯದಲ್ಲಿ ಅತೀ ಹೆಚ್ಚು ಬೌಂಡರಿ ಸಿಡಿಸಿದ್ದ ಇಂಗ್ಲೆಂಡ್ ಗೆ ವಿಶ್ವಕಪ್ ಒಲಿಯಿತು. ಇದು ವ್ಯಾಪಕ ಚರ್ಚೆಗೂ ಒಳಗಾಯಿತು.

 ಪ್ರೊ ಕಬಡ್ಡಿ ಲೀಗ್

ಪ್ರೊ ಕಬಡ್ಡಿ ಲೀಗ್

ಪ್ರೊ ಕಬಡ್ಡಿ ಲೀಗ್ 2019ರ ಸೀಸನ್ ನ ಚಾಂಪಿಯನ್ ಆಗಿ ಬೆಂಗಾಲ್ ವಾರಿಯರ್ಸ್ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿಯನ್ನು 39-34ರ ಅಂತರದಿಂದ ಸೋಲಿಸಿದ ಬೆಂಗಾಲ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿತು. ಬೆಂಗಳೂರು ಬುಲ್ಸ್ ನ ಪವನ್ ಸೆಹ್ರಾವತ್ 346 ರೈಡ್ ಪಾಯಿಂಟ್ ಗಳೊಂದಿಗೆ ಟೂರ್ನಿಯ ಟಾಪ್ ರೈಡರ್ ಆದರು. ಯು ಮುಂಬಾ ನಾಯಕ ಫಜಲ್ ಅತ್ರಾಚಲಿ 82 ಟ್ಯಾಕಲ್ ಪಾಯಿಂಟ್ಸ್ ನೊಂದಿಗೆ ಟೂರ್ನಿಯ ಟಾಪ್ ಡಿಫೆಂಡರ್ ಆದರು.

2019ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ವಿಷಯಗಳು

 ಇಂಡಿಯನ್ ಪ್ರೀಮಿಯರ್ ಲೀಗ್

ಇಂಡಿಯನ್ ಪ್ರೀಮಿಯರ್ ಲೀಗ್

ಈ ಬಾರಿಯ ಐಪಿಎಲ್ ಬಹಳ ಜಿದ್ದಾಜಿದ್ದಿನಿಂದ ಕೂಡಿತ್ತು. ಒಂದು ಎರಡು ತಂಡ ಬಿಟ್ಟರೆ ಪ್ರತಿಯೊಂದು ತಂಡ ಪ್ಲೇ ಆಫ್ ರೇಸ್ ನಲ್ಲಿತ್ತು. ಫೈನಲ್ ನಲ್ಲಿ ರೋಹಿತ್ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್ ಹಾಗೂ ಧೋನಿ ನಾಯಕತ್ವದ ಸಿ ಎಸ್ ಕೆ ನಡುವೆ ನಡೆಯಿತು. ಎಂಐ vs ಸಿಎಸ್ ‌ಕೆ ಕಾದಾಟವನ್ನು ಐಪಿಎಲ್ ನಲ್ಲಿನ 'ಎಲ್ ಕ್ಲಾಸಿಕೋ' ಎಂದೇ ಬಿಂಬಿಸಲಾಗಿತ್ತು. ಈ ಹಿಂದೆ ಉಭಯ ತಂಡಗಳು ತಲಾ ಮೂರು ಬಾರಿ ಕಪ್ ಎತ್ತಿ ಹಿಡಿದಿತ್ತು. ರೋಚಕ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನತ್ತಿದ ಚೆನ್ನೈ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಕೇವಲ ಒಂದು ರನ್ ನಿಂದ ಮುಂಬೈಗೆ ಶರಣಾಯಿತು. ಈ ಮೂಲಕ ರೋಹಿತ್ ಶರ್ಮ ನೇತೃತ್ವ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು.

 ವಿಂಬಲ್ಡನ್ ಗ್ರಾನ್ ಸ್ಲ್ಯಾಮ್ ಪ್ರಶಸ್ತಿ

ವಿಂಬಲ್ಡನ್ ಗ್ರಾನ್ ಸ್ಲ್ಯಾಮ್ ಪ್ರಶಸ್ತಿ

ಪ್ರತಿಷ್ಠಿತ ವಿಂಬಲ್ಡನ್, ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಗ್ರ್ಯಾನ್ ಸ್ಲ್ಯಾಮ್. ಈ ಬಾರಿಯ ವಿಂಬಲ್ಡನ್ ನಲ್ಲಿ ಹಾಲಿ ಚಾಂಪಿಯನ್ ನೋವಾಕ್ ಜೊಕೊವಿಚ್ ಸ್ವಿಸ್ ಟೆನಿಸ್ ದೈತ್ಯ ರೋಜರ್ ಫೆಡರರ್ ಎದುರು ಜಯಗಳಿಸಿದರು. ಜೊಕೊವಿಚ್ ತಮ್ಮ ವೃತ್ತಿ ಜೀವನದ 16ನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು. ಟ್ರೈ ಬ್ರೇಕರ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಸಫಲರಾಧರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರೊಮಾನಿಯಾದ ಟೆನಿಸ್ ತಾರೆ ಸಿಮೊನಾ ಹಾಲೆಪ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಫೈನಲ್ಸ್ ನಲ್ಲಿ 7 ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-2 ಸೆಟ್ ಗಳಿಂದ ಮಣಿಸಿದರು.

 ಕೋಪಾ ಅಮೆರಿಕಾ

ಕೋಪಾ ಅಮೆರಿಕಾ

ಆತಿಥೇಯ ಬ್ರೆಜಿಲ್ ಫುಟ್ ಬಾಲ್ ತಂಡ ಈ ಬಾರಿಯ ಪ್ರತಿಷ್ಠಿತ ಕೋಪಾ ಅಮೆರಿಕಾ ಪ್ರಶಸ್ತಿ ಜಯಿಸಿತು. ಫೈನಲ್ ನಲ್ಲಿ ಪೆರು ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿತು. 2007ರ ಬಳಿಕ ಮೊದಲ ಬಾರಿ ಪ್ರಶಸ್ತಿ ಜಯಿಸಿತು. ಒಟ್ಟಾರೆ 9ನೇ ಬಾರಿ ಪ್ರಶಸ್ತಿ ಗಳಿಸಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್​ನಲ್ಲಿ ಬ್ರೆಜಿಲ್ ಸಾಂಪ್ರದಾಯಿಕ ಎದುರಾಳಿ ಅರ್ಜೆಂಟೀನಾ ವಿರುದ್ಧ 2-0ಯಿಂದ ಗೆಲುವು ದಾಖಲಿಸಿತು. ತಂಡದ ಸೋಲಿನ ಬಳಿಕ ಅರ್ಜೆಂಟೀನಾ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ವಿದಾಯ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ವಿದಾಯ ಹೇಳುವ ಯಾವುದೇ ಮುನ್ಸೂಚನೆಯನ್ನೂ ಮೆಸ್ಸಿ ಇಲ್ಲಿಯವರೆಗೆ ನೀಡಿಲ್ಲ.

 ಆಸ್ಟ್ರೇಲಿಯಾ ಓಪನ್

ಆಸ್ಟ್ರೇಲಿಯಾ ಓಪನ್

ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಸ್ಪೇನಿನ ರಫೆಲ್ ನಡಾಲ್ ಅವರನ್ನು ಸೋಲಿಸಿ, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿ ಹಿಡಿದರು. ಒಟ್ಟು ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜಪಾನಿನ ನವೋಮಿ ಓಸಾಕಾ ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಮಣಿಸಿದರು.

 ಫ್ರೆಂಚ್ ಓಪನ್

ಫ್ರೆಂಚ್ ಓಪನ್

ಸ್ಪೇನ್ ನ ಟೆನಿಸ್ ಮಾಂತ್ರಿಕ ರಾಫೇಲ್ ನಡಾಲ್ ಈ ಬಾರಿಯ ಫ್ರೆಂಚ್ ಓಪನ್ ಜಯಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಹಿಂದೆ, ಅಂದರೆ 2017, 2018ರಲ್ಲಿ ಸತತವಾಗಿ ಎರಡು ವರ್ಷ ಜಯಿಸಿದ್ದರು. 2019ರಲ್ಲೂ ಜಯಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಒಟ್ಟಾರೆ 12ನೇ ಬಾರಿ ಫ್ರೆಂಚ್ ಓಪನ್ ನ ಚಾಂಪಿಯನ್ ಆದರು. ಒಂದು ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯನ್ನು 12 ಬಾರಿ ಗೆದ್ದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ನಡಾಲ್ ಬರೆದರು. ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಅಶ್ಲೀಗ್ ಬಾರ್ಟಿ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದರು. ಫೈನಲ್‌ನಲ್ಲಿ ಮಾರ್ಕಟಾ ವೊಂಡ್ರೌಸೊವಾ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ 2019ರ ಫ್ರೆಂಚ್ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

 ಯು ಎಸ್ ಓಪನ್

ಯು ಎಸ್ ಓಪನ್

ಸ್ಪೇನ್ ನ ರಾಫೆಲ್ ನಡಾಲ್ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು. ರಾಫೆಲ್ ನಡಾಲ್ ಅವರ 3ನೇ ಯು ಎಸ್ ಓಪನ್ ನ ಪ್ರಶಸ್ತಿ ಇದು. ಮಹಿಳಾ ಸಿಂಗಲ್ಸ್ ನಲ್ಲಿ ಕೆನಡಾದ ಯುವ ಆಟಗಾರ್ತಿ ಬಿಯಾಂಕಾ, ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದರು. ಸೆರೆನಾ ವಿಲಿಯಮ್ಸ್ ಬಿಯಾಂಕಾ ಅವರ ಬಾಲ್ಯದ ನೆಚ್ಚಿನ ಆಟಗಾರ್ತಿ. ವಿಶೇಷ ಅಂದರೆ ಬಿಯಾಂಕಾ ಹುಟ್ಟುವ ಮೊದಲೇ 1999ರಲ್ಲಿ ಸೆರೆನಾ ಯು.ಎಸ್.ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು.

 ಆಶಸ್ ಸರಣಿ

ಆಶಸ್ ಸರಣಿ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆಶಸ್ ಸರಣಿಗೆ ಬರೋಬ್ಬರಿ 137 ವರ್ಷಗಳ ಸುದೀರ್ಘ ಇತಿಹಾಸವಿದೆ. ಪ್ರತಿ ಆಶಸ್ ಸರಣಿಯಲ್ಲೂ ಒಂದೊಂದು ದಾಖಲೆ ನಿರ್ಮಾಣವಾಗುತ್ತದೆ. ಇನ್ನು ಸರಣಿಯ ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಬಾರಿಗೆ ಕನ್ಕ್ಯುಶನ್ ಸಬ್ಸ್ ಟಿಟ್ಯೂಟ್ (ಬದಲಿ ಆಟಗಾರ) ಬಳಸಲಾಯಿತು. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಐದನೇ ಪಂದ್ಯವನ್ನು ಇಂಗ್ಲೆಂಡ್ 135 ರನ್ ಗಳ ಅಂತರದಿಂದ ಗೆದ್ದುಕೊಂಡಿತು. ಹೀಗಾಗಿ 5 ಪಂದ್ಯಗಳ ಸರಣಿ 2-2 ಡ್ರಾ ಆಯಿತು. ಆದರೆ ಕಳೆದ ವರ್ಷ ಆಸ್ಟ್ರೇಲಿಯಾ ಗೆದ್ದಿದ್ದರಿಂದ ಆಶಸ್ ಆಸೀಸ್ ಪಾಲಾಯಿತು. ಇದರೊಂದಿಗೆ ಉಭಯ ತಂಡಗಳು 47 ವರ್ಷಗಳ ಬಳಿಕ ಡ್ರಾ ಮಾಡಿಕೊಂಡ ದಾಖಲೆ ಮಾಡಿತು.

 ಇಂಡಿಯನ್ ಸೂಪರ್ ಲೀಗ್

ಇಂಡಿಯನ್ ಸೂಪರ್ ಲೀಗ್

ಮಾರ್ಚ್ ನಡೆದ ಫೈನಲ್ ನಲ್ಲಿ ಬೆಂಗಳೂರು ಎಫ್ ಸಿ, ಗೋವಾ ಎಫ್ ಸಿ ವಿರುದ್ಧ ರೋಚಕ ಜಯ ಸಾಧಿಸಿತು. ಮುಂಬೈ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 1-0 ಅಂತರದಲ್ಲಿ ಚೆಟ್ರಿ ಬಳಗ ಚೊಚ್ಚಲ ಬಾರಿಗೆ ಐಎಸ್ಎಲ್ ಚಾಂಪಿಯನ್ ಆಯಿತು. ಕಳೆದ ವರ್ಷವಷ್ಟೆ ಐ ಎಸ್ ಎಲ್ ಗೆ ಪಾದಾರ್ಪಣೆ ಮಾಡಿದ್ದ ಬಿಎಫ್ ಸಿ ಚೊಚ್ಚಲ ಟೂರ್ನಿಯಲ್ಲೇ ರನ್ನರ್ ಅಪ್ ಆಗಿತ್ತು.

Story first published: Wednesday, December 25, 2019, 11:09 [IST]
Other articles published on Dec 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X