ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ 3ನೇ ಆವೃತ್ತಿ: ಮಂಗಳೂರಿನಲ್ಲಿ ಇಂದಿನಿಂದ ಭಾರತದ ಅಗ್ರ ಸರ್ಫರ್‌ಗಳ ಸ್ಪರ್ಧೆ

Surfing 3rd edition

ಮೂರನೇ ಆವೃತ್ತಿಯ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ಕರ್ನಾಟಕದ ಬಂದರು ನಗರವಾದ ಮಂಗಳೂರು ಸಜ್ಜಾಗಿದ್ದು, ಇಂದಿನಿಂದ (ಮೇ, 27 ಶುಕ್ರವಾರ) ಮೂರು ದಿನಗಳ ಕಾಲ ತೀವ್ರ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

ಭಾರತದ ಅಗ್ರ ಸರ್ಫರ್‌ಗಳು ಶುಕ್ರವಾರದಿಂದ ನಡೆಯಲಿರುವ ಸರ್ಫಿಂಗ್ ಸ್ಪರ್ಧೆಯಲ್ಲಿ ಪೈಪೋಟಿಗೆ ಇಳಿಯಲಿದ್ದು, ಮೂರು ದಿನಗಳ ಮಂಗಳೂರು ತೀವ್ರ ಆಕ್ಷನ್‌ಗೆ ಸಾಕ್ಷಿಯಾಗಲು ಸಿದ್ಧವಾಗಿದೆ.

ಪಣಂಬೂರ್ ಬೀಚ್‌ನಲ್ಲಿ ನಡೆಯಲಿದೆ ಸರ್ಫಿಂಗ್ ಸ್ಪರ್ಧೆ

ಪಣಂಬೂರ್ ಬೀಚ್‌ನಲ್ಲಿ ನಡೆಯಲಿದೆ ಸರ್ಫಿಂಗ್ ಸ್ಪರ್ಧೆ

2022 ರ ಮೇ 27 ರಿಂದ 29 ರವರೆಗೆ ಪಣಂಬೂರು ಬೀಚ್‌ನಲ್ಲಿ ನಡೆಯಲಿರುವ ಮೂರು ದಿನಗಳ ಪ್ರೀಮಿಯರ್ ಸರ್ಫಿಂಗ್ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದೆ. ಸರ್ಫಿಂಗ್ ಮತ್ತು ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್ ಪುರುಷರು, ಮಹಿಳೆಯರು ಮತ್ತು ಗ್ರೋಮ್ಸ್ (U16) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ 3ನೇ ಆವೃತ್ತಿಯನ್ನು ಮಂತ್ರ ಸರ್ಫ್ ಕ್ಲಬ್ ಆಯೋಜಿಸುತ್ತಿದ್ದು, ಭಾರತದಲ್ಲಿ ಸರ್ಫಿಂಗ್ ಮತ್ತು ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಕ್ರೀಡೆಯ ಆಡಳಿತ ಮಂಡಳಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (SFI) ಅಡಿಯಲ್ಲಿ ನಡೆಯಲಿದೆ.

ನಮ್ಮೂರ ಪ್ರತಿಭೆ: ಭಾರತದ ಭವಿಷ್ಯದ ಬ್ಯಾಡ್ಮಿಂಟನ್ ಸೂಪರ್‌ಸ್ಟಾರ್‌ ಅಶ್ವಿನಿ ಭಟ್‌

70 ಅಗ್ರ ಸರ್ಫರ್‌ಗಳು ಟೂರ್ನಿಯಲ್ಲಿ ಭಾಗಿ

70 ಅಗ್ರ ಸರ್ಫರ್‌ಗಳು ಟೂರ್ನಿಯಲ್ಲಿ ಭಾಗಿ

ಅಗ್ರ ರಾಷ್ಟ್ರೀಯ ಸರ್ಫರ್‌ಗಳನ್ನು ಒಳಗೊಂಡಿರುವ 70 ಕ್ಕೂ ಹೆಚ್ಚು ಸರ್ಫರ್‌ಗಳು, ಇಂಟರ್‌ನ್ಯಾಶನಲ್ ಸರ್ಫಿಂಗ್ ಅಸೋಸಿಯೇಷನ್‌ನಿಂದ ಗುರುತಿಸಲ್ಪಟ್ಟ ಸ್ಪರ್ಧೆಗೆ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ. ಕರ್ನಾಟಕ ಪ್ರವಾಸೋದ್ಯಮವು ಶೀರ್ಷಿಕೆ ಪಾಲುದಾರರಾಗಿ ಮತ್ತು ಚೆನ್ನೈ ಮೂಲದ ಟಿಟಿ ಗ್ರೂಪ್ ಸ್ಪರ್ಧೆಯ ಸಹಾಯಕ ಪಾಲುದಾರರಾಗಿದ್ದಾರೆ. ಆಕ್ಷನ್ ಕ್ಯಾಮೆರಾ ಮೇಜರ್‌ಗಳಾದ GoPro ಈವೆಂಟ್‌ಗೆ ಆಕ್ಷನ್ ಪಾಲುದಾರರಾಗಿದ್ದಾರೆ.

ನಮ್ಮೂರ ಪ್ರತಿಭೆ: ಅತ್ಯಂತ ಸಾಹಸ ಹಾಗೂ ಕಠಿಣ ಕ್ರೀಡೆಯಲ್ಲಿ ಕೊಡಗಿನ ಕೆಸಿ ಗಣಪತಿ ಸಾಧನೆ

ಪ್ರವಾಸೋದ್ಯಮವನ್ನ ಉತ್ತೇಜಿಸಲು ಇದು ಸಹಾಯಕಾರಿಯಾಗಲಿದೆ!

ಪ್ರವಾಸೋದ್ಯಮವನ್ನ ಉತ್ತೇಜಿಸಲು ಇದು ಸಹಾಯಕಾರಿಯಾಗಲಿದೆ!

ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸುತ್ತಿರುವರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ ಎಂದು ದಕ್ಷಿಣ ಕನ್ನಡ ಡಿಸಿ ಡಾ. ರಾಜೇಂದ್ರ ಕೆ.ವಿ ಹೇಳಿದ್ದಾರೆ.

''ಕರ್ನಾಟಕದ ಅನ್ವೇಷಿಸದ ಭಾಗಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಯೋಜಿಸಿರುವ ಕೆಲವು ಹಂತಗಳಲ್ಲಿ ಇದು ಒಂದಾಗಿದೆ. ಎಸ್‌ಎಫ್‌ಐ ಜೊತೆಗಿನ ಈ ಸಹಯೋಗ ದೇಶದಲ್ಲಿ ಸಾಹಸ ಜಲ ಕ್ರೀಡೆಗಳು ಮತ್ತು ಪ್ರವಾಸೋದ್ಯಮ ಎರಡನ್ನೂ ಉತ್ತೇಜಿಸುತ್ತವೆ'' ಎಂದು ರಾಜೇಂದ್ರ, ಐಎಎಸ್, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಮಂಗಳೂರು, ದಕ್ಷಿಣ ಕನ್ನಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೈಟಲ್ ಅನ್ನು ಉಳಿಸಿಕೊಳ್ಳುವ ಗುರಿ ನೆಟ್ಟಿರುವ ಡಿ. ಮಣಿಕಂದನ್

ಟೈಟಲ್ ಅನ್ನು ಉಳಿಸಿಕೊಳ್ಳುವ ಗುರಿ ನೆಟ್ಟಿರುವ ಡಿ. ಮಣಿಕಂದನ್

ತಮಿಳುನಾಡಿದ ಡಿ. ಮಣಿಕಂದನ್ ಈ ಬಾರಿಯು ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದು, ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಇನ್ನುಳಿಂದಂತೆ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕದಲ್ಲಿರುವ ತಮಿಳುನಾಡಿನ ಟಿ.ನಿತೇಶ್ವರ್ ಮತ್ತು ಬಾಬು ಶಿವರಾಜ್ ಅವರನ್ನು ಒಳಗೊಂಡಿರುವ ಕಠಿಣ ಸರ್ಫರ್‌ಗಳ ಕ್ಷೇತ್ರದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ. ಬಾಬು ಶಿವರಾಜ್ ಭಾರತದ ಅತ್ಯಂತ ಭರವಸೆಯ ಸರ್ಫರ್‌ ಪ್ರತಿಭೆಗಳಲ್ಲಿ ಒಬ್ಬರು.

ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ತಮಿಳುನಾಡಿನ ಸೃಷ್ಟಿ ಸೆಲ್ವಂ ಅವರು, ಗೋವಾದ ಯುವ ಸರ್ಫರ್‌ ಶುಗರ್ ಬನಾರ್ಸೆ, ಕರ್ನಾಟಕದ ಸಿಂಚನಾ ಗೌಡ ಮತ್ತು ಮಹಾರಾಷ್ಟ್ರದ ಗಾಯತ್ರಿ ಜುವೇಕರ್ ಅವರಿಂದ ತೀವ್ರ ಪೈಪೋಟಿ ಎದುರಿಸಲಿದ್ದಾರೆ.

Story first published: Friday, May 27, 2022, 11:17 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X