ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

44ನೇ ಚೆಸ್ ಒಲಿಂಪಿಯಾಡ್: 189 ತಂಡಗಳು ಮುಕ್ತ ವಿಭಾಗದಲ್ಲಿ, 154 ಮಹಿಳಾ ವಿಭಾಗದಲ್ಲಿ ನೋಂದಣಿ

44th Chess Olympiad 2022: 189 Teams Registered in the Open Division, 154 In the Womens Division

ಜುಲೈ 28ರಿಂದ ಆಗಸ್ಟ್ 10 ರವರೆಗೆ ಭಾರತದಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ 187 ದೇಶಗಳ ದಾಖಲೆ ಸಂಖ್ಯೆಯ 343 ತಂಡಗಳು ಭಾಗವಹಿಸಲಿವೆ.

ಭಾರತವು ಆಯೋಜಿಸಿರುವ ಅತಿದೊಡ್ಡ ಜಾಗತಿಕ ಚೆಸ್ ಒಲಿಂಪಿಯಾಡ್ ಕೂಟವು ಎರಡು ನಿರ್ದಿಷ್ಟ ವಿಭಾಗಗಳನ್ನು ಹೊಂದಿದೆ. ಮುಕ್ತ ವಿಭಾಗ ಮತ್ತು ಮಹಿಳಾ ವಿಭಾಗ. ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಕಾರ್ಯದರ್ಶಿ ಭರತ್ ಸಿಂಗ್ ಚೌಹಾಣ್ ಅವರು ಪ್ರಕಾರ, ಈವೆಂಟ್ ಮ್ಯಾನೆಜ್‌ಮೆಂಟ್ ದಾಖಲೆಯ 187 ದೇಶಗಳು ಮುಕ್ತ ವಿಭಾಗದಲ್ಲಿ 189 ತಂಡಗಳೊಂದಿಗೆ ಮತ್ತು 154 ಮಹಿಳಾ ವಿಭಾಗದಲ್ಲಿ ನೋಂದಾಯಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ 2018ರಲ್ಲಿ ಜಾರ್ಜಿಯಾದ ಬಟುಮಿಯಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ 179 ದೇಶಗಳ ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ಕ್ರಮವಾಗಿ 184 ಮತ್ತು 150 ತಂಡಗಳೊಂದಿಗೆ ದಾಖಲೆಯನ್ನು ನಿರ್ಮಿಸಿತ್ತು.

ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್, ಜಗತ್ತಿನಲ್ಲಿ ಸದ್ಯ ಅತಿ ಹೆಚ್ಚು ರೇಟಿಂಗ್ ಪಡೆದ ಆಟಗಾರ, ಅವರು ಮೆಗಾ ಚೆಸ್ ಒಲಿಂಪಿಯಾಡ್ ಈವೆಂಟ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ ನಂತರ ಸ್ಟಾರ್ ಆಕರ್ಷಣೆಯಾಗಿದ್ದಾರೆ.

ಆತಿಥೇಯ ರಾಷ್ಟ್ರವಾಗಿ ಭಾರತವು ಎರಡೂ ವಿಭಾಗಗಳಲ್ಲಿ ಹೆಚ್ಚುವರಿ ತಂಡವನ್ನು ಕಣಕ್ಕಿಳಿಸಲು ಅರ್ಹವಾಗಿದೆ ಮತ್ತು ಬೆಸ ಸಂಖ್ಯೆಯ ನಮೂದುಗಳ ಸಂದರ್ಭದಲ್ಲಿ ಮೂರನೇ ತಂಡವನ್ನು ಕಣಕ್ಕಿಳಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಈಗಾಗಲೇ ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಎರಡು ತಂಡಗಳನ್ನು ಪ್ರಕಟಿಸಿದ್ದು, ವಿದಿತ್ ಗುಜರಾತಿ, ನಿಹಾಲ್ ಸರಿನ್, ಪಿ. ಹರಿಕೃಷ್ಣ, ಹದಿಹರೆಯದ ಆರ್. ಪ್ರಗ್ನಾನಂದ ಮತ್ತು ಡಿ. ಗುಕೇಶ್ ಜೊತೆಗೆ ಮಹಿಳಾ ತಾರೆಯರಾದ ಕೋನೇರು ಹಂಪಿ, ಡಿ. ಹರಿಕಾ ಮತ್ತು ಆರ್. ವೈಶಾಲಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. .

ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಭಾರತ ತಂಡಕ್ಕೆ ಮೆಂಟರ್ ಆಗಲಿದ್ದಾರೆ. ಆನಂದ್ ಮತ್ತು ಕೋಚ್ ಜಿಎಂ ಬೋರಿಸ್ ಗೆಲ್‌ಫಾಂಡ್ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಚೆನ್ನೈನಲ್ಲಿ ಭಾರತ್ ಚೆಸ್ ಆಟಗಾರರಿಗಾಗಿ ಪೂರ್ವಸಿದ್ಧತಾ ಶಿಬಿರವನ್ನು ನಡೆಸಲಾಯಿತು.

ಏತನ್ಮಧ್ಯೆ, ಎಐಸಿಎಫ್ ಅಧ್ಯಕ್ಷ ಸಂಜಯ್ ಕಪೂರ್, "ನಮಗೆ ಒಲಿಂಪಿಯಾಡ್ ಪ್ರದಾನ ಮಾಡಿದ ಸಮಯದಿಂದ, ನಾವು ಒಲಂಪಿಕ್ ಧ್ಯೇಯವಾಕ್ಯವನ್ನು 'ವೇಗವಾಗಿ, ಉನ್ನತ, ಬಲಶಾಲಿ' ಎಂದು ಸಾಂಸ್ಥಿಕ ಅಂಶಗಳಿಗೆ ಸಂಬಂಧಿಸಿದಂತೆ ಮನಸ್ಸಿನಲ್ಲಿಟ್ಟುಕೊಂಡು ಏಕ-ಮನಸ್ಸಿನೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ತಿಳಿಸಿದರು.

Story first published: Saturday, May 28, 2022, 18:52 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X