ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

44ನೇ ಚೆಸ್ ಒಲಿಂಪಿಯಾಡ್: ಭಾರತ 'ಚೆಸ್‌ ತವರು', ತಮಿಳುನಾಡು 'ಭಾರತದ ಚೆಸ್ ಪವರ್‌ಹೌಸ್'; ಮೋದಿ

44th Chess Olympiad: PM Narendra Modi Speaks During the Opening Ceremony of Chess Olympiad

ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಕ್ರೀಡೆಗೆ ಇದಕ್ಕಿಂತ ಉತ್ತಮ ಸಮಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 44ನೇ ಫಿಡೆ ಚೆಸ್ ಒಲಿಂಪಿಯಾಡ್ ಉದ್ಘಾಟಿಸಿದ ಪ್ರಧಾನಿ ಮೋದಿ, ಆಟದಲ್ಲಿ ಸೋತವರು ಇಲ್ಲ, ಕೇವಲ ವಿಜೇತರು ಮತ್ತು ಭವಿಷ್ಯದ ವಿಜೇತರು ಇದ್ದಾರೆ ಎಂದು ಒತ್ತಿ ಹೇಳಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಇತರ ಗಣ್ಯರು ಹಾಜರಿದ್ದರು.

ಚೆಸ್‌ ಒಲಿಂಪಿಯಾಡ್ 2022: ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆಚೆಸ್‌ ಒಲಿಂಪಿಯಾಡ್ 2022: ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ

'ವನಕ್ಕಂ' (ಶುಭಾಶಯಗಳ ತಮಿಳು ಪದ) ನೊಂದಿಗೆ ತಮ್ಮ ಭಾಷಣ ಪ್ರಾರಂಭಿಸಿದ ಪ್ರಧಾನಿ, ದೇಶ, ವಿದೇಶದ ಆಟಗಾರರಿಗೆ ಅತ್ಯುತ್ತಮ ಆತಿಥ್ಯ ನೀಡುವ ಭರವಸೆ ನೀಡಿದರು, 'ನಮ್ಮ ಅತಿಥಿಗಳು ದೇವರಂತೆ' ಎಂಬ 'ಅತಿಥಿ ದೇವೋ ಭವ' ಘೋಷಣೆಯನ್ನು ಉಲ್ಲೇಖಿಸಿದರು. ಅಲ್ಲದೆ, ಆತಿಥ್ಯದ ಮಹತ್ವದ ಕುರಿತು ತಮಿಳು ಸಂತ ಕವಿ ತಿರುವಳ್ಳುವರ್ ಅವರ ದ್ವಿಪದಿಯನ್ನು ಪ್ರಧಾನಿ ಉಲ್ಲೇಖಿಸಿದರು.

ಮಹಾಬಲಿಪುರಂನಲ್ಲಿ ಚೆಸ್ ಒಲಿಂಪಿಯಾಡ್ ಸ್ಪರ್ಧೆ

ಮಹಾಬಲಿಪುರಂನಲ್ಲಿ ಚೆಸ್ ಒಲಿಂಪಿಯಾಡ್ ಸ್ಪರ್ಧೆ

ಚೆಸ್ ಒಲಿಂಪಿಯಾಡ್ 2022 ಅನ್ನು ಮಹಾಬಲಿಪುರಂನಲ್ಲಿರುವ ಶೆರಟಾನ್ ಮಹಾಬಲಿಪುರಂ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್ ನಾಲ್ಕು ಪಾಯಿಂಟ್‌ಗಳಲ್ಲಿ ಆಯೋಜಿಸಲಾಗಿದೆ.

ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ ಎಂದು ಹೇಳಿದ ನರೇಂದ್ರ ಮೋದಿ, ಭಾರತ 'ಚೆಸ್‌ನ ತವರು' ಎಂದು ಕರೆದರು ಮತ್ತು ತಮಿಳುನಾಡನ್ನು 'ಭಾರತದ ಚೆಸ್ ಪವರ್‌ಹೌಸ್' ಎಂದು ವಿವರಿಸಿದರು, ಏಕೆಂದರೆ ಅನೇಕ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು ತಮಿಳುನಾಡಿನವರಾಗಿದ್ದರು.

ಒಲಿಂಪಿಯಾಡ್ ಅನ್ನು ಉಕ್ರೇನ್‌ ಮೇಲೆ ಆಕ್ರಮಣದ ನಂತರ ರಷ್ಯಾದಿಂದ ಸ್ಥಳಾಂತರಿಸಿದ ನಂತರ ಮತ್ತು ಓಪನ್ (188) ಮತ್ತು ಮಹಿಳೆಯರ (162) ವಿಭಾಗಗಳಲ್ಲಿ ದಾಖಲೆಯ ಸಂಖ್ಯೆಯ ಪ್ರವೇಶಗಳನ್ನು ಆಕರ್ಷಿಸಿದ ನಂತರ ಭಾರತದಲ್ಲಿ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಆಯೋಜಿಸಲಾಗಿದೆ.

ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಭಾರತಕ್ಕೆ ಹೆಮ್ಮೆ

ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಭಾರತಕ್ಕೆ ಹೆಮ್ಮೆ

ಇನ್ನು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ತಮ್ಮ ಭಾಷಣದಲ್ಲಿ, "ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 20,000ಕ್ಕೂ ಹೆಚ್ಚು ಆಟಗಾರರೊಂದಿಗೆ ಪ್ರಮುಖ ಚೆಸ್ ಸ್ಪರ್ಧೆಯನ್ನು ನಡೆಸಿದ್ದನ್ನು ನೆನಪಿಸಿಕೊಂಡರು. ನಿಮ್ಮ (ನರೇಂದ್ರ ಮೋದಿ) ಉಪಸ್ಥಿತಿಯು ಈ ಟೂರ್ನಿಯ ಘನತೆಯನ್ನು ಹೆಚ್ಚಿಸಿದೆ," ಎಂದು ಸ್ಟಾಲಿನ್ ಹೇಳಿದರು.

ತಮಿಳುನಾಡು ಸರ್ಕಾರವು ಮೂರು ತಿಂಗಳೊಳಗೆ 44ನೇ FIDE ಚೆಸ್ ಒಲಿಂಪಿಯಾಡ್ ಚೆನ್ನೈ ಅನ್ನು ಆಯೋಜಿಸಲು ತೆಗೆದುಕೊಂಡ ಪ್ರಯತ್ನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ಕಾರ್ಯಕ್ರಮದ ಆತಿಥ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಶ್ಲಾಘಿಸಿದರು. ಈವೆಂಟ್‌ನ ಆತಿಥ್ಯವು ಅಂತರಾಷ್ಟ್ರೀಯ ರಂಗದಲ್ಲಿ ತಮಿಳುನಾಡಿನ ಪ್ರೊಫೈಲ್ ಅನ್ನು ಹೆಚ್ಚಿಸುತ್ತದೆ ಎಂದರು.

26 ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳು ತಮಿಳುನಾಡಿನವರು

26 ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳು ತಮಿಳುನಾಡಿನವರು

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಚೆಸ್‌ನ ಬೇರುಗಳನ್ನು ಎತ್ತಿ ತೋರಿಸುತ್ತಾ, ಒಲಿಂಪಿಯಾಡ್‌ನ ಸ್ಥಳವಾದ ಮಹಾಬಲಿಪುರಂನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯ ಮೌಲ್ಯವನ್ನು ಒತ್ತಿ ಹೇಳಿದರು. ಭಾರತದಲ್ಲಿ ಒಟ್ಟು 26 ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳು ತಮಿಳುನಾಡಿನವರು ಎಂದು ಸಿಎಂ ಸ್ಟಾಲಿನ್ ಗಮನಸೆಳೆದರು.

44ನೇ ಫಿಡೆ ಚೆಸ್ ಒಲಿಂಪಿಯಾಡ್‌ನ ಮ್ಯಾಸ್ಕಾಟ್‌ನ ಹೆಸರು 'ತಂಬಿ' ಕುರಿತು ವಿವರಿಸಿದ ಅವರು, ಇದು ಸಹೋದರತ್ವ ಮತ್ತು ಎಲ್ಲರೂ ಒಂದೇ ಕುಟುಂಬ ಎಂದು ಹೇಳಿದರು.

ಚೆಸ್ ಒಲಿಂಪಿಯಾಡ್ ಜ್ಯೋತಿ ಮುಖ್ಯಮಂತ್ರಿಗೆ ಹಸ್ತಾಂತರ

ಚೆಸ್ ಒಲಿಂಪಿಯಾಡ್ ಜ್ಯೋತಿ ಮುಖ್ಯಮಂತ್ರಿಗೆ ಹಸ್ತಾಂತರ

44ನೇ ಫಿಡೆ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಮತ್ತು FIDE ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸಂಪೂರ್ಣ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರ ಆಕರ್ಷಕ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ಲೆಜೆಂಡರಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ಚೆಸ್ ಒಲಿಂಪಿಯಾಡ್ ಜ್ಯೋತಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿದರು, ಅವರು ಅದನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಿದರು.

Story first published: Friday, July 29, 2022, 9:42 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X