ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೂರ್ ಆಫ್ ನೀಲಗಿರೀಸ್: 850 KM ಸೈಕಲ್ ಯಾತ್ರೆ ಕಿರಣ್, ಅವಂತಿ ವಿಜೇತರು

60 cyclists pedal 850+ kms to finish 12th edition of TfN 2019 at Mysuru

ಮೈಸೂರು, ಡಿಸೆಂಬರ್ 16: ಭಾರತದ ಅತಿ ಸುಧೀರ್ಘ ಮತ್ತು ಪ್ರೀತಿಪಾತ್ರವಾದ ಮತ್ತು ರೈಡ್ ಎ ಸೈಕಲ್ ಫೌಂಡೇಷನ್ (ಆರ್‍ಎಸಿ-ಎಫ್)ನ ಪ್ರಮುಖ ಕಾರ್ಯಕ್ರಮವಾದ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್) ಹನ್ನೆರಡನೇ ಆವೃತ್ತಿ ಮೈಸೂರಿನಲ್ಲಿ ಯಶಸ್ವಿಯಾಗಿ ಇಂದು ಸಂಜೆ ಕೊನೆಗೊಂಡಿತು.

ಎಂಟನೇ ದಿನ ಸೈಕಲ್ ಸವಾರರು ಉದಕಮಂಡಲಂ (ಊಟಿ) ನಿಂದ ಪೈಕರ, ನಡುವೆಟ್ಟಂ ಮತ್ತು ಗುಡಲೂರು ಮಾರ್ಗವಾಗಿ 90 ಕಿಲೋಮೀಟರ್ ಸವಾರಿ ಕೈಗೊಂಡು ಮೈಸೂರು ತಲುಪಿದರು. ಟಿಎಫ್‍ಎನ್-2019ರಲ್ಲಿ 60 ಮಂದಿ ಸೈಕಲ್ ಸವಾರರು ಪಶ್ಚಿಮಘಟ್ಟದಲ್ಲಿ ಚಾಚಿರುವ ನೀಲಗಿರೀಸ್ ಜೀವವೈವಿಧ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 850ಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಕ್ರಮಿಸಿದರು.

ಮೈಸೂರಲ್ಲಿ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆಮೈಸೂರಲ್ಲಿ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆ

ಈ ಸೈಕಲ್ ಯಾತ್ರೆ ಯಶಸ್ವಿಯಾಗಿ ಸಮಾಪನಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಆರ್‍ಎಸಿ-ಎಫ್ ಸಹಸಂಸ್ಥಾಪಕ ದೀಪಕ್ ಮಾಜಿಪಾಟೀಲ್, "12ನೇ ಆವೃತ್ತಿಗೆ ಹಲವು ಸವಾಲುಗಳು ಎದುರಾದವು ಹಾಗೂ ಇದನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಇದಕ್ಕೆ ಸವಾರರು, ಸ್ವಯಂಸೇವಕರು ಮತ್ತು ಪ್ರಾಯೋಜಕರ ಬದ್ಧತೆ ಹಾಗೂ ಬೆಂಬಲ ಕಾರಣ. ಪ್ರತಿ ಆವೃತ್ತಿಯಂತೆ 12ನೇ ಆವೃತ್ತಿಯಲ್ಲೂ ಟಿಎಫ್‍ಎನ್‍ಗೆ ಅಚ್ಚರಿದಾಯಕವಾಗಿ ಚಿಕ್ಕಮಗಳೂರು ಮತ್ತು ಹೊಸ ಮಾರ್ಗವನ್ನು ಸೇರಿಸುವ ಮೂಲಕ ಸವಾರರು ಬೇಲೂರು ಹಾಗೂ ಹಳೇಬೀಡು ಮೂಲಕ ಸವಾರಿ ಕೈಗೊಳ್ಳುವ ಅಪೂರ್ವ ಅವಕಾಶ ಸಿಕ್ಕಿತು" ಎಂದು ಹೇಳಿದರು.

ಸೈಕ್ಲಿಂಗ್ ಪ್ರವಾಸೋದ್ಯಮ ಅವಕಾಶ

ಸೈಕ್ಲಿಂಗ್ ಪ್ರವಾಸೋದ್ಯಮ ಅವಕಾಶ

ಒಂದು ತುದಿಯಲ್ಲಿ ಈ ಯಾತ್ರೆಯು ಉತ್ತಮ ಸೈಕ್ಲಿಂಗ್ ಪ್ರವಾಸೋದ್ಯಮ ಅವಕಾಶವನ್ನು ಕಲ್ಪಿಸಿದ್ದು, ಇದರಲ್ಲಿ ವಿಶಿಷ್ಟ ಗಿರಿ ಕಂದಕಗಳು ಯಾತ್ರೆಯ ಪ್ರತಿ ಹಂತದಲ್ಲೂ ಕಂಡುಬಂತು. ಇನ್ನೊಂದೆಡೆ ಕಲ್ಹಟ್ಟಿ ಘಾಟಿಯಂಥ ದೊಡ್ಡ ಪರ್ವತ ಶ್ರೇಣಿಯ ಸೊಬಗನ್ನೂ ಸವಿಯುವುದು ಸಾದ್ಯವಾಯಿತು. ಇದು ಸವಾರರ ಕೆಚ್ಚನ್ನು ಪರೀಕ್ಷೆಗೆ ಗುರಿಪಡಿಸಿತು.

ಕಲ್ಹಟ್ಟಿ ಘಾಟಿಯನ್ನು ವಶಪಡಿಸಿಕೊಳ್ಳುವ ಬದ್ಧತೆಯೊಂದಿಗೆ ಸವಾರರು ಇಲ್ಲಿಗೆ ಆಗಮಿಸಿದ್ದರು. ಶೇಕಡ 80ರಷ್ಟು ಸವಾರರು ಯಶಸ್ವಿಯಾಗಿ ಇದನ್ನು ಏರಿದರು. ಕಿರಣ್ ಕುಮಾರ್ ರಾಜು ಅವರಿಗೆ ಕಿಂಗ್ ಆಫ್ ಕಲ್ಹಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1:18:15.38 ಗಂಟೆಯಲ್ಲಿ ಈ ಘಾಟಿ ಏರಿದರು. ಡಾ.ಅವಂತಿ ಬಿನಿವಾಲೆ ಅವರಿಗೆ ಕ್ವೀನ್ ಆಫ್ ಕಲ್ಹಟ್ಟಿ ಪ್ರಶಸ್ತಿಯನ್ನು 2:20:26.20 ಗಂಟೆಯಲ್ಲಿ ಏರಿದ್ದಕ್ಕಾಗಿ ನೀಡಿ ಗೌರವಿಸಲಾಯಿತು.

ಸ್ಪರ್ಧಾತ್ಮಕ ವಿಭಾಗದಲ್ಲಿ ವಿಜೇತರ ವಿವರ

ಸ್ಪರ್ಧಾತ್ಮಕ ವಿಭಾಗದಲ್ಲಿ ವಿಜೇತರ ವಿವರ

ಸ್ಪರ್ಧಾತ್ಮಕ ವಿಭಾಗದಲ್ಲಿ ವಿಜೇತರ ವಿವರ ಈ ಕೆಳಗಿನಂತಿದೆ:

ಒಟ್ಟಾರೆ :
1) ಕಿರಣ್ ಕುಮಾರ್ ರಾಜು - 1:01:56.88
2) ದೀಪಂಕರ್ ಪಾಲ್ - 1:05:38.85
3) ವೆಂಕಟೇಶ್ವರ ರಾವ್ ನವನಾಸಿ - 1:09:43.77


ಪುರುಷ ವಿಭಾಗದಲ್ಲಿ (45 ವರ್ಷದೊಳಗಿನವರು):
ಕಿರಣ್ ಕುಮಾರ್ ರಾಜು - 1:01:56.88
ದೀಪಂಕರ್ ಪಾಲ್ - 1:05:38.85
ವೆಂಕಟೇಶ್ವರ ರಾವ್ ನವನಾಸಿ - 1:09:43.77

ಮಹಿಳಾ ವಿಭಾಗದಲ್ಲಿ ಅವಂತಿ ವಿಜೇತೆ

ಮಹಿಳಾ ವಿಭಾಗದಲ್ಲಿ ಅವಂತಿ ವಿಜೇತೆ

ಹಿರಿಯರ (45 ವರ್ಷಕ್ಕಿಂತ ಮೇಲ್ಪಟ್ಟವರು) ವಿಭಾಗದಲ್ಲಿ:
ತರುಣ್ ಕುಮಾರ್ - 1:16:39.69
ಮುರಳಿ ರಾಮಕೃಷ್ಣನ್ - 1:22:59.87
ಪ್ರದೀಪ್ ನಾಯರ್ - 1:28:46.82

ಮಹಿಳಾ ವಿಭಾಗದಲ್ಲಿ:
ಅವಂತಿ ಬಿನಿವಾಲೆ - 1:33:04.89
ಧನಶ್ರೀ ಬಾಪತ್ - 1:37:07.87
ಆನ್ ಸುಸಾನ್ ಜಕಾರಿಯಾ - 2:18:15.66

ಟಿಎಫ್‍ಎನ್ ನಿರಂತರವಾಗಿ ಜನಪ್ರಿಯತೆ

ಟಿಎಫ್‍ಎನ್ ನಿರಂತರವಾಗಿ ಜನಪ್ರಿಯತೆ

ಟಿಎಫ್‍ಎನ್ ನಿರಂತರವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದು, ಪ್ರತಿ ಆವೃತ್ತಿ ಕೂಡಾ ಹೊಸ ಸೈಕ್ಲಿಸ್ಟ್ ಗಳಿಗೆ ವಿಶೇಷಣೆ ಎನಿಸಿದೆ. ಅದು ಮಾರ್ಗ, ಗಿರಿ ಕಂದಕ, ಭೌಗೋಳಿಕ ಪ್ರದೇಶ ಮತ್ತಿತರ ಅಂಶಗಳ ವಿಶೇಷಣೆಗಳಿಂದ ಕೂಡಿರುತ್ತದೆ. 12ನೇ ಆವೃತ್ತಿಯಲ್ಲಿ 2ನೇ ದಿನ ಸೈಕಲ್ ಸವಾರಿ ಹಾಸನದಿಂದ ಚಿಕ್ಕಮಗಳೂರಿಗೆ ತೆರಳಿತು. ಇದು ಸವಾರರಿಗೆ ವಿಶಿಷ್ಟ ಮಲೆನಾಡಿನ ಸೊಬಗಿನ ಅಪೂರ್ವ ಅನುಭವವನ್ನು ಉಣಿಸಲಿದೆ. ಟಿಎಫ್‍ಎನ್‍ಗಾಗಿ ಹೊಸ ಮಾರ್ಗವನ್ನು ರೂಪಿಸಲಾಗಿದ್ದು, ಸೈಕ್ಲಿಸ್ಟ್ ಗಳು ಅತ್ಯಪೂರ್ವ ಪ್ರವಾಸಿ ತಾಣಗಳಾದ, ಹೊಯ್ಸಳ ಯುಗದ ಶಿಲ್ಪಕಲೆ ಮತ್ತು ಐತಿಹಾಸಿಕ ಪರಂಪರೆಗೆ ಹೆಸರಾದ ಬೇಲೂರು, ಹಳೇಬೀಡು ಮತ್ತಿತರ ಪ್ರದೇಶಗಳ ಮೂಲಕ ಕ್ರಮಿಸಿದೆ.

ಸಾಮಾಜಿಕ ಕಾರಣಕ್ಕಾಗಿ ನೆರವು

ಸಾಮಾಜಿಕ ಕಾರಣಕ್ಕಾಗಿ ನೆರವು

ಟಿಎಫ್‍ಎನ್‍ನ ಇನ್ನೊಂದು ಪ್ರಮುಖ ಆಯಾಮವೆಂದರೆ, ಸವಾರರು ತಮ್ಮ ಸೈಕಲ್ ತುಳಿಯುವ ಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆ ನೀಡಲಿದ್ದು, ಟಿಎಫ್‍ಎನ್‍ನಲ್ಲಿ ದತ್ತಿ ಕಾರ್ಯಕ್ಕಾಗಿ ಸವಾರಿ ಮಾಡಲಿದ್ದಾರೆ. ಈ ವರ್ಷ ಚಾರಿಟಿ ಸವಾರರು, ಕೆನ್ನೆತ್ ಆ್ಯಂಡರ್‍ಸನ್, ನೇಚರ್ ಸೊಸೈಟಿ ಮತ್ತು ಸೀತಾ ಬತೇಜಾ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತಿತರ ಸಂಘ ಸಂಸ್ಥೆಗಳಿಗೆ ಸೇರಿದವರಾಗಿದ್ದು, ತಮ್ಮ ಆಯಾ ಸಾಮಾಜಿಕ ಕಾರಣಕ್ಕಾಗಿ ನೆರವು ನೀಡಲಿದ್ದಾರೆ.

Story first published: Monday, December 16, 2019, 13:24 [IST]
Other articles published on Dec 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X