ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚೆನ್ನೈ ಕೋಚ್ ವಿರುದ್ಧ 8 ಮಹಿಳಾ ಅಥ್ಲೀಟ್‌ಗಳಿಂದ ಲೈಂಗಿಕ ಕಿರುಕುಳ ದೂರು!

8 women athletes file sexual harassment complaint against Chennai coach P Nagarajan

ಚೆನ್ನೈ: ಚೆನ್ನೈ ಮೂಲದ ಅಥ್ಲೆಟಿಕ್ಸ್ ಕೋಚ್ ಒಬ್ಬರ ವಿರುದ್ಧ 8 ಮಹಿಳಾ ಅಥ್ಲೀಟ್‌ಗಳು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಕಳೆದ ಮೇ ತಿಂಗಳಲ್ಲಿ 19ರ ಹರೆಯದ ರಾಷ್ಟ್ರೀಯ ಮಟ್ಟದ ಓಟಗಾರ್ತಿಯೊಬ್ಬರು ಕೋಚ್ ಪಿ ನಾಗರಾಜನ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಅದರ ಬೆನ್ನಲ್ಲೇ ಇನ್ನೂ ಏಳು ಮಂದಿ ಮಹಿಳಾ ಅಥ್ಲೀಟ್‌ಗಳು ನಾಗರಾಜನ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ.

ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!

ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 59ರ ಹರೆಯದ ರಾಷ್ಟ್ರೀಯ ಕೋಚ್ ಪಿ ನಾಗರಾಜನ್ ವಿರುದ್ಧ 8 ಮಂದಿ ಮಹಿಳಾ ಅಥ್ಲೀಟ್‌ಗಳು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಇದರಲ್ಲಿ ಕೆಲವರು ವೃತ್ತಿ ಬದುಕು ನಿಲ್ಲಿಸಿ ಬಹಳ ವರ್ಷಗಳಾಗಿವೆ. ಅವರು ಹೇಳುವ ಪ್ರಕಾರ ಅವರು ಜೂನಿಯರ್ ಮಟ್ಟದಲ್ಲಿ ನಾಗರಾಜನ್ ಜೊತೆ ತರಬೇತಿ ಪಡೆಯುತ್ತಿದ್ದಾಗ ಕೆಲ ವರ್ಷಗಳ ಹಿಂದೆ ಈ ಕಿರುಕುಳದ ಸಂಗತಿ ನಡೆದಿದೆ.

ವೈಯಕ್ತಿಕ ಕೋಚಿಂಗ್‌ಗೆ ಪ್ರತ್ಯೇಕ ಬರುವಂತೆ ಹೇಳುತ್ತಿದ್ದ

ವೈಯಕ್ತಿಕ ಕೋಚಿಂಗ್‌ಗೆ ಪ್ರತ್ಯೇಕ ಬರುವಂತೆ ಹೇಳುತ್ತಿದ್ದ

ಕಳೆದ ಸುಮಾರು ಮೂವತ್ತು ವರ್ಷಗಳಿಂದ ನಾಗರಾಜನ್‌ಗೆ ರಾಷ್ಟ್ರೀಯ ಮಟ್ಟದ ಪದಕ ವಿಜೇತ ಅಥ್ಲೀಟ್‌ಗಳಿಗೆ ಮಾರ್ಗದರ್ಶನ ನೀಡಲು ಕೋಚ್ ಆಗಿ ನೇಮಿಸಲಾಗಿತ್ತು. ಈ ವೇಳೆ ನಾಗರಾಜನ್ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ನಾಗರಾಜನ್ ವಿರುದ್ಧ ಐಪಿಸಿ ಮತ್ತು ಪೋಸ್ಕೋ ಕಾಯ್ದೆಯಡಿ ದೂರು ದಾಖಲಾಗಿದೆ. ಸಂತ್ರಸ್ತರು ಮ್ಯಾಜಿಸ್ಟ್ರೇಟರಿಗೆ ಹೇಳಿಕೆಗಳನ್ನು ನೀಡಿದ್ದು, ಕಳೆದ ತಿಂಗಳು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದ ಇಂಡಿಯನ್ ಎಕ್ಸ್‌ಪ್ರೆಸ್ ಸಂತ್ರಸ್ತರಲ್ಲಿ ಇಬ್ಬರನ್ನು ಮಾತನಾಡಿಸಿದೆ. ಅವರಿಬ್ಬರೂ ಈಗ ವಯಸ್ಕರು ಅನ್ನೋದು ತಿಳಿದು ಬಂದಿದೆ.
ತಾವು ಟೀನೇಜರ್ ಆಗಿದ್ದಾಗ ಪಿ ನಾಗರಾಜನ್ ಹೇಗೆಲ್ಲ ಲೈಂಗಿಕ ಕಿರುಕುಳ ನೀಡಿದ್ದ ಎನ್ನೋದನ್ನು ಇಬ್ಬರು ಅಂತಾರಾಷ್ಟ್ರೀಯ ಅಥ್ಲೀಟ್‌ಗಳು ವಿವರಿಸಿದ್ದಾರೆ. ಇವರಿಬ್ಬರು ಹೇಳುವ ಪ್ರಕಾರ, ಅವರು ತರಬೇತಿ ಪಡೆಯುತ್ತಿದ್ದ ವೇಳೆ, ವೈಯಕ್ತಿಕ ಕೋಚಿಂಗ್‌ಗೆ ಪ್ರತ್ಯೇಕ ಬರುವಂತೆ ಹೇಳುತ್ತಿದ್ದನಂತೆ. ಎಲ್ಲರ ಜೊತೆ ತರಬೇತಿ ಮಾಡುತ್ತಿದ್ದವರನ್ನು ಪ್ರತ್ಯೇಕ ಇರಿಸಿಕೊಳ್ಳುತ್ತಿದ್ದನಂತೆ. ನೋವು ನಿವಾರಣೆಗಾಗಿ ಮಸಾಜ್ ಮಾಡುವ ವೇಳೆ ಸುತ್ತಮುತ್ತ ಯಾರೂ ಇಲ್ಲದಾಗ ಗುಪ್ತಾಂಗಗಳನ್ನು ಮುಟ್ಟುತ್ತಿದ್ದನಂತೆ. ಈ ಸಂಗತಿಗಳನ್ನೆಲ್ಲ ಸಂತ್ರಸ್ತ ಇಬ್ಬರು ಅಥ್ಲೀಟ್‌ಗಳು ಹೇಳಿಕೊಂಡಿದ್ದಾರೆ.

ಕೆಲವು ಹದಿಹರೆಯದ ಹುಡುಗಿಯರು ಆತ್ಮಹತ್ಯೆಗೆ ಯತ್ನಿಸಿದ್ದರು

ಕೆಲವು ಹದಿಹರೆಯದ ಹುಡುಗಿಯರು ಆತ್ಮಹತ್ಯೆಗೆ ಯತ್ನಿಸಿದ್ದರು

ತನ್ನ ಕಾಲದಲ್ಲಿ ರಾಷ್ಟ್ರೀಯ ಕಿರಿಯ ದಾಖಲೆ ಹೊಂದಿದ್ದ ಅಥ್ಲೀಟ್‌ ಒಬ್ಬರು ಮಾತನಾಡಿ, ಒಬ್ಬಳು ಹುಡುಗಿ ಅಂತರ್ಮುಖಿಯಾಗಿದ್ದರಿಂದ ಅವಳು ಆ ಕೋಚ್ ಜೊತೆ ಮಾತನಾಡಲು ಹೆದರುತ್ತಿದ್ದಳಂತೆ. ಇನ್ನೂ ಕೆಲ ಟೀನೇಜರ್ ಅಥ್ಲೀಟ್‌ಗಳು ಮುಜುಗರ ಮತ್ತು ಖಿನ್ನತೆಯಿಂದ ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಈಗ 30ರ ಹರೆಯದ ಬಳಿಕ ಆ ಅಂತರ್ಮುಖಿ ಹೆಂಗಸು ವಯಸ್ಸಾದ ಗಂಡಸರ ಬಗ್ಗೆ ನಂಬಿಕೆಯೇ ಕಳೆದುಕೊಂಡಿದ್ದಾರೆ. ಕೋಚ್ ನಡೆಯಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಹೇಳಿದ್ದಾರೆ. ಯಾರಾದರೂ ಮಹಿಳಾ ಅಥ್ಲೀಟ್‌ಗಳು ಮಸಾಜ್ ಸೆಶನ್‌ನಿಂದ ಬೇಗ ಹೊರಡಲು ಪ್ರಯತ್ನಿಸಿದರೆ, ಮರುದಿನ ಅವರು ಕೋಚ್‌ನಿಂದ ಇನ್ನೂ ಮೂರು ನಾಲ್ಕು ದಿನ ಹೆಚ್ಚಿನ ಮಟ್ಟಿನ ಲೈಂಗಿಕ ಕಿರುಕುಳ ಅನುಭವಿಸಬೇಕಾಗಿ ಬರುತ್ತಿತ್ತು. ಅಷ್ಟೇ ಅಲ್ಲ, ಕ್ರೀಡಾ ಅಕಾಡೆಮಿಯಲ್ಲಿ ಅಂಥ ಅಥ್ಲೀಟ್‌ಗಳ ಚಾರಿತ್ರೆ ವಧೆ ಮಾಡುವಂತೆಯೂ ಆ ಕೋಚ್ ಬೆದರಿಸುತ್ತಿದ್ದ ಎಂದು ಸಂತ್ರಸ್ತ ಅಥ್ಲೀಟ್‌ಗಳು ದೂರಿದ್ದಾರೆ.

'ಅಭ್ಯಾಸ ಮುಗಿದ ಬಳಿಕ ನಿಲ್ಲು, ಹೆಚ್ಚು ಅಭ್ಯಾಸ ಮಾಡಬಹುದು'

'ಅಭ್ಯಾಸ ಮುಗಿದ ಬಳಿಕ ನಿಲ್ಲು, ಹೆಚ್ಚು ಅಭ್ಯಾಸ ಮಾಡಬಹುದು'

"ನಾನು ಅಂಡರ್-16 ರಾಷ್ಟ್ರೀಯ ದಾಖಲೆ ಮುರಿದಿದ್ದೆ. ಲೈಂಗಿಕ ಕಿರುಕುಳ ಆರಂಭವಾಗಿದ್ದೇ ಅಲ್ಲಿಂದ. 'ನೀನು ಸಾಮಾನ್ಯ ಅಭ್ಯಾಸ ಮುಗಿದ ಬಳಿಕವೂ ಹೆಚ್ಚು ಸಮಯ ಇಲ್ಲೇ ನಿಲ್ಲಬೇಕಾಗುತ್ತದೆ. ಆಗ ನೀನು ಇನ್ನೂ ಹೆಚ್ಚು ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ' ಎಂದು ಆತ ಹೇಳುತ್ತಿದ್ದ. ನನಗೆ ಮೊಣಕಾಲು ನೋವು ಆಗಿದ್ದರೆ ಆತ 'ನಿನ್ನ ನೋವು ನಿವಾರಿಸುತ್ತೇನೆ' ಎಂದು ಬರುತ್ತಿದ್ದ. ಬಂದು ಮೊಣಕಾಲಿಗೆ ಮಸಾಜ್ ಮಾಡುವ ನೆಪದಲ್ಲಿ ಗುಪ್ತಾಂಗಗಳನ್ನು ಮುಟ್ಟುತ್ತಿದ್ದ. ಆಗ ನನಗೆ ನಿಜಕ್ಕೂ ಹಿಂಸೆ ಅನ್ನಿಸುತ್ತಿತ್ತು. ಈ ಬಗ್ಗೆ ನನ್ನ ತಾಯಿಗೆ ಹೇಳಿದರೆ ಅವಳಿಗೂ ತೊಂದರೆಯಾಗಬಹುದು ನಾನು ಹೇಳಲಿಲ್ಲ. ಮೊದಲ ಬಾರಿಗೆ ನನ್ನ ಮೇಲೆ ಲೈಂಗಿಕ ಕಿರುಕುಳ ಆದಾಗ ನನಗೆ 15 ವರ್ಷವಾಗಿತ್ತು," ಎಂದು ನಾಗರಾಜನ್ ಜೊತೆ ಸುಮಾರು 10 ವರ್ಷಗಳ ಕಾಲ ತರಬೇತಿ ಪಡೆದಿದ್ದ ಅಥ್ಲೀಟ್‌ ಒಬ್ಬರು ದೂರಿದ್ದಾರೆ. ಈ ಅಥ್ಲೀಟ್‌ ಪಿ ನಾಗರಾಜನ್ ಅಕಾಡೆಮಿಯಲ್ಲಿ ಕೋಚಿಂಗ್‌ಗೆ ಸೇರಿದಾಗ ಆಕೆಗೆ 10 ವರ್ಷ ವಯಸ್ಸು. ಆಕೆ ಕೋಚಿಂಗ್‌ಗೆ ಸೇರಿ ಕೆಲ ವರ್ಷಗಳ ಕಾಲ ಲೈಂಗಿಕ ಕಿರುಕುಳ ಇರಲಿಲ್ಲ. ಆದರೆ ಆ ಬಳಿಕ ಆರಂಭವಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಈಕೆ ಕಾಮುಕ ಕೋಚ್‌ನ ಕಿರುಕುಳದಿಂದ ಹಿಂಸೆ ಅನುಭವಿಸಿದ್ದರಂತೆ.

'ನಾನು ತಂದೆಯಂತೆ, ತೊಡೆಯ ಮೇಲೆ ಕೂತುಕೊ' ಹೇಳುತ್ತಿದ್ದ

'ನಾನು ತಂದೆಯಂತೆ, ತೊಡೆಯ ಮೇಲೆ ಕೂತುಕೊ' ಹೇಳುತ್ತಿದ್ದ

ದೂರಿತ್ತಿರುವ ಅಥ್ಲೀಟ್‌ಗೆ ಆಗ ಕೋಚ್‌ ವರ್ತನೆಗೆ ಬೇಡ ಅಂತ ಹೇಳೋದು ಹೇಗೆಂದೇ ಗೊತ್ತಿರಲಿಲ್ಲ ಎಂದಿದ್ದಾರೆ. ಯಾಕೆಂದರೆ ಪುಟ್ಟ ಹುಡುಗಿಯಾಗಿದ್ದ ಈಕೆಗೆ ಕೋಚ್ ಎಂದರೆ ಭಯವಿತ್ತಂತೆ. ಬಹಳಷ್ಟು ಅಥ್ಲೀಟ್‌ಗಳಿಗೆ ಆತ ಕೋಚಿಂಗ್ ನೀಡಿ ಬೆಳೆಸಿದ್ದರಿಂದ ಆತನಿಗೆ ಹೆಸರೂ ಇತ್ತು. ಅಲ್ಲದೆ ತಾನೂ ಸಾಧಿಸಬೇಕು ಅನ್ನೋ ಕಾರಣಕ್ಕೆ ಅನಿವಾರ್ಯವಾಗಿ ಆತನ ಕಿರುಕುಳಗಳನ್ನು ಸಹಿಸಿಕೊಳ್ಳಬೇಕಾಗಿ ಬಂದಿತ್ತು. ಅಭ್ಯಾಸ ನಡೆಸುತ್ತಿದ್ದಾಗ 'ನಾನು ನಿನಗೆ ಸ್ಟ್ರೆಚ್ ಮಾಡಲು ಸಹಾಯ ಮಾಡ್ತೇನೆ' ಎಂದು ಬಂದು ನನ್ನ ಅಂಗಾಂಗಗಳನ್ನು ಮುಟ್ಟುತ್ತಿದ್ದ. ಆತ ನನ್ನನ್ನು ಆತನ ತೊಡೆಯ ಮೇಲೆ ಕುಳಿಕೊಳ್ಳುವಂತೆ ಮಾಡುತ್ತಿದ್ದ. ಆಗ, 'ನಾನು ಒಬ್ಬ ತಂದೆಯಂತೆ' ಎಂದು ಹೇಳುತ್ತಿದ್ದ. ಆ ವಯಸ್ಸಿನಲ್ಲಿ ಆತನ ದುರ್ವರ್ತನೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ನನಗೆ ಗೊತ್ತಿರಲಿಲ್ಲ. ಈಗಾದರೆ ಮಕ್ಕಳಿಗೆ 'ಇದು ಒಳ್ಳೆಯ ಸ್ಪರ್ಶ', 'ಇದು ದುರುದ್ದೇಶದ ಸ್ಪರ್ಶ' ಎಂದು ಹೇಳಿಕೊಡಲಾಗುತ್ತಿದೆ. ಆದರೆ ಆಗ ನಮಗೆ ಅದರ ಬಗ್ಗೆ ಅರಿವಿರಲಿಲ್ಲ. ಕೋಚಿಂಗ್ ತುಂಬಾ ಕಿರಿಕಿರಿ ಆಗುತ್ತಿದ್ದರಿಂದ ನಾನು ಅವಧಿ ಮುಗಿಯುತ್ತಲೇ ಮೈದಾನದಿಂದ ಹೊರಗೆ ಓಡುತ್ತಿದ್ದೆ. ಆತನಿಗೆ ತಿರುಗಿ ಮಾತನಾಡಲೇ ನಾನು ಭಯ ಪಡುತ್ತಿದ್ದೆ ಎಂದು ಅಥ್ಲೀಟ್‌ ವಿವರಿಸಿದ್ದಾರೆ.

Story first published: Wednesday, September 8, 2021, 14:28 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X