ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅತಿ ಹಿರಿಯ ಗೇಮಿಂಗ್ ಯೂಟ್ಯೂಬರ್: 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ಗೇಮರ್ ಅಜ್ಜಿ

90-year-old Japanese Woman With Guinness Record For Being Oldest Gaming Youtuber

ಇತ್ತೀಚೆಗೆ ಕ್ರೀಡಾಂಗಣದಲ್ಲಿನ ಆಟಕ್ಕಿಂತ ಹೆಚ್ಚಾಗಿ ಆನ್‌ಲೈನ್ ಗೇಮ್‌ಗಳು ಮೊಬೈಲ್ ಗೇಮ್‌ಗಳೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ತಾಂತ್ರಿಕವಾಗಿ ಸಾಕಷ್ಟು ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ವಿಡಿಯೋ ಗೇಮ್‌ಗಳಲ್ಲೂ ಕ್ರಾಂತಿಕಾರಕ ಬೆಳವಣಿಗೆಗಳು ಆಗುತ್ತಿದೆ. ಯುವ ಜನತೆ ಈ ಗೇಮಿಂಗ್ ಲೋಕವನ್ನು ಅದಾಗಲೇ ಬಿಗಿದಪ್ಪಿಕೊಂಡಿದೆ. ಆದರೆ ಈ ಗೇಮಿಂಗ್ ಲೋಕದಲ್ಲಿ 90 ಹರೆಯದ ಅಜ್ಜಿಯೊಬ್ಬರು ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ.

ನಿಜಕ್ಕೂ ಇದು ನಂಬಲು ಕಷ್ಟವಾಗುವಂತಾ ಸುದ್ದಿ. ಆದರೆ ಇದು ನಿಜ. 90ನೇ ವಯಸ್ಸಿನಲ್ಲಿರುವ ಜಪಾನ್‌ನ ಈ ಅಜ್ಜಿಯ ಹೆಸರು ಹಮಕೋ ಮರಿ. ವಿಡಿಯೋ ಗೇಮ್‌ ಮೂಲಕ ಖ್ಯಾತಿಯನ್ನು ಪಡೆದಿರುವ ಇವರು ಗೇಮರ್ ಅಜ್ಜಿ ಅಂದೇ ಇವರು ಹೆಸರುವಾಸಿಯಾಗಿದ್ದಾರೆ. ಈಗ ಈ ಅಜ್ಜಿ ಅತೀ ಹಿರಿಯ ಯೂಟ್ಯೂಬ್ ಗೇಮರ್ ಎಂಬ ಗಿನ್ನಿಸ್ ದಾಖಲೆಗೆ ಜಪಾನ್‌ನ ಈ ಅಜ್ಜಿ ಪಾತ್ರರಾಗಿದ್ದಾರೆ.

ಕಿಂಗ್‌ ಕೋಹ್ಲಿಯನ್ನು ಅತಿ ಹೆಚ್ಚು ಔಟ್‌ ಮಾಡಿದ ಐವರು ಬೌಲರ್‌ಗಳು ಇವರು!ಕಿಂಗ್‌ ಕೋಹ್ಲಿಯನ್ನು ಅತಿ ಹೆಚ್ಚು ಔಟ್‌ ಮಾಡಿದ ಐವರು ಬೌಲರ್‌ಗಳು ಇವರು!

ವಿಡಿಯೋ ಗೇಮ್‌ ಲೋಕದಲ್ಲಿ ಸಂಚಲನ ಮೂಡಿಸಿರುವ ಪಬ್‌ಜಿ ಸೇರಿದಂತೆ ಫಿಫಾ, ಸಿಒಡಿ ಸೇರಿದಂತೆ ಅನೇಕ ವಿಡೊಯೋ ಗೇಮ್‌ಗಳನ್ನು ನಿರಂತರವಾಗಿ ಆಡುವ ಅಭ್ಯಾಸವನ್ನಿಟ್ಟುಕೊಂಡಿದ್ದಾರೆ. ಇವರ ಈ ದಿನಕ್ಕೆ ಹಲವಾರು ಗಂಟೆಗಳನ್ನು ಇವರು ವಿಡಿಯೋ ಗೇಮ್‌ಗಾಗಿ ಮೀಸಲಿಡುತ್ತಿದ್ದಾರಂತೆ.

ಯೂಟ್ಯೂಬ್‌ನಲ್ಲಿ ಹಮಕೋ ಮರಿ 2014ರಿಂದ ತಮ್ಮ ಸ್ವಂತ ಚಾನೆಲ್ ಒಂದನ್ನು ಹೊಂದಿದ್ದಾರೆ. ಕನಿಷ್ಟ ನಾಲ್ಕು ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರತೀ ತಿಂಗಳು ಹಂಚಿಕೊಂಡು ಬರುತ್ತಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹಿರಿಯ ಯುಟ್ಯೂಬ್ ಗೇಮರ್ ಎಂಬ ಕಾರಣಕ್ಕೆ ಗಿನ್ನಿಸ್ ಬುಕ್‌ ಆಫ್ ರೆಕಾರ್ಡ್ ಈ ಅಜ್ಜಿಯನ್ನು ತನ್ನ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ಫೆಬ್ರವರಿ 18, 1930ರಲ್ಲಿ ಹುಟ್ಟಿದ ಈ ಅಜ್ಜಿ ತಮ್ಮ 39ನೇ ವಯಸ್ಸಿನಿಂದ ಗೇಮಿಂಗ್ ಚಟವನ್ನು ಅಂಟಿಸಿಕೊಂಡಿದ್ದರಂತೆ. 1981ರ ವೇಳೆಗೆ ಇವರು ವಿಡಿಯೋ ಗೇಮ್‌ ಲೋಕದ ತಾರೆ ಎನಿಸಿಕೊಂಡಿದ್ದರು. ಮುಂದೆ ಇದೇ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದ ಈಕೆ ಯುಟ್ಯೂಬ್ ಚಾನೆಲ್ ಮೂಲಕ ಮತ್ತಚ್ಟು ಖ್ಯಾತರಾಗಿದ್ದಾರೆ. ಸದ್ಯ ಈ ಅಜ್ಜಿಯ ಯುಟ್ಯೂಬ್ ಚಾನೆಲ್‌ಗೆ 2.78 ಲಕ್ಷದಷ್ಟು ಚಂದಾದಾರರಿದ್ದಾರೆ.

Story first published: Thursday, May 21, 2020, 21:27 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X