ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅರ್ಜುನ ಪ್ರಶಸ್ತಿಗೆ ಬೆಂಗಳೂರಿನ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌

ನವದೆಹಲಿ, ಮೇ 03 : ಭಾರತದ ಗಾಲ್ಫ್‌ ಆಟಗಾರ್ತಿ ಬೆಂಗಳೂರಿನ ಅದಿತಿ ಅಶೋಕ್‌ ಮತ್ತು ಎಸ್.ಎಸ್‌.ಪಿ ಚೌರಾಸಿಯ ಅವರನ್ನು ಅರ್ಜುನ ಪ್ರಶಸ್ತಿಗಾಗಿ ಭಾರತೀಯ ಗಾಲ್ಫ್‌ ಯೂನಿಯನ್‌ ಶಿಫಾರಸು ಮಾಡಿದೆ.

ಇವರಿಬ್ಬರೂ ಈಚೆಗೆ ನಡೆದ ಹೀರೊ ಇಂಡಿಯನ್‌ ಮುಕ್ತ ಚಾಂಪಿಯನ್ ಷಿಪ್ ನ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದಿದ್ದರು. ಕೋಚ್ ವಿಜಯ ದಿವೇಚಾ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗಾಗಿ ಮತ್ತು ಮುಖೇಶ್ ಕುಮಾರ್ ಅವರನ್ನು ಜೀವಮಾನ ಶ್ರೇಷ್ಠ ಪ್ರಶಸ್ತಿಗಾಗಿ ಗಾಲ್ಫ್‌ ಯೂನಿಯನ್‌ ಶಿಫಾರಸು ಮಾಡಿದೆ.[ರಿಯೋದಲ್ಲಿ ಬೆಂಗಳೂರು ಹುಡ್ಗಿ ಅದಿತಿ ಪದಕ ಬೇಟೆ]

Aditi Ashok, SSP Chawrasia recommended for Arjuna award by Indian Golf Union

ಇನ್ನು ಭಾರತೀಯ ಮಹಿಳಾ ಫುಟ್‌ಬಾಲ್‌ನ ದಂತಕತೆ ಒಯಿನಮ್ ಬೆಂಬೆಮ್ ದೇವಿ, ಜೆಜೆ ಲಾಲ್‌ ಪೆಖ್ಲುವಾ ಮತ್ತು ಗುರ್ ಪ್ರೀತ್ ಸಂಧು ಇವರ ಹೆಸರನ್ನು ಅರ್ಜುನ ಪ್ರಶಸ್ತಿಗಾಗಿ ಭಾರತ ಫುಟ್‌ಬಾಲ್ ಫೆಡರೇಷನ್ ಶಿಫಾರಸು ಮಾಡಿದೆ.

ಮಣಿಪುರದ ಇಂಫಾಲದವರಾದ 36ರ ಹರಯದ ಬೆಂಬೆಮ್ ದೇವಿ ಕಳೆದ ವರ್ಷ ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದ ನಂತರ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ಭಾರತದ ಯುವ ಗೋಲ್‌ ಕೀಪರ್ ಗಳ ಸಾಲಿನಲ್ಲಿ ಮಿಂಚು ತ್ತಿರುವ ಗುರ್ ಪ್ರೀತ್ ಯೂರೋಪ್‌ನಲ್ಲಿ ಹೋದ ವರ್ಷ ನಡೆದ ಟಾಪ್‌ ಫ್ಲೈಟ್ ಫುಟ್‌ ಬಾಲ್‌ ಟೂರ್ನಿಯಲ್ಲಿ ಗಮ ನಾರ್ಹ ಪ್ರದರ್ಶನ ನೀಡಿದ್ದರು. ಕಳೆದ ಬಾರಿ ಎಐಎಫ್ ಎಫ್‌ ವರ್ಷ ದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದ ಜೆಜೆ, ರಾಷ್ಟ್ರೀಯ ತಂಡದಲ್ಲಿದ್ದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X