ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2019ರ TCS ವಿಶ್ವ 10ಕೆ ಬೆಂಗಳೂರು ಓಟದಲ್ಲಿ ಗೆದ್ದವರು ಯಾರು?

Andamlak Belihu and Agnes Tirop triumphs at the TCS World 10K Bengaluru

ಬೆಂಗಳೂರು, ಮೇ 19: ಇಥಿಯೋಪಿಯಾದ ಆನ್ದಮ್ಲಾಕ್‌ ಬೆಲಿಹು ಮತ್ತು ಕೀನ್ಯಾದ ಆಗ್ನೆಸ್‌ ಟಿರೊಪ್‌, 2019ರ ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.

ಏಳು ತಿಂಗಳ ಹಿಂದಷ್ಟೇ ಡೆಲ್ಲಿ ಹಾಫ್‌ ಮ್ಯಾರಥಾನ್‌ ಗೆದ್ದಿದ್ದ ಆನ್ದಮ್ಲಾಕ್‌ ಬೆಲಿಹು, 26 ಡಿ. ತಾಪಮಾನ ಹೊಂದಿದ್ದ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ 27 ನಿಮಿಷ, 56 ಸೆಕೆಂಡ್‌ಗಳಲ್ಲಿ ಐಎಎಎಫ್‌ ಗೋಲ್ಡ್‌ ಲೇಬಲ್‌ ರೋಡ್‌ ರೇಸ್‌ ಆಗಿರುವ ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು ಓಟವನ್ನು ಪೂರೈಸಿ ಪುರುಷರ ಎಲೈಟ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಭಾರತದ ಈ ಚಾಂಪಿಯನ್‌ ಸ್ಪ್ರಿಂಟರ್‌ ಸಲಿಂಗಿಯಂತೆ!ಭಾರತದ ಈ ಚಾಂಪಿಯನ್‌ ಸ್ಪ್ರಿಂಟರ್‌ ಸಲಿಂಗಿಯಂತೆ!

ಅವರಿಗೆ ದಿಟ್ಟ ಸವಾಲೊಡ್ಡಿದ ಉಗಾಂಡದ ರನ್ನರ್‌ ಮಾಂದೆ ಬುಶೆನ್ಡಿಚ್‌ 28 ನಿಮಿಷ, 03 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ಇಥಿಯೋಪಿಯಾದ ಮತ್ತೊಬ್ಬ ಓಟಗಾರ ಬಿರ್ಹಾನು ಲೆಗೆಸೆ (28 ನಿ., 23 ಸೆ.) ತೃತೀಯ ಸ್ಥಾನಿಯಾಗಿ ಗುರಿ ಮುಟ್ಟಿದರು.

"ಅತ್ಯುತ್ತಮ ಓಟಗಾರರನ್ನು ಒಳಗೊಂಡಿದ್ದ ಈ ರೇಸ್‌ನಲ್ಲಿ ಉತ್ತಮ ವೇಗದೊಂದಿಗೆ ಗುರಿ ಮುಟ್ಟುವುದನ್ನು ಎದುರು ನೋಡಿದ್ದೆ. ಆದರೂ, ಇದಕ್ಕಿಂತಲೂ ವೇಗವಾಗಿ ಗುರಿ ಮುಟ್ಟುವುದು ನನ್ನ ಗುರಿಯಾಗಿತ್ತು,'' ಎಂದು ರೆಸ್‌ ಬಳಿಕ ಮಾತನಾಡಿದ ಬೆಲಿಹು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ ಕಾಮೆಂಟರಿಗೆ ಭಾರತದಿಂದ ಮೂವರು ಮಾತ್ರ!ಐಸಿಸಿ ಏಕದಿನ ವಿಶ್ವಕಪ್‌ ಕಾಮೆಂಟರಿಗೆ ಭಾರತದಿಂದ ಮೂವರು ಮಾತ್ರ!

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಆಗ್ನೆಸ್‌ ಟಿರೊಪ್‌ ತಮ್ಮ ಚಾಂಪಿಯನ್‌ ಪಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಗೆದ್ದ ತೆಗೆದುಕೊಂಡ ಸಮಯಕ್ಕಿಂತಲೂ 2 ನಿಮಿಷ ತಡವಾಗಿ ಗುರಿ ಮುಟ್ಟಿದರೂ ಆಗ್ನೆಸ್‌ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. 2017ರ ಐಎಎಎಫ್‌ ವಿಶ್ವ ಚಾಂಪಿಯನ್‌ಷಿಪ್ಸ್‌ನ 10000 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ಅನುಭವ ಹೊಂದಿರುವ ಆಗ್ನೆಸ್‌, 33 ನಿಮಿಷ, 55 ಸೆಕೆಂಡ್‌ಗಳಲ್ಲಿ ಟಿಸಿಎಸ್‌ ವಿಶ್ವ 10ಕೆ 2019ರ ಬೆಂಗಳೂರು ಓಟವನ್ನು ಪೂರೈಸಿದರು. ಈ ಮೂಲಕ 12 ವರ್ಷಗಳ ಬೆಂಗಳೂರು 10ಕೆ ಓಟದ ಇತಿಹಾಸದಲ್ಲಿ ಮಹಿಳಾ ಎಲೈಟ್‌ ವಿಭಾಗದಲ್ಲಿ ಸತತ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎನಿಸಿದರು.

ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

ಸುಮಾರು ಒಂದೂವರೆ ಕೋಟಿ ರೂ. ಬಹುಮಾನ ಮೊತ್ತ ಹೊಂದಿರುವ ಬೆಂಗಳೂರು 10ಕೆ ಓಟದಲ್ಲಿ ಎಲೈಟ್‌ ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್ಸ್‌ 18.29 ಲಕ್ಷ್ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ಬಾರಿಯ ಒಟದಲ್ಲಿ ನೂತನ ದಾಖಲೆ ಎಂಬಂತೆ ವಿವಿಧ ರೇಸ್‌ಗಳಲ್ಲಿಒಟ್ಟಾರೆ 25 ಸಾವಿರಕ್ಕೂ ಅಧಿಕ ಓಟಗಾರರು ಪಾಲ್ಗೊಂಡಿದ್ದರು

ಪುರುಷರ ಎಲೈಟ್‌ 10ಕೆ ಫಲಿತಾಂಶ


1. ಆನ್ದಮ್ಲಾಕ್‌ ಬೆಲಿಹು (ಇಥಿಯೋಪಿಯಾ) - 27:56
2. ಮಾಂದೆ ಬುಶೆನ್ಡಿಚ್‌ (ಉಗಾಂಡ) - 28:03
3. ಬಿಹ್ರಾನು ಲೆಗೆಸೆ (ಇಥಿಯೋಪಿಯಾ) - 28:23
4. ಜೆಫ್ರೀ ಕೊಯೆಚ್‌ (ಕೀನ್ಯಾ) - 28:27
5. ಮ್ಯಾಥ್ಯೂ ಕಿಮೆಲಿ (ಕೀನ್ಯಾ) - 28:36

ಮಹಿಳೆಯರ ಎಲೈಟ್‌ 10ಕೆ ಫಲಿತಾಂಶ

1. ಆಗ್ನೆಸ್‌ ಟಿರೊಪ್‌ (ಕೀನ್ಯಾ) - 33:55
2. ಸೆನ್ಬೆರೆ ಟೆಫೆರಿ (ಇಥಿಯೋಪಿಯಾ) - 33:55
3. ಲೆಟ್ಸೆನ್ಬೆಟ್‌ ಗಿಡೀ (ಇಥಿಯೋಪಿಯಾ) - 33:55
4. ನೆತ್ಸಾನೆಟ್‌ ಗುಡೆಟಾ (ಇಥಿಯೋಪಿಯಾ) - 33:56
5. ಡೆರಾ ಡಿಡಾ (ಇಥಿಯೋಪಿಯಾ) - 33:57

ಭಾರತದ ಪುರುಷರ 10ಕೆ ಫಲಿತಾಂಶ

1. ಕರಣ್‌ ಸಿಂಗ್‌ (ಸಮಗ್ರ 11) - 29:55
2. ಲಕ್ಷ್ಮಣ್‌ ಗೋವಿಂದನ್‌ (ಸಮಗ್ರ 12) - 30:02
3. ಅವಿನಾಷ್‌ ಮುಕುಂದ್‌ ಸಾಬ್ಲೆ (ಸಮಗ್ರ 13) - 30:36
4. ಶ್ರೀನಿ ಬೂಗತ (ಸಮಗ್ರ 14) - 30:47
5. ದಿನೇಶ್‌ (ಸಮಗ್ರ 15) - 33:57

ಭಾರತದ ಮಹಿಳೆಯರ 10ಕೆ ಫಲಿತಾಂಶ

1. ಸಂಜೀವಿನಿ ಜಾಧವ್‌ (ಸಮಗ್ರ 10) - 35:10
2. ಪಾರುಲ್‌ ಚೌಧರಿ (ಸಮಗ್ರ 11) - 35:36
3. ಚಿಂತಾ ಯಾದವ್‌ (ಸಮಗ್ರ 13) - 36:34
4. ಕಿರಣ್‌ (ಸಮಗ್ರ 14) - 36:50
5. ಮಂಜು ಯಾದವ್‌ (ಸಮಗ್ರ 15) - 37:11

Story first published: Sunday, May 19, 2019, 16:25 [IST]
Other articles published on May 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X